ನಾನು ಕಾಲೇಜಿನಲ್ಲಿ ಓದುತ್ತಿರುವಾಗ ನನ್ನ ಗೆಳತಿಯೊಬ್ಬಳು ಯಾವತ್ತು ಒಂದು ಕಂನ್ಫ್ಯೂಷನ್ ನಲ್ಲಿ ಇರುತ್ತಿದ್ದಳು. ಅವಳ ಆತಂಕ ಏನಂದ್ರೆ ‘ನಾನು ಮನೆಗೆ ಬೀಗ ಸರಿಯಾಗಿ ಹಾಕಿದ್ದೇನೆಯೇ?, ಇವತ್ತು ಟೈಂಟೇಬಲ್ ಗೆ ಸರಿಯಾಗಿ ಬುಕ್ ತಂದಿದ್ದೇನೆಯೇ?, ಬರುವಾಗ ಗ್ಯಾಸ್ ಸ್ಟವ್ ಆಫ್ ಮಾಡಿದ್ದೇನೆಯೇ? ಹೇಗೆ ಹತ್ತು ಹಲವು ಡೌಟ್ಸ್. ಆ ಆಲೋಚನೆಗಳನ್ನು ಬಲಗೊಳಿಸಲು, ಕನ್ಫರ್ಮ್ ಮಾಡಲು ಅದನ್ನು ಪದೇ ಪದೇ ಚೆಕ್ ಮಾಡುತ್ತಿದ್ದಳು.ಪದೇ ಪದೇ ಹಣ ಎಣಿಸುವುದು, ಸರಿಯಾಗಿ ಎಣಿಸಿದ್ದೇನೆಯೇ ಎಂದು ಇನ್ನೊಮ್ಮೆ ನೋಡೋದು, ಇವೆಲ್ಲ ಒಂದು ಗೀಳಾಗಿ ಹೋಗಿತ್ತು.
ಅದಾಗಿ ಒಂದು ವರ್ಷ ಆದ್ಮೇಲೆ ನಮ್ಮ ಪಾಠದಲ್ಲಿ ಒಂದು ಚಾಪ್ಟರ್ ಈ ಗುಣಲಕ್ಷಣಗಳಿಗೆ ಒಂದು ಹೆಸರು ನೀಡಿತು. ಅದೇ ಓಸಿಡಿ.
ಇದು ಸುಮಾರು 2 ಪ್ರತಿಶತದಷ್ಟು ಜನಸಂಖ್ಯೆಯನ್ನು ಬಾಧಿಸುವ ಆತಂಕದ ಅಸ್ವಸ್ಥತೆಯಾದ ಅಬ್ಸೆಸಿವ್-ಕಂಪಲ್ಸಿವ್ ಅಸ್ವಸ್ಥತೆ ಎಂದು ಕರೆಯಲಾಗುತ್ತದೆ.ಒ.ಸಿ.ಡಿ.ಯೊಂದಿಇದೊಂದು ಮೆದುಳಿಗೆ ಸಂಬಂಧಪಟ್ಟ ಕಾಯಿಲೆ ಆಗಿದ್ದು, ಮೆದುಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಗೊಂದಲಕಾರಿ ಆಲೋಚನೆಗಳು, ಚಿತ್ರಗಳು ಮತ್ತು ವದಂತಿಗಳಿಗೆ ಪ್ರತಿಕ್ರಿಯಿಸುತ್ತದೆ. ಈ ತರಹದ ಯೋಚನೆಗಳಿಗೆ ಒಳಗಾದವನು ತನ್ನ ಆತಂಕವನ್ನು ಕಡ್ಡಾಯ ಆಚರಣೆಗಳೊಂದಿಗೆ ನಿರ್ವಹಿಸಲು ಪ್ರಯತ್ನಿಸುತ್ತಾನೆ, ಇದರಲ್ಲಿ ಅತಿಯಾದ ಡಬಲ್ ಚೆಕ್ಕಿಂಗ್, ಎಣಿಕೆ, ಪ್ರಾರ್ಥನೆ ಅಥವಾ ಮಂತ್ರವನ್ನು ಪುನರಾವರ್ತಿಸುವುದು ಮತ್ತು ಅಲ್ಪಾವಧಿಯ ಪರಿಹಾರವನ್ನು ನೀಡುವ ಆದರೆ ಅಂತಿಮವಾಗಿ ಮಾನಸಿಕವಾಗಿ ದಣಿಯುವಂತೆ ಮಾಡುತ್ತವೆ.
ಒಬ್ಸಸ್ಸಿವ್ ಅಂದ್ರೆ ಆಲೋಚನೆಗಳು (ನಾನು ಪುಸ್ತಕ ಸರಿಯಾಗಿ ಇಟ್ಟಿದ್ದೇನೆಯೇ, ಬಟ್ಟೆ ನೀಟಾಗಿ ಮಾಡಿಸಿದ್ದೇಯೇ), ಕಂಪಲ್ಶನ್ ಅಂದ್ರೆ ಆ ಆಲೋಚನೆಗಳನ್ನು ದೃಢ ಪಡಿಸಿಕೊಳ್ಳುವುದು, ಉದಾಹರಣೆಗೆ ಪುಸ್ತಕವನ್ನು ಇನ್ನೊಮ್ಮೆ ಜೋಡಿಸುವುದು, ಬಟ್ಟೆ ಇನ್ನೊಮ್ಮೆ ಮಡಿಚಿಇಡುವುದು, ಮತ್ತೆ ಯಾರಾದ್ರೂ ಅದನ್ನು ತೆರವು ಮಾಡಿದರೆ, ಸಿಟ್ಟು ಆತಂಕ ಹೆಚ್ಚಾಗುವುದು. ಪದೇ ಪದೇ ಅದೇ ಯೋಚನೆಗಳು, ಆತಂಕಗಳು.
ಇವೆಲ್ಲ ಸಾಮಾನ್ಯ ಮಟ್ಟದಲ್ಲಿ ಇದ್ದರೆ, ಇನ್ನೂ ಕೆಲವರಲ್ಲಿ ಇದು ಅತಿರೇಕಕ್ಕೆ ಹೋಗಿರುತ್ತದೆ.
ಉದಾಹರಣೆಗೆ ಪದೇ ಪದೇ ಕೈ ತೊಳಿಯುವುದು (ಅವರ ಆಲೋಚನೆಗಳಲ್ಲಿ ಅವರೇನೋ ದೊಡ್ಡ ತಪ್ಪು ಮಾಡಿ, ರಕ್ತ ಕೈಗೆ ಅಂಟಿಕೊಂಡ ಹಾಗೆ ), ಸಾವಿರ ಬಾರಿ ದೇವರ ಹೆಸರು ಬರೆಯುವುದು, ದಿನಕ್ಕಿಷ್ಟು ಸಲ ಬರೆಯದಿದ್ದರೆ ದೇವರು ಶಿಕ್ಷೆಸುತ್ತಾನೆ ಅನ್ನುವ ಆಲೋಚನೆಗಳು.
ಓಸಿಡಿ ಒಂದು ಮಾನಸಿಕ ಗೀಳು ರೋಗ. ಸಾಮಾನ್ಯವಾಗಿ ನಾವೆಲ್ಲರೂ ಸ್ವಲ್ಪ ಮಟ್ಟಿನ ಒಸಿಡಿ ಹೊಂದಿರುತ್ತೇವೆ. ಆದರೆ ಅದು ಗೀಳಾಗಿರುವುದಿಲ್ಲ. ಆದರೆ ಕೆಲವರಿಗೆ ಇದು ಅವರ ದಿನನಿತ್ಯದ ಕೆಲಸಗಳಿಗೆ ಈ ಗೀಳು ತೊಂದರೆ ಮಾಡುತ್ತದೆ.
ಓಸಿಡಿ ಕಾರಣಗಳು
ಸಾಮಾನ್ಯವಾಗಿ ಮೆದುಳಿನ ಅಸಮರ್ಪಕ ಕಾರ್ಯ ನಿರ್ವಹಣೆ, ಫ್ಯಾಮಿಲಿಯಲ್ಲಿ ಯಾರಿಗಾದರೂ ಈ ಕಾಯಿಲೆ ಇದ್ದಲ್ಲಿ ಜೀನ್ಸ್ನಲ್ಲಿ ಬರುವ ಸಾಧ್ಯತೆ ಹೆಚ್ಚು.
ಇನ್ನು, ಚಿಕ್ಕ ವಯಸ್ಸಿನಲ್ಲಿ ಮಗು ಆಘಾತಕಾರಿ ವಿಷಯವನ್ನು ಎದುರಿಸಿದ್ದರೆ, ಅಥವಾ ಪೋಷಕರು ಹೆಚ್ಚಾಗಿ ಸ್ವಚ್ಛತೆಯ ಬಗ್ಗೆ ಮಗುವಿಗೆ ಅಗತ್ಯಕ್ಕಿಂತ ಜಾಸ್ತಿ ಒತ್ತಡ ಹೇರಿದರೆ ವಯಸ್ಕನಾಗುವ ಅದೇ ಕಂಪಲ್ಶ್ ನ್ ಆಗಿ ಪರಿವರ್ತನೆಆಗುವ ಸಾಧ್ಯತೆ ಹೆಚ್ಚು.
ನನ್ನ ಗೆಳತಿಯ ವಿಷಯದಲ್ಲೂ ಅವಳು ಬಾಲ್ಯವಸ್ಥೆಯಲ್ಲಿ ಇರುವಾಗ ಅಮ್ಮ, ಅಜ್ಜಿಯ ಅತಿಯಾದ ಸ್ವಚ್ಛತೆಯ ಬಗ್ಗೆ ಇರುವ ಕಾಳಜಿ ಅವಳಿಗೆ ತಾನು ಪ್ರತಿಯೊಂದು ಕೆಲಸ ದಲ್ಲೂ ಪರ್ಫೆಕ್ಟ್ ಆಗಿ ಇರ್ಬೇಕು, ತಪ್ಪು ಮಾಡ್ಬಾರ್ದು ಅನ್ನೋ ಭಾವನೆಯನ್ನು ಚಿಕ್ಕ ವಯಸ್ಸಿನಲ್ಲಿಯೇ ಹುಟ್ಟು ಹಾಕಿಸಿತ್ತು.
ಹಾಗಾದ್ರೆ ಈ ಗೀಳು ರೋಗಕ್ಕೆ ಪರಿಹಾರ ಏನು?
ಸಾಮಾನ್ಯವಾಗಿ ಇದು ಮನಸ್ಸಿನ ಆಲೋಚನೆಗಳಿಗೆ ಸಂಬಂಧಪಟ್ಟ ಕಾಯಿಲೆ ಆದ್ದರಿಂದ, ಆಲೋಚನೆಯ ದಿಕ್ಕನ್ನು ಬದಲಾಯಿಸುವುದು ತುಂಬಾ ಅಗತ್ಯ. ಹಾಗಾಗಿ ಥೆರಪಿ ಸೆಟ್ಟಿಂಗ್ನಲ್ಲಿ ಕಾಗ್ನಿಟಿವ್ ಬಿಹೇವಿಯರ್ ಥೆರಪಿ ಕೊಡಲಾಗುತ್ತದೆ.
ಇದಲ್ಲದೆ ಇನ್ನು ರೋಗಿಯ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸ ವಿಧಾನವನ್ನು ಬದಲಾಯಿಸಲಾಗುತ್ತದೆ.