ಬೇಸಿಗೆ ರಜೆ ಮುಗಿದು ಈಗ ಎಲ್ಲಾ ಮಕ್ಕಳಿಗೂ ಶಾಲೆ ಪ್ರಾರಂಭವಾಗಿದೆ. ಮಕ್ಕಳನ್ನು ಇನ್ನು ಸ್ವಲ್ಪ ದಿನಕ್ಕೆ ಟ್ಯೂಷನ್, ಸ್ಪೆಷಲ್ ಕ್ಲಾಸ್ ಅಂತ ಹುಡುಕಾಡುವ ಅಪ್ಪ ಅಮ್ಮಂದಿರ ಕಷ್ಟ ಹೇಳೋಕೆ ಆಗೋದಿಲ್ಲ ಅಲ್ವಾ.
ಇನ್ನು ಪ್ರತಿ ಮಕ್ಕಳು ಒಂದೇ ರೀತಿ ಇರೋದಿಲ್ಲ, ಕೆಲವರು ಚುರುಕಾಗಿರುತ್ತಾರೆ, ಮತ್ತೆ ಕೆಲವು ಮಕ್ಕಳು ನಿಧಾನವಾಗಿ ಕಲಿತಾರೆ. ಹಾಗಂತ ಅವರು ದಡ್ಡರೇನಲ್ಲ ಅಲ್ವಾ? ಅವರ ಆಸಕ್ತಿಗೆ ಅನುಗುಣವಾಗಿ ಪಠ್ಯ ಕಲಿಸೋದು ತುಂಬಾ ಮುಖ್ಯವಾಗುತ್ತದೆ. ಈಗಾಗಲೇ ಮೊಬೈಲ್ ಮಕ್ಕಳ ಮೆದುಳನ್ನು ಕಸಿದುಕೊಂಡಿದೆ. ಮಕ್ಕಳನ್ನು ಆಲಸಿಗಳಂತೆ, ಕ್ರಿಯಾತ್ಮಕತೆ ಇಲ್ಲದವರಂತೆ ಮಾಡಿಬಿಟ್ಟಿದೆ.
ನಿಮ್ಮ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಿಸಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ
• ಮಕ್ಕಳೊಂದಿಗೆ ಓದಲು ನೀವು ಕುಳಿತುಕೊಳ್ಳಿ.
• ಪರೀಕ್ಷೆಯ ಅಂಕೆಗಳಿಗೆ ಆದ್ಯತೆ ನೀಡಬೇಡಿ.
• ಕ್ರಿಯೇಟಿವ್ ಆಗಿ ಕಲಿಸಿಕೊಡಿ.
• ಒಂದು ವೇಳಾಪಟ್ಟಿ ರೂಪಿಸಿಕೊಡಿ.
• ಮಗುವಿನ ಕಲಿಕೆಯ ಸಾಮರ್ಥ್ಯ ಅರ್ಥಮಾಡಿಕೊಳ್ಳಿ.
• ಕೆಲವು ನಿಮಿಷಗಳಿಗೊಮ್ಮೆ ಬ್ರೇಕ್ ಕೊಡಿ.
• ಏಟು ಕೊಡದೆ ಕಲಿಸಲು ಪ್ರಯತ್ನಿಸಿ.
• ಆಟದ ಮೂಲಕ ಪಾಠ ಮಾಡಿ.
• ಬೆಳಗ್ಗೆ ಎದ್ದು ಓದುವುದನ್ನು ಕಲಿಸಿ.
• ಬೇರೆ ಚಟುವಟಿಕೆಗಳಿಗೂ ಆವಕಾಶ ಕೊಡಿ.
• ಅವರೊಂದಿಗೆ ನೀವು ಕಲಿಯಲು ಪ್ರಯತ್ನಿಸಿ.
• ಮುಖ್ಯ ಅಂಶಗಳನ್ನು ಬರೆದು ಕಲಿಯೋದನ್ನು ಹೇಳಿಕೊಡಿ.
• ಟಿವಿ, ಮೊಬೈಲ್, ಇಂಟರ್ನೆಟ್ ಬಳಕೆ ಬೇಡ.