ಬೆಂಗಳೂರು: ಟೀಮ್ ಇಂಡಿಯಾದ ಹೊಸ ಜೆರ್ಸಿಯನ್ನು ಅಡಿಡಾಸ್ ಕಂಪೆನಿ ಬಿಡುಗಡೆ ಮಾಡಲಾಗಿದೆ.
ಟೀಮ್ ಇಂಡಿಯಾದ ಹೊಸ ಜರ್ಸಿ ಅನಾವರಗೊಂಡಿದ್ದು, ಅಡಿಡಾಸ್ ಕಂಪನಿಯು ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್ ಗೆ ವಿಭಿನ್ನ ಜೆರ್ಸಿಯನ್ನು ವಿನ್ಯಾಸಗೊಳಿಸುವುದು ವಿಶೇಷವಾಗಿದೆ.
ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಇನ್ಮುಂದೆ ನೀಲಿ ಬಣ್ಣದ ಎರಡು ಹಾಗೂ ಬಿಳಿ ಬಣ್ಣ ಸೇರಿ ಮೂರು ಬಣ್ಣದ ಜರ್ಸಿಯಲ್ಲಿ ಟೀಂ ಇಂಡಿಯಾ ಫೀಲ್ಡ್ ಗೆ ಇಳಿಯಲಿದೆ.
ಸದ್ಯ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕಾಗಿ ಸಜ್ಜಾಗುತ್ತಿದ್ದು, ಓವಲ್ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ. ಇನ್ನು 2013ರ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಅವಕಾಶ ಟೀಂ ಇಂಡಿಯಾ ಮುಂದಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಭಾರತ ತಂಡದಲ್ಲಿ ಯಾರಿದ್ದಾರೆ?
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್, ಇಶಾನ್ ಕಿಶನ್ (ವಿಕೆಟ್ ಕೀಪರ್) ಇದ್ದಾರೆ.