ಎಸ್ಬಿಐ ಕಾರ್ಡ್ಗ ಗೆ ಬೆಳ್ಳಿಹಬ್ಬದ ಸಂಭ್ರಮ. 1998ರಲ್ಲಿ ಆರಂಭವಾದ, ಎಸ್ಬಿಐ ಕಾರ್ಡ್ ಭಾರತೀಯ ಕ್ರೆಡಿಟ್ ಕಾರ್ಡ್ ಜಗತ್ತಿನಲ್ಲಿ ಪಾವತಿಗಳನ್ನು ಮಾಡುವ ವಿಧಾನದಲ್ಲಿ ಕ್ರಾಂತಿಯನ್ನು ಮೂಡಿಸಲು ನಾಂದಿ ಹಾಡಿತ್ತು. 60ಕ್ಕೂ ಅಧಿಕ ಕ್ರೆಡಿಟ್ ಕಾರ್ಡ್ ವೈವಿಧ್ಯಗಳೊಂದಿಗೆ ಎಸ್ಬಿಐ ಕಾರ್ಡ್ ತನ್ನ ಗ್ರಾಹಕರ ಅಗತ್ಯತೆಗಳನ್ನು ಪೂರೈಸುತ್ತಾ ಬಂದಿದೆ. ಮಾರುಕಟ್ಟೆಯ ವಿಸ್ತಾರ, ಗ್ರಾಹಕರ ಸ್ಥಿತಿಗತಿ, ಖರೀದಿ ಸಾಮರ್ಥ್ಯದಲ್ಲಿನ ಅಭಿವೃದ್ಧಿ ಮತ್ತು ಹೆಚ್ಚಿನ ಬ್ರ್ಯಾಂಡ್ ಮೌಲ್ಯದೊಂದಿಗೆ ಮಾರ್ಚ್ 2023ರ ಹೊತ್ತಿಗೆ ಬ್ರ್ಯಾಂಡ್ 16 ಮಿಲಿಯನ್ ಕಾರ್ಡ್ಗಳನ್ನು ದಾಟಿ ಮುನ್ನುಗುತ್ತಿದೆ.
ಈ ಉತ್ತಮ ಪಯಣಕ್ಕಾಗಿ ಎಸ್ಬಿಐ ಕಾರ್ಡ್ ತನ್ನ ಗ್ರಾಹಕರಿಗೆ ಆಭಾರಿಯಾಗಿದೆ ಮತ್ತು ಈ ಸಂಭ್ರಮದಲ್ಲಿ ಗ್ರಾಹಕರೂ ಸಹ ಪಾಲ್ಗೊಳ್ಳುವಂತೆ ಮಾಡುವ ಸಲುವಾಗಿ ಪ್ರಯಾಣ, ಮನರಂಜನೆ, ಆಹಾರ, ಆಭರಣ, ಫ್ಯಾಷನ್, ಎಲೆಕ್ಟ್ರಾನಿಕ್ಸ್ ಹೀಗೆ ಇತ್ಯಾದಿ ಹಲವಾರು ವಿಭಾಗಗಳಲ್ಲಿ ಗ್ರಾಹಕರ ಖರೀದಿಯ ಅನುಭವವನ್ನು ಮಧುರವಾಗಿಸಲು ಅತ್ಯಾಕರ್ಷಕ ಆಫರ್ಗಳನ್ನು ಆರಂಭಿಸುತ್ತಿದೆ.
ನೀವೆನದರು ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಉತ್ಸಾಹ ಹೊಂದಿದ್ದರೆ, ಎಸ್ಬಿಐ ಕಾರ್ಡ್ ನಿಮಗೆ ಆಕರ್ಷಕ ಕೊಡುಗೆಯನ್ನು ನೀಡುತ್ತಿದ್ದು, ‘ಎಲ್ಜಿ’ ಮತ್ತು ‘ಸ್ಯಾಮ್ಸಂಗ್’ ವಸ್ತುಗಳ ಮೇಲೆ ಕ್ರಮವಾಗಿ 26% ತ್ವರಿತ ರಿಯಾಯಿತಿ ಮತ್ತು 27.5% ವರೆಗೆ ಕ್ಯಾಶ್ಬ್ಯಾಕ್ ಒದಗಿಸುತ್ತದೆ. ಈ ಕೊಡುಗೆಗಳು ಈ ವರ್ಷದ ಮೇ 1 ರಿಂದ ಜೂನ್ 30ರವರೆಗೆ ಲಭ್ಯವಿದೆ.
ನಮ್ಮ ವಾರ್ಡ್ರೋಬ್ ಅನ್ನು ನವೀಕರಿಸಲು ನಾವೇನಾದರು ಬಯಸಿದರೆ ಫ್ಯಾಷನ್ ಉತ್ಸಾಹಿಗಳಾಗಿದ್ದರೆ, ‘ಅಜೀಯೋ’ ಮತ್ತು ‘ಮಿಂತ್ರಾ’ದಂತಹ ಪ್ಲಾಟ್ಫಾರ್ಮ್ಗಳಲ್ಲಿ ಎಸ್ಬಿಐ ಕಾರ್ಡ್ 10% ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ. 2023ರ ಮೇ 15 ರಿಂದ ಮೇ 21ರವರೆಗೆ ಈ ಆಫರ್ಗಳು ಲಭ್ಯವಿದೆ.
ಪ್ರವಾಸಕ್ಕೆ ಹೋಗಬೇಕೆಂದು ಯೋಚಿಸುತ್ತಿದ್ದರೆ ಎಸ್ಬಿಐ ಕಾರ್ಡ್ ಇಲ್ಲೂ ನಿಮ್ಮ ನೆರವಿಗೆ ಬರುತ್ತದೆ. ಈ ಬ್ರ್ಯಾಂಡ್ ‘ಇಕ್ಸಿಗೋ’ನಲ್ಲಿ ದೇಶೀಯ ವಿಮಾನಯಾನದಲ್ಲಿ ಬೃಹತ್ 15% ರಿಯಾಯಿತಿಯನ್ನು ನೀಡುತ್ತಿದ್ದು, ಇದು 2023ರ ಮೇ 16 ರಿಂದ ಜೂನ್ 27ರವರೆಗೆ ಪ್ರತಿ ಮಂಗಳವಾರ ಮಾನ್ಯವಾಗಿರುತ್ತದೆ. ‘ಕ್ಲಿಯರ್ಟ್ರಿಪ್’ನಲ್ಲೂ ದೇಶೀಯ ವಿಮಾನಯಾನದಲ್ಲಿ 12% ರಿಯಾಯಿತಿ ಮೂಲಕ ನೀವು ಈ ಕೊಡುಗೆಯ ಹೆಚ್ಚಿನ ಲಾಭವನ್ನು ಪಡೆಯಬಹುದು. ಈ ಕೊಡುಗೆ 2023ರ ಮೇ 20 ರಿಂದ ಜೂನ್ 25ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರ ಲಭ್ಯವಿದೆ. ಈ ಮೂಲಕ ಪ್ರವಾಸದ ಬಯಕೆಯನ್ನು ಪೂರ್ಣವಾಗಿ ಈಡೆರಿಸಿಕೊಳ್ಳುವ ಅವಕಾಶ ನಮಗೆ ಎಸ್ ಬಿಐನಲ್ಲಿದೆ.
ನಮ್ಮ ಮನೆಯಲ್ಲಿ ಪಾರ್ಟಿಯನ್ನು ಯೋಜಿಸಲು ನಾವು ಬಯಸಿದ್ದರೆ ಸ್ವಿಗ್ಗಿ’ ಮೇಲಿನ ನಮ್ಮ ಆರ್ಡರ್ಗಳ ಮೇಲೆ 15% ರಿಯಾಯಿತಿಯನ್ನು ಮತ್ತು ‘ಡೊಮಿನೋಸ್’ ಆ್ಯಪ್ನಲ್ಲಿ ರೂ. 200 ರಿಯಾಯಿತಿಯನ್ನೂ ಎಸ್ಬಿಐ ಕಾರ್ಡ್ ಘೋಷಿಸಿದೆ. ಈ ಕೊಡುಗೆ 2023ರ ಮೇ 15 ರಿಂದ ಮೇ 21ರ ತನಕ ಲಭ್ಯವಿದೆ.
ಹೀಗೆ ವಿವಿಧ ವಿಭಾಗಗಳಲ್ಲಿ ವೈವಿಧ್ಯಮಯ ಆಫರ್ಗಳನ್ನು ನೀಡುವ ಮೂಲಕ ಎಸ್ಬಿಐ ಕಾರ್ಡ್ ತನ್ನ ಕಾರ್ಡುದಾರರ ಶಾಪಿಂಗ್ ಅನುಭವವನ್ನು ಹೆಚ್ಚಿಸಿದೆ. ಹೀಗಾಗಿ, ನಿಮ್ಮ ಶಾಪಿಂಗ್ ಲಿಸ್ಟ್ ಅನ್ನು ಸಿದ್ಧ ಮಾಡಿಟ್ಟುಕೊಂಡು, ಎಸ್ಬಿಐ ಕಾರ್ಡ್ನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಭಾಗಿಯಾಗುವ ಸದಾಅವಕಾಶ ನಮ್ಮ ಕೈಲಿದೆ.