ಸೃಷ್ಟಿಕರ್ತನು ತನ್ನ ಸೃಷ್ಟಿಗಳ ಮೂಲಕ ಹಲವಾರು ವರದಾನಗಳನ್ನು ಮಾನವನಿಗೆ ನೀಡಿದ್ದಾನೆ. ನೈಸರ್ಗಿಕವಾಗಿ ಲಭಿಸುವಂತಹ ಔಷದೋಪಕರಣಗಳು ಆ ವರದಾನಗಳಲ್ಲೊಂದು.
ಗುಡ್ಡ ಬೆಟ್ಟಗಳಿಂದ ಹಿಡಿದು ಅತೀ ಸಣ್ಣ ಗಾತ್ರದ ಗಿಡ ಮೂಲಿಕೆಗಳಲ್ಲೂ ಮಾನವನ ಊಹೆಗೂ ಸಿಲುಕದ ಔಷಧೀಯ ಗುಣಗಳಿವೆ. ಭೋರ್ಗರೆವ ಕಡಲು ಕೂಡ ಇದಕ್ಕೆ ಹೊರತಾಗಿಲ್ಲ.
ಹಿಂದೆಂದೋ ನದಿ ತೀರಕ್ಕೆ ಹೋಗಿ ಸ್ನಾನ ಮಾಡುತ್ತಿದ್ದ ಜನ, ತಮಗರಿವಿಲ್ಲದೆ ತಮ್ಮ ದೇಹದೊಳಗೆ ಔಷಧೀಯ ಗುಣಗಳನ್ನು ಸೇವಿಸುತ್ತಿದ್ದರು. ನದಿಗಳು ಬತ್ತಿ, ಹೊಳೆ ಹಳ್ಳಗಳು ಮಾನವ ವಾಸ ಸ್ಥಳವಾದ ನಂತರ ಮಾನವ ನಿರ್ಮಿತ ಕ್ಲೋರಿನ್ ಮಿಶ್ರಿತ ನೀರು ಮಾನವ ಮನೋರಂಜನೆಯ ಭಾಗವಾಯಿತು. ಕಡಲ ತೀರದಲ್ಲಿರುವ ಜನರು ವಾಯು ವಿಹಾರಕ್ಕಾಗಿ ಮತ್ತು ಪ್ರಕೃತಿ ಸೌoದರ್ಯದ ಸವಿಯನ್ನು ಉಣ್ಣುವುದಕ್ಕಾಗಿ ಮಾತ್ರ ಸಮುದ್ರ ತೀರದತ್ತ ಮುಖ ಮಾಡುತ್ತಿರುವ ಕಾಲಘಟ್ಟದಲ್ಲಿ ಕಡಲ ತೀರದ ಔಷಧೀಯ ಗುಣಗಳ ಕಡೆಗಣನೆ ವಿರಳವಾಗಬೇಕಿದೆ.
ಒಂದೊಮ್ಮೆ ಮಿಂದು ಎದ್ದರೆ ದೇಹಕ್ಕೂ ಮನಸ್ಸಿಗೂ ಆರೋಗ್ಯ ಪ್ರಾಪ್ತಿಯಾಗುವ ಗುಣವಿರುವ ಕಡಲ ನೀರನ್ನು, ಸಮುದ್ರದಂಚಿನ ಜನರು ಮತ್ತಷ್ಟು ಸದುಪಯೋಗ ಮಾಡಿಗೊಳ್ಳಬೇಕಿದೆ. ತಿಂಗಳಿಗೆ ಒಮ್ಮೆಯಾದರೂ ವಾಯುವಿಹಾರದಿಂದಿಗೆ ಆರೋಗ್ಯ ದೃಷ್ಟಿ ಯಿಂದಲೂ ಕಡಲ ನೀರ ಸ್ನಾನ ಮಾಡಬೇಕು. ಚರ್ಮ ಸಂಬಂಧಿ ಕಾಯಿಲೆ ಗಳನ್ನೂ ದೂರ ಮಾಡಬಲ್ಲ ನೀರು, ಮನೆಯoಗಳದಲ್ಲೇ ಇರುವಾಗ, ಅಂಗಳದ ಗಿಡದಲ್ಲಿರುವ ಮದ್ದಿನ ಬೆಲೆ ಅರಿಯದ ಮೂರ್ಖರಾಗುತ್ತೇವೆ ನಾವು. ಆದ್ದರಿಂದ ಸೃಷ್ಟಿ ಕರ್ತ ನೀಡಿರುವ ಅಭೂತಪೂರ್ವ ವರದಾನವನ್ನು ಆಲoಗಿಸಿ ಆಧುನಿಕ ಜೀವನದಲ್ಲಿ ನೈಸರ್ಗಿಕ ಆರೋಗ್ಯದತ್ತ ಹೆಜ್ಜೆ ಇಡಬೇಕಿದೆ.