ಬೆಂಗಳೂರು: ಶ್ರೀಲಂಕಾದಲ್ಲಿ ಮೊಟ್ಟೆಯ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಿಂದ ಪ್ರತಿನಿತ್ಯ 10 ಲಕ್ಷ ಮೊಟ್ಟೆಗಳನ್ನು ಆಮದು ಮಾಡಿಕೊಳ್ಳಲಿದೆ ಎಂದು ಶ್ರೀಲಂಕಾದ ಪ್ರಮುಖ ಆಮದು ಸಂಸ್ಥೆ ತಿಳಿಸಿದೆ.
ಭಾರತದ 5 ಕೋಳಿಸಾಕಣೆ ಕೇಂದ್ರಗಳಿಂದ ಆಮದು ಮಾಡಿಕೊಳ್ಳಲು ಶ್ರೀಲಂಕಾ ನಿರ್ಧರಿಸಿದೆ.
ಈ ಬಗ್ಗೆ ಶ್ರೀಲಂಕಾದ ಮಾರಾಟ ನಿಗಮದ ಅಧ್ಯಕ್ಷ ಅಸಿರಿ ವಲಿಸುಂದರ ಮಾಹಿತಿ ನೀಡಿದ್ದು, ಮೊಟ್ಟೆಗೆ ದೇಶದಲ್ಲಿ ಬೇಡಿಕೆ ಹೆಚ್ಚಾಗಿದೆ, ಸದ್ಯ 20 ಲಕ್ಷ ಮೊಟ್ಟೆ ಆಮದು ಮಾಡಿಕೊಂಡಿದ್ದು, ಮಾರುಕಟ್ಟೆಗೆ 10 ಲಕ್ಷ ಮೊಟ್ಟೆಯನ್ನು ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಮೊಟ್ಟೆಗಳನ್ನು ಬೇಕರಿ, ಬಿಸ್ಕಟ್ ತಯಾರಿಕಾ ಕೇಂದ್ರಗಳು ಸೇರಿದಂತೆ ರೆಸ್ಟೋರೆಂಟ್ ಗಳಿಗೆ ಮೊಟ್ಟೆ ಬಿಡುಗಡೆ ಮಾಡಲಾಗುತ್ತಿದೆ. ಒಂದು ಮೊಟ್ಟೆಗೆ ಶ್ರೀಲಂಕಾದ 35ರೂ. ರಂತೆ ನೀಡಲಾಗುತ್ತಿದೆ.
ಶ್ರೀಲಂಕಾ ಕಳೆದ ಒಂದು ವರ್ಷದಿಂದ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಭಾರಿ ಹಣದುಬ್ಬರದಿಂದ ಜನರ ಖರೀದಿ ಸಾಮರ್ಥ್ಯವನ್ನು ಕುಗ್ಗಿಸಿದೆ.