ಎರಡು ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಈ ಗಿಡದಲ್ಲಿ ಕಡು ಹಸಿರು ಬಣ್ಣದ ಸಣ್ಣನೆಯ ಉದ್ದುದ್ದ ಎಲೆಗಳಿರುತ್ತವೆ. ಕಾಂಡವು ದೃಢವಾದ, ಕವಲೊಡೆಯುವ ರೀತಿಯಲಿದ್ದು, ಬೀಜಗಳು ನಯವಾಗಿರುತ್ತವೆ. ನೀಲಿ ಬಣ್ಣದ ಹೂಗಳನ್ನು ಬಿಡುತ್ತವೆ. ಎಲ್ಲ ಕಡೆಗಳಲ್ಲೂ, ಎಲ್ಲ ಋತುಗಳಲ್ಲೂ ಬೆಳೆಯುವ ಗಿಡ. ಕನ್ನಡದಲ್ಲಿ ಕಿರಾತಕಡ್ಡಿ ಅಥವಾ ನೆಲಬೇವು ಎಂದೂ, ಸಂಸ್ಕೃತದಲ್ಲಿ `ಕಾಲಮೇಷ’ ಎಂದೂ ಕರೆಯಲಾಗುವ ಇದರ ವೈಜ್ಞಾನಿಕ ಹೆಸರು `ಎಂಡೊಗ್ರಾಫಿಕ್ ಪೆನ್ಸಿಕ್ಯುಲೆ ಟಾ’ ಎಂದು.
ಇದರ ಎಲೆಗಳಿಂದ ಕಷಾಯ ತಯಾರಿಸಿ ಕುಡಿಯುವುದರಿಂದ ಮಧುಮೇಹ ನಿಯಂತ್ರಣದಲ್ಲಿ ಇಡುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಪರಿಣಾಮವನ್ನು ಹೊಂದಿದೆ ಮತ್ತು ಮಧುಮೇಹಕ್ಕೆ ಉಪಯುಕ್ತ ಚಿಕಿತ್ಸೆಯಾಗಿದೆ.
ಜೊತೆಗೆ ಸಾಮಾನ್ಯವಾಗಿ ಎಲ್ಲ ರೀತಿಯ ಚರ್ಮ ರೋಗಗಳೂ ವಾಸಿಮಾಡುತ್ತವೆ.
ಎಲೆಗಳನ್ನು ಅರೆದು ಲೇಪಿಸುವುದರಿಂದ ಸಿಡುಬಿನ ಕಲೆಗಳು ಮಾಯವಾಗುತ್ತವೆ. ಎಲೆಗಳ ಕಷಾಯಕ್ಕೆ ಬೆಳ್ಳುಳ್ಳಿ ಸೇರಿಸಿ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಜಂತುಹುಳುಗಳು ನಿವಾರಣೆಯಾಗುತ್ತವೆ. ತುರಿಕಜ್ಜಿ, ಗಜಕರ್ಣ ಮುಂತಾದವಕ್ಕೆ ಇದರ ಎಲೆಗಳನ್ನು ಅರೆದು ಹಚ್ಚಿದರೆ ಬೇಗನೇ ವಾಸಿಯಾಗುತ್ತವೆ. ಅಷ್ಟೇ ಅಲ್ಲದೆ ಇದರ ಕಷಾಯ ಸೇವನೆಯು ಬಾಣಂತಿಯರ ದಾಹ ತಗ್ಗಿಸುವುದರಲ್ಲೂ ಸಹಕರಿಸುತ್ತದೆ. ರುಚಿಯಲ್ಲಿ ಮಾತ್ರ ಇದು ಬಹಳ ಕಹಿ. ಆದರೆ ಕಿರಾತಕಡ್ಡಿ ಕಹಿಯಾದರೂ ಉದರಕ್ಕೆ ಸಿಹಿ’ ಎಂಬಂತೆ ಕೆಲಸ ನಿರ್ವಹಿಸಬಲ್ಲ ಅತ್ಯುತ್ತಮವಾದ ಔಷಧೀಯ ಗಿಡ.
ಇದು ಜ್ವರ, ಉರಿಯೂತ, ಚರ್ಮ ರೋಗಗಳು, ಮಧುಮೇಹದ ಚಿಕಿತ್ಸೆಗಾಗಿ ಆಯುರ್ವೇದದಲ್ಲಿ ಬಳಸಲಾಗುವ ಪ್ರಮುಖ ಗಿಡಮೂಲಿಕೆಯಾಗಿದೆ. ಚಿನ್ನೋದ್ಭವದಿ ಕ್ವಾತ ಚೂರ್ಣ, ಆಯುಷ್-64, ಹಿಮಾಲಯ ಡಯಾಬೆಕಾನ್, ಮೆನ್ಸ್ಟೂರಿಲ್ ಸಿರಪ್, ಸುದರ್ಶನ ಚೂರ್ಣ, ಮಹಾಸುದರ್ಶನ ಚೂರ್ಣ ಮುಂತಾದ ಗಿಡಮೂಲಿಕೆ ಔಷಧಿಗಳು ಈ ಔಷಧೀಯ ಮೂಲಿಕೆಯನ್ನು ಒಳಗೊಂಡಿದೆ.
ಆಯುರ್ವೇದ ಪ್ರಕಾರ ಇದು ಪಿತ್ತ, ಕಫವನ್ನು ಸಮತೋಲನಗೊಳಿಸುತ್ತದೆ ಮತ್ತು ವಾತ/ಗಾಳಿಯನ್ನು ಉಲ್ಬಣಗೊಳಿಸುತ್ತದೆ. ಇದರ ಒಣಗಿದ ಸಸ್ಯವು ಔಷಧವನ್ನು ರೂಪಿಸುತ್ತದೆ. ಇದು ದೇಹದಿಂದ ವಿಷವನ್ನು ತೆಗೆದುಹಾಕುವ ರಕ್ತ ಶುದ್ಧೀಕರಣವಾಗಿದೆ..
ವಯಸ್ಕರಿಗೆ ಈ ಪುಡಿಯ ಡೋಸೇಜ್ 1-3 ಗ್ರಾಂ ಮತ್ತು ಮಕ್ಕಳಿಗೆ 250 ಮಿಗ್ರಾಂನಿಂದ 500 ಮಿಗ್ರಾಂ, ನೀರಿನೊಂದಿಗೆ. ವಯಸ್ಕರಿಗೆ ಕಷಾಯದ ಡೋಸ್ 25-30 ಮಿಲಿ ಮತ್ತು ಮಕ್ಕಳಿಗೆ, ಇದು 5 ಮಿಲಿ ರಿಂದ 10 ಮಿಲಿ, ಊಟದ ನಂತರ ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಬೇಕು.
ಕಿರಾತ ಕಡ್ಡಿ ಯಾವುದೇ ವಿಷಕಾರಿ ಪರಿಣಾಮಗಳು ಬೀರುವುದಿಲ್ಲ. ಆದರೆ ಮೌಖಿಕ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಔಷಧಿಗಳನ್ನು ತೆಗೆದುಕೊಳ್ಳುವ ವ್ಯಕ್ತಿಯು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಈ ಗಿಡಮೂಲಿಕೆಗಳ ಪುಡಿಯನ್ನು ತೆಗೆದುಕೊಳ್ಳಬೇಕು