ಸ್ಯಾಂಡಲ್ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಜನ್ಮದಿನದ ಸಂಭ್ರಮದ ಮೂಡ್ ನಲ್ಲಿದ್ದಾರೆ. ಬರ್ತಡೇಯಂದು ತನ್ನ ಅಭಿಮಾನಿಗಳಿಗೆ SSE ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ನೀಡಲು ಸಿದ್ದರಾಗಿದ್ದಾರೆ. ರಕ್ಷಿತ್ ಶೆಟ್ಟಿ ಈ ಸಿನಿಮಾ 2 ಪಾರ್ಟ್ಗಳಲ್ಲಿ ಜನರ ಮುಂದೆ ಬರಲಿದೆ ಎನ್ನುವ ಬಿಗ್ ನ್ಯೂಸ್ ಅನ್ನು ರಕ್ಷಿತ್ ಶೆಟ್ಟಿ ಅನೌನ್ಸ್ ಮಾಡಿದ್ದಾರೆ. ಜೂನ್ 15ಕ್ಕೆ SSE ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಲಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲವಿದೆ. ಪ್ರತಿ ಬಾರಿಯು ಹೊಸತನದೊಂದಿಗೆ ತೆರೆ ಮೇಲೆ ಬರುವ ರಕ್ಷಿತ್ ಶೆಟ್ಟಿ, ಈ ಬಾರಿ ಕೂಡ ಮ್ಯಾಜಿಕ್ ಮಾಡಲಿದ್ದಾರೆ ಎನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ.
2 ಪಾರ್ಟ್ಗಳಾಗಿ ತೆರೆ ಮೇಲೆ ಬರಲಿರುವ ಈ ಸಿನಮಾ ಸಮಯ, ಪ್ರೀತಿ ಮತ್ತು ಕನಸುಗಳನ್ನು ಸ್ಪಷ್ಟವಾಗಿ ಕೆತ್ತಿದ ಎಸ್ಎಸ್ಇ ಈಗ ಎರಡು ಭಾಗಗಳಲ್ಲಿ ನಿಮ್ಮ ಮುಂದೆ ಬರಲಿದೆ , ಸೈಡ್ ಎ ಮತ್ತು ಸೈಡ್ ಬಿ ಚಿತ್ರೀಕರಣ ಮುಗಿದಿದೆ. ಈ ಸಿನಿಮಾದ ಎರಡೂ ಭಾಗಗಳ ಬಿಡುಗಡೆ ದಿನಾಂಕವನ್ನು ಜೂನ್ 15 ರಂದು ಪ್ರಕಟಿಸಲಾಗುವುದು. ನೀವು ನಮ್ಮನ್ನು ಯಾವಾಗಲೂ ಪ್ರೀತಿಯಿಂದ ಸ್ವೀಕರಿಸುತ್ತೀರಿ ಎಂದು ನಾವು ಭಾವಿಸುತ್ತೇವೆ ಎಂದು ರಕ್ಷಿತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಪ್ತ ಸಾಗರದಾಚೆ ಸಿನಿಮಾ ಟೀಸರ್ ರಿಲೀಸ್ ಆಗಿದ್ದು, ಟೀಸರ್ಗೂ ಉತ್ತಮ ಪ್ರತಿಕ್ರಿಯೆ ಕಾಣಿಸಿಕೊಂಡಿದೆ. ಪ್ರೇಮಿಗಳ ದಿನದಂದು 36 ಸೆಕೆಂಡ್ ಇರುವ ಈ ಟೀಸರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಟೀಸರ್ನಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಾತ್ರ ಕಾಣಿಸಿಕೊಂಡಿದ್ದರು. ಟೀಸರ್ ನೋಡಿದ ಪ್ರೇಕ್ಷಕರಿಗೆ ರಕ್ಷಿತ್ ಸಿನಿಮಾ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿರವ ಸಾಧ್ಯತೆ ಇದೆ.
ನಿರ್ದೇಶಕ ಹೇಮಂತ್ ರಾವ್ ಮತ್ತು ರಕ್ಷಿತ್ ಶೆಟ್ಟಿ ಕಾಂಬಿನೇಷನ್ನಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಸಿದ್ಧವಾಗುತ್ತಿದೆಯಂತೆ. ಸಿನಿಮಾದ ಶೂಟಿಂಗ್ ಬಹುತೇಕ ಮುಕ್ತಾಯಗೊಂಡಿದ್ದು, ಶೀರ್ಷಿಕೆ ಮೂಲಕವೇ ಕುತೂಹಲ ಕೆರಳಸಿದ್ದು ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ‘ಮನು’ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಟಿ ರುಕ್ಮಿಣಿ ವಸಂತ್ ಸುರಭಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಹೆಸರೇ ಹೇಳುವಂತೆ ಸಮುದ್ರ ಕೂಡ ಈ ಚಿತ್ರದಲ್ಲಿ ಮುಖ್ಯ ಪಾತ್ರವಹಿಸಲಿದೆ ಎನ್ನಬಹುದು. ಸಿನಿಮಾ ತಂಡ ರಿಲೀಸ್ ಮಾಡಿರುವ 2 ಟೀಸರ್ಗಳಲ್ಲೂ ಸಮುದ್ರದ ಬಗ್ಗೆ ಮಾತುಕತೆ ಇದೆ. ಸಮುದ್ರದ ಯಾವ ವೈಶಿಷ್ಟ್ಯದೊಂದಿಗೆ ಸಿನಿಮಾ ಮೂಡಿ ಬಂದಿದೆ ಎಂದು ಕಾದು ನೋಡಬೇಕು.