ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ರಂಗೇರುತ್ತಿದೆ. ನಾಯಕರು ಬಣ್ಣದ ಮಾತುಗಳಿಂದ ಜನರನ್ನು ಒಲಿಸಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಆಶ್ವಾಸನೆಯ ಸರಮಾಲೆ ಪಟ್ಟಿಯನ್ನೇ ಜನರ ಮುಂದೆ ಇಡುತ್ತಿದ್ದಾರೆ. ಜನರನ್ನು ಸೆಳೆಯಲು ತೆರೆಯ ಹಿಂದೆ ಒಂದಿಷ್ಟು ಆಮೀಷಗಳು ನಿರಂತರವಾಗಿ ನಡೆಯುತ್ತಿರುತ್ತವೆ.
ಚುನಾವಣೆ ದಿನಾಂಕ ಘೋಷಣೆ ಯಾದ ಕ್ಷಣದಿಂದ ನೀತಿಸಂಹಿತೆಯು ಜಾರಿಯಲ್ಲಿರುತ್ತದೆ. ಈ ನೀತಿ ಸಂಹಿತೆಯ ಮುಖ್ಯ ರಾಜಕೀಯ ನಾಯಕರುಗಳ ರಂಗು ರಂಗಿನ ಆಟಕ್ಕೆ ಕಡಿವಾಣ ಹಾಕುವ ಸಲುವಾಗಿದೆ. ಚುನಾವಣಾ ಪ್ರಕ್ರಿಯೆಯು ಪಾರ್ಶಕತೆಯಿಂದ ನಡೆಸುವ ಸದು ಉದ್ದೇಶದಿಂದಲೂ ನೀತಿ ಸಂಹಿತೆ ಅವಶ್ಯಕವಾಗಿದೆ.
ಧರ್ಮ, ಜಾತಿ ಹಾಗೂ ಭಾಷೆ ಹೆಸರಿನಲ್ಲಿ ಮತಯಾಚನೆಗೆ ಕಡಿವಾಣ ಹಾಕಲು ಹಾಗೂ ಪರಸ್ಪರ ದ್ವೇಷ, ಭಿನ್ನಾಭಿಪ್ರಾಯಗಳನ್ನು ಉಂಟುಮಾಡುವAತಹ ಅವಕಾಶವನ್ನು ಹತ್ತಿಕ್ಕಲು ನೀತಿ ಸಂಹಿತೆಯು ಒಂದು ಅಸ್ತ್ರವಾಗಿದೆ.
ಆದರೆ ಈ ನೀತಿ ಸಂಹಿತೆಯು ಕೊಂಚ ಸಾಮಾನ್ಯ ಜನರ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಮಾಹಿತಿಯ ಕೊರತೆಯಿಂದ ಯಾರಾದರು ಹಣವನ್ನು ಒಂದೆಡೆ ಕೊಂಡೊಯ್ಯತ್ತಿದ್ದರೆ ಪೋಲೀಸರ ಅತಿಥಿ ಗ್ಯಾರಂಟಿ.
ಕೆಲವೊಂದು ಮದುವೆ, ಸಮಾರಂಭಗಳು ಮದ್ಯಪಾನ ಇಲ್ಲದೆ ಅದೆಷ್ಟೊ ಭಾರಿ ಮದುವೆ ಮನೆಗಳಿಗೆ ಧಾಳಿ ನಡೆಸಿ ಮದ್ಯಪಾನಗಳನ್ನು ವಶಪಡಿಸಿಕೊಂಡಿರುವ ಉದಾಹರಣೆಗಳಿವೆ. ಡಿಜೆ, ಲೌಡ್ ಮ್ಯೂಸಿಕ್ ಸಿಸ್ಟಮ್ಗಳನ್ನು ನಿಗದಿತ ಸಮಯದ ನಂತರ ಬಳಸುವಂತಿಲ್ಲ. ಬೆಳ್ಳಿಗ್ಗಿನ ಜಾವದವರೆಗೆ ಕುಣಿದು ಕುಪ್ಪಳಿಸುವವರಿಗೆ ಇದೊಂದು ರೈಟ್ ಬ್ರೇಕ್.
ಕಟ್ಟೆ ಪೂಜೆ ಮಾಡುವವರಿಗೂ ನೀತಿ ಸಂಹಿತೆಯು ಅನ್ವಯವಾಗುತ್ತದೆ. ಕಟ್ಟೆಯಲ್ಲಿ ಕುಳಿತು ಹರಟೆ ಹೊಡೆಯುವವರಿಗೆ ಇನ್ನು ಮನೆಯ ಜಗಲಿಯೇ ಗತಿ. ಯಾಕೆಂದರೆ ಗುಂಪುಗಾರಿಕೆಗೂ ಅವಕಾಶವಿಲ್ಲ.
ಒಟ್ಟಿನಲ್ಲಿ ಜನನಾಯಕರ ಕಳ್ಳಾಟವನ್ನು ನಿಯಂತ್ರಿಸಲು ಜಾರಿಗೊಳಿಸಿರುವ ನೀತಿ ಸಂಹಿತೆ ಜನಸಾಮನ್ಯರ ಮೇಲೂ ಪ್ರಭಾವ ಬೀರುತ್ತಿದೆ.
ಇದಿಷ್ಟು ಅಲ್ಲದೆ ಈ ಸಮಯದಲ್ಲಿ ಕಛೇರಿಗಳಲ್ಲಿ ನಮ್ಮ ಯಾವುದೇ ಕೆಲಸಗಳು ಸಲೀಸಾಗಿ ನಡಿಯುವುದಿಲ್ಲ. ಹೇಳುವುದಾದರೆ ನಾಳೆ ಬಾ ಎನ್ನುವ ಪರಿಕ್ಪನೆ ನಡೆಯುತ್ತಿರುತ್ತದೆ. ಅಧಿಕಾರಿಗಳು ಎಲೆಕ್ಷನ್ ಕಾರ್ಯನಿಮಿತ್ತ ಎಲ್ಲರು ವ್ಯಸ್ತವಾಗಿರುತ್ತಾರೆ. ಒಟ್ಟಿನಲ್ಲಿ ಎಲೆಕ್ಷನ್ ಸೈಡ್ ಇಫೆಕ್ಟ್ ಎಲ್ಲರು ಅನುಭಿಸಲೇ ಬೇಕು