ಐಪಿಎಲ್ 2023ರ ಕೆಕೆಆರ್ ಟೀಮನಲ್ಲಿ ತಮ್ಮ ಉತ್ತಮ ಪ್ರದರ್ಶನದಿಂದ ತಂಡದ ಸ್ಟಾರ್ ಆಟಗಾರ ರಿಂಕು ಸಿಂಗ್ ರ ಬ್ಯಾಟಿಂಗ್ ಎಲ್ಲರ ಗಮನ ಸೆಳೆದಿತ್ತು. ಲಕ್ನೋ ಮೆಂಟರ್ ಗೌತಮ್ ಗಂಭೀರ್ ಕೂಡ ರಿಂಕು ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು .ಈ ಐಪಿಎಲ್ ಸೀಸನ್ ಅಲ್ಲಿ ರಿಂಕು ಸಿಂಗ್ ಅದ್ಭುತವಾಗಿ ಆಡಿದ್ದಾರೆ. ಕೆಕೆಆರ್ ಯಶಸ್ಸಿನಲ್ಲಿ ರಿಂಕು ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಅವರು ಫಿನಿಶರ್ ರೋಲ್ ನಿಭಾಯಿಸುವಲ್ಲಿ ಯಶಸ್ವಿ ಪಾತ್ರವಹಿಸಿದರು. ಹಾಗಾಗಿಯೇ ರಿಂಕು ಅವರನ್ನು ಟೀಂ ಇಂಡಿಯಾಗೆ ಆಯ್ಕೆ ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.
ರಿಂಕು ಸಿಂಗ್ ಅವರಿಗೆ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಅಫ್ಘಾನಿಸ್ತಾನದ ಸೋಶಿಯಲ್ ಮೀಡಿಯಾ ಸ್ಟಾರ್ ವಜ್ಮಾ ಅಯೂಬಿ ಕೂಡ ರಿಂಕು ಅವರ ಅಭಿಮಾನಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಿಂಕುಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಜ್ಮಾ ಅಯೂಬಿ ರಿಂಕು ಜೊತೆಗಿನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ವಜ್ಮಾ ಅಫ್ಘಾನಿಸ್ತಾನ ಮೂಲದ ಸಾಮಾಜಿಕ ಮಾಧ್ಯಮ ಪ್ರಭಾವಿ. ಪ್ರಸ್ತುತ ಅವರು ದುಬೈನಲ್ಲಿ ವಾಸಿಸುತ್ತಿದ್ದಾರೆ.ವಜ್ಮಾ ಅಯೂಬಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆಕೆ ಆಗಾಗ್ಗೆ ತನ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ಏಷ್ಯಾ ಕಪ್ 2022 ರ ಸಮಯದಲ್ಲಿ ವಜ್ಮಾ ಅವರು ತಮ್ಮ ಅನೇಕ ಚಿತ್ರಗಳು ಮತ್ತು ವೀಡಿಯೊಗಳನ್ನು ಕ್ರೀಡಾಂಗಣದಲ್ಲಿ ಹಂಚಿಕೊಂಡಿದ್ದರು. ವಜ್ಮಾ ಅಯೂಬಿ ಭಾರತದ ಸೆಲೆಬ್ರಿಟಿಗಳಿಗೂ ಸಂಪರ್ಕದಲ್ಲಿದ್ದಾರೆ. ವಜ್ಮಾ ಉದ್ಯಮಿ ಮತ್ತು ಫ್ಯಾಷನ್ ಬ್ರ್ಯಾಂಡ್ ‘ಲಾಮನ್ ಕ್ಲೋಥಿಂಗ್’ ಅನ್ನು ನಡೆಸುತ್ತಿದ್ದಾರೆ. ವಜ್ಮಾ ತುಂಬಾ ಸುಂದರವಾಗಿದ್ದು, ತನ್ನ ಪ್ರತಿಭೆಯ ಆಧಾರದ ಮೇಲೆ ಬಾಲಿವುಡ್ನಲ್ಲಿ ಕೆಲಸ ಮಾಡುವ ಅಸೆಯನ್ನು ಹೊಂದಿದ್ದಾರೆ. ವಜ್ಮಾ ಅಯೂಬಿ ಸಾಮಾಜಿಕ ಕಾರ್ಯಕರ್ತೆಯೂ ಹೌದು. ಸಾಮಾಜಿಕ ವಿಚಾರಗಳ ಬಗ್ಗೆಯೂ ಮುಕ್ತವಾಗಿ ಮಾತನಾಡುತ್ತಾರೆ.
ಇಂತಹ ವಜ್ಮಾ ರಿಂಕು ಸಿಂಗ್ ಅವರ ಬ್ಯಾಟಿಂಗ್ ಗೆ ಫಿದಾ ಆಗಿ ಅವರ ಫ್ಯಾನ್ ಆಗಿದ್ದಾಳೆ ಎಂಬ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.