ವ್ಯಾಟ್ಸ್ಆ್ಯಪ್ ಬಳಕೆದಾರರ ಬೇಡಿಕೆ ತಕ್ಕಂತೆ ಹೊಸ ಹೊಸ ಫೀಚರ್ಸ್ ಪರಚಯಿಸುತ್ತಿದೆ. ಚಾಟ್ ಲಾಕ್, ಗ್ರೂಪ್ ಕಾಲ್, ಮೆಸೇಜ್ ಎಡಿಟ್, ಭದ್ರತಾ ಫೀಚರ್ ಸೇರಿದಂತೆ ಹಲವು ಸೌಲಭ್ಯಗಳನ್ನು ವ್ಯಾಟ್ಸ್ಆ್ಯಪ್ ಈಗಾಗಲೆ ನೀಡಿದೆ. ಆದರೆ ಇದೀಗ ಹೊಸ ಫೀಚರ್ ಪರಿಚಯಿಸಿದೆ ಅದೆನೆಂದರೆ ವ್ಯಾಟ್ಸ್ಆ್ಯಪ್ ವಾಯ್ಸ್ ಸ್ಟೇಟಸ್. ನೂತನವಾಗಿ ಬಂದರುವ ವಾಯ್ಸ್ ಸ್ಟೇಟಸ್ ಎಲ್ಲಾ ಬಳಕೆದಾರರಿಗೆ ಈಗ ಸಂತಸ ತಂದಿದೆ.
ವ್ಯಾಟ್ಸ್ಆ್ಯಪ್ ಸ್ಟೇಟಸ್ ಅತೀ ಹೆಚ್ಚು ಸದ್ದು ಮಾಡುವ ಫೀಚರ್. ಬಳಕೆದಾರರು ಸ್ಟೇಟಸ್ ಮೂಲಕ ಫೋಟೋಗಳನ್ನು ಹಾಕುತ್ತಾರೆ. ಇದೀಗ ಸ್ಟೇಟಸ್ ಮೂಲಕ ಧ್ವನಿ ಕೂಡ ಸೇರಿಸಿಕೊಳ್ಳಲು ಸಾಧ್ಯವಿದೆ. ಬಳಕೆದಾರರು ತಮ್ಮದೇ ವಾಯ್ಸ್ ರೆಕಾರ್ಡ್ ಮಾಡಿ ಸ್ಟೇಟಸ್ನಲ್ಲಿ ಹಾಕಬಹುದಾಗಿದೆ. ಆರಂಭಿಕ ಹಂತದಲ್ಲಿ ಬಿಟಾ ವರ್ಶನ್ನಲ್ಲಿದ್ದ ಈ ಫೀಚರ್, ಇದೀಗ ಎಲ್ಲಾ ಬಳಕೆದಾರರಿಗೆ ವಾಯ್ಸ್ ಸ್ಟೇಟಸ್ ಫೀಚರ್ ಲಭ್ಯವಿದೆ.
ವ್ಯಾಟ್ಸ್ಆ್ಯಪ್ ವಾಯ್ಸ್ ಸ್ಟೇಟಸ್ ಹಾಕುವುದು ಹೇಗೆಂದರೆ
ಮೊದಲು ವ್ಯಾಟ್ಸ್ಆ್ಯಪ್ ಆ್ಯಪ್ಲೀಕೇಶನ್ ಒಪನ್ ಮಾಡಿಕೊಳ್ಳಿ
ಸ್ಟೇಟಸ್ ಟ್ಯಾಬ್ ಕ್ಲಿಕ್ ಮಾಡಿ
ಸ್ಟೇಟಸ್ ಟ್ಯಾಬ್ನಲ್ಲಿರುವ ಪೆನ್ಸಿಲ್ ಐಕಾನ್ ಕ್ಲಿಕ್ ಮಾಡಿ
ಅಲ್ಲಿರುವ ಮೈಕ್ರೋಫೋನ್ ಬಟಲ್ ಒತ್ತಿ ಹಿಡಿದು ನಿಮ್ಮ ಧ್ವನಿ ರೆಕಾರ್ಡ್ ಮಾಡಿ
ಮೈಕ್ರೋಫೋನ್ ಬಟನ್ ರಿಲೀಸ್ ಮಾಡಿ, ಸ್ಟೇಟಸ್ಗೆ ವಾಯ್ಸ್ ಆ್ಯಡ್ ಮಾಡಬೇಕು.
ವ್ಯಾಟ್ಸ್ಆ್ಯಪ್ ಬಳಕೆದಾರು ಈ ಅಂಶವನ್ನು ಗಮನಿಸಬೇಕಾಗಿದ್ದು ಎಂದರೆ ವಾಯ್ಸ್ ಸ್ಟೇಟಸ್ನಲ್ಲಿ 30 ಸೆಕೆಂಡ್ಗಿಂತ ಹಚ್ಚು ವಾಯ್ಸ್ ರೆಕಾರ್ಡ್ ಮಾಡಿ ಸ್ಟೇಟಸ್ಗೆ ಹಾಕಲು ಸಾಧ್ಯವಿಲ್ಲ. ಸ್ಟೇಟಸ್ ಹಾಕುವ ವಾಯ್ಸ್ ನೋಟ್ 30 ಸೆಕೆಂಡ್ ಒಳಗಿರಬೇಕು.
ಇತ್ತೀಚೆಗೆ ವ್ಯಾಟ್ಸ್ಆ್ಯಪ್ ಹಲವು ಫೀಚರ್ಸ್ ಬಿಡುಗಡೆ ಮಾಡಿತ್ತಲೆ ಇದೆ. ಅದರಲ್ಲಿ ಬಳಕೆಗಾರರು ಗ್ರೂಪ್ ಕಾಲ್ನಲ್ಲಿ ಹೊಸ ಫೀಚರ್ ಏನೆಂದರೆ ಗ್ರೂಪ್ನಲ್ಲಿರುವ ಎಲ್ಲಾ ಸದಸ್ಯರ ಬದಲು ಆಯ್ದ ಸದಸ್ಯರಿಗೆ ಕಾಲ್ ಮಾಡುವ ಫೀಚರ್ ನೀಡಲಾಗಿದೆ. ಇನ್ನು ವ್ಯಾಟ್ಸ್ಆ್ಯಪ್ ಬಳಕೆದಾರರು ಮೆಸೇಜನ್ನು ಎಡಿಟ್ ಮಾಡಲು ಅವಕಾಶ ನೀಡಿದೆ. ತಾವು ಕಳುಹಿಸಿದ ಸಂದೇಶವನ್ನು 15 ನಿಮಿಷದೊಳಗೆ ಎಡಿಟ್ ಮಾಡಲು ಅವಕಾಶ ನೀಡಲಾಗಿದೆ. ಆದರೆ ಸಂದೇಶದಲ್ಲಿರುವ ಪದಗಳ ತಪ್ಪುಗಳನ್ನು ಸರಿಪಡಿಸಬಹುದಾಗಿದೆ.
ಇಷ್ಟೇ ಅಲ್ಲದೆ ವ್ಯಾಟ್ಸ್ಆ್ಯಪ್ ಇನ್ನೊಂದು ವಿಶೇಷವಾಗಿ ಚಾಟ್ ಲಾಕ್ ಫೀಚರ್ಸ್ ಕೂಡ ಪರಿಚಯಿಸುತಿದೆ. ನಮಗೆ ಬಂದಿರುವ ಸಂದೇಶಗಳನ್ನು ಚಾಟ್ ಲಾಕ್ ಫೀಚರ್ ಮೂಲಕ ಪ್ರೈವೇಟ್ ಮಾಡಲು ಸಾಧ್ಯವಿದೆ. ಚಾಟ್ ಲಾಕ್ ಮಾಡಿದ ಸಂದೇಶಗಳು ಯಾರಿಗೂ ಕಾಣಿಸುವುದಿಲ್ಲ. ವ್ಯಾಟ್ಸ್ಆ್ಯಪ್ ಆಪ್ಲಿಕೇಶನ್ ಒಪನ್ ಆಗಿದ್ದರೂ ಲಾಕ್ ಆಗಿರುವ ಸಂದೇಶಗಳು ಕಾಣಿಸುವುದಿಲ್ಲ. ಫಿಂಗರ್ ಪ್ರಿಂಟ್ ಲಾಕ್ ಮೂಲಕ ಒಪನ್ ಮಾಡಿದರೆ ಲಾಕ್ ಆಗಿರುವ ಮೆಸೇಜೇಗಳು ಪ್ರತ್ಯೇಕ ಫೋಲ್ಡರ್ನಲ್ಲಿ ಕಾಣಿಸಲಿದೆ. ಹೀಗೆ ವಾಟ್ಸಪ್ ದಿನ ದಿನ ಹೊಸ ಹೊಸ ಫೀಚರ್ಸ್ ಗಳನ್ನು ಬಳಕೆದಾರರಿಗೆ ನೀಡುತ್ತಾ ಬರುತ್ತಿದೆ.