ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ರೂ. ಮುಖಬೆಲೆಯ ನೋಟನ್ನು ಚಲಾವಣೆಯಿಂದ ಹಿಂಪಡೆದಿದೆ 2,000 ರೂ. ಮುಖ ಬೆಲೆಯ ನೋಟುಗಳನ್ನು ಬ್ಯಾಂಕಿಗೆ ಜಮಾ ಮಾಡಿ ಬದಲಿಗೆ ಬೇರೆ ನೋಟುಗಳನ್ನು ಪಡೆದುಕೊಳ್ಳಲು ಇಂದಿನಿಂದ ಅವಕಾಶ ನೀಡಲಾಗಿದ್ದು, ಈ ಅವಕಾಶ ಸೆಪ್ಟೆಂಬರ್ 30ರ ವರೆಗೆ ಇದೆ ಎಂದು ಆರ್ಬಿಐ ಹೇಳಿದೆ.
2,000 ರೂ. ಮುಖಬೆಲೆಯ ನೋಟುಗಳನ್ನುಎಲ್ಲಾ ಬ್ಯಾಂಕ್ಗಳಲ್ಲಿಯೂ ಬದಲಾವಣೆ ಮಾಡಬಹುದಾಗಿದೆ. ಅದಲ್ಲದೇ ಆರ್ಬಿಐ ನ 19 ಪ್ರಾದೇಶೀಕ ಕಚೇರಿಗಳಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
ಬ್ಯಾಂಕ್ಗಳಲ್ಲಿ 2,000 ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಯಾವುದೇ ನಮೂನೆಯನ್ನು ಭರ್ತಿ ಮಾಡುವ ಅಗತ್ಯವಿಲ್ಲ. ನೋಟುಗಳ ವಿನಿಮಯ ಅಥವಾ ಠೇವಣಿಗೆ ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಅಲ್ಲದೇ, ಗುರುತಿನ ಚೀಟಿ ಸೇರಿದಂತೆ ಯಾವುದೇ ದಾಖಲೆಗಳನ್ನು ತೋರಿಸುವ ಅಗತ್ಯವಿಲ್ಲ.
ನೋಟು ಬದಲಾವಣೆ ಹೇಗೆ?
* ಪ್ರತಿದಿನ 2,000 ರೂಪಾಯಿ ಮುಖಬೆಲೆಯ 10 ನೋಟುಗಳನ್ನು ಬ್ಯಾಂಕಿಗೆ ಜಮೆ ಮಾಡಿ ಸುಲಭವಾಗಿ ಬದಲಿ ನೋಟುಗಳನ್ನು ಪಡೆಯುವ ಅವಕಾಶವನ್ನು ಆರ್ಬಿಐ ನೀಡಿದೆ.
*20 ಸಾವಿರ ಮೊತ್ತದ ಹಣವನ್ನು ಯಾವುದೇ ಐಡಿ ಪ್ರೊಪ್ ಇಲ್ಲದೇ ಬದಲಾವಣೆ ಮಾಡಿಕೊಳ್ಳಬಹುದು.
*ಬ್ಯಾಂಕ್ನಲ್ಲಿ ಅಕೌಂಟ್ ಇಲ್ಲದೇ ಇದ್ದರೂ ಕೂಡ ನಿಗದಿತ ಮೊತ್ತದ ಹಣವನ್ನು ಬದಲಾವಣೆ ಮಾಡಿಕೊಳ್ಳಬಹುದು.
*ಒಂದೇ ದಿನದಲ್ಲಿ 20 ಸಾವಿರಕ್ಕಿಂತ ಹೆಚ್ಚು ಹಣವನ್ನು ಬದಲಾವಣೆ ಮಾಡಬೇಕಾದರೆ ಅದಕ್ಕೊಂದು ಅರ್ಜಿಯನ್ನು ತುಂಬಿ ವಿವರಗಳನ್ನು ನೀಡಬೇಕಾಗುತ್ತದೆ.
*50ಸಾವಿರಕ್ಕಿಂತ ಹೆಚ್ಚಿನ ಮೊತ್ತದ 2 ಸಾವಿರ ಮುಖಬೆಲೆಯ ಹಣವನ್ನು ಬದಲಾವಣೆ ಮಾಡಬೇಕಾದರೆ ಪಾನ್ ನಂಬರ್ನ್ನು ನೀಡಲೇ ಬೇಕಾಗುತ್ತದೆ.