ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಹೊಸ ಚಿತ್ರದ ಬಗ್ಗೆ ಎಲ್ಲೆಡೆ ಕುತೂಹಲ ಮನೆಮಾಡಿದೆ. ಮಹೇಶ್ ಬಾಬು ಅವರು ಸದ್ಯ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಹೊಸ ಚಿತ್ರದ ಚಿತ್ರೀಕರಣ ಈಗಾಗಲೇ ಅಂತಿಮ ಹಂತದಲ್ಲಿದೆ ಎನ್ನಲಾಗಿದೆ. ಇನ್ನು ಮಹೇಶ್ ಬಾಬು-ತ್ರಿವಿಕ್ರಮ್ ಶ್ರೀನಿವಾಸ್ ಜೋಡಿಯ ಹೊಸ ಸಿನಿಮಾಕ್ಕೆ ‘ಗುಂಟೂರು ಖಾರಂʼಎಂದು ಹೆಸರಿಡಲಾಗಿದೆ.
ಆರಂಭದಿಂದಲೂ ಈ ಚಿತ್ರಕ್ಕೆ ಎಸ್ಎಸ್ಎಂಬಿ28 ಎಂದು ಕರೆಯಲಾಗುತ್ತಿತ್ತು. ಈಗ ಸಿನಿಮಾಕ್ಕೆ ಗುಂಟೂರು ಖಾರಂ ಎಂದು ಸಖತ್ ಹೆಸರಿಟ್ಟಿದ್ದಾರೆ. ಗುಂಟೂರು ಖಾರ ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ಸಹ ಇಂದು ಬಿಡುಗಡೆ ಆಗಿದೆ.
ರೆಡ್ ಶರ್ಟ್ ಧರಿಸಿ ಹಣೆಗೆ ಕೆಂಪು ಪಟ್ಟಿ ಕಟ್ಟಿಕೊಂಡು ಬೀಡಿ ಸೇದುತ್ತಿರುವ ಮಹೇಶ್ ಬಾಬು ಚಿತ್ರವನ್ನು ಸಿನಿಮಾದ ಹೆಸರಿನ ಜೊತೆಗೆ ಬಿಡುಗಡೆ ಮಾಡಲಾಗಿದೆ. ಇನ್ನು ಟೀಸರ್ನಲ್ಲಿ ಮಹೇಶ್ ಬಾಬು ವಿಲನ್ ಗಳನ್ನು ಚಿಂದಿಯಾಗಿ ಹೊಡೆದುರುಳಿರುವ ದೃಶ್ಯಗಳನ್ನು ತೋರಿಸಲಾಗಿದೆ.