ಚಾಂದ್ ಬಾಲಿ ಬಗ್ಗೆ ಕೇಳಿದ್ದೀರಾ? ಇದು ರಾಜಸ್ಥಾನದ ರಾಜವಂಶ ಮತ್ತು ಹೈದರಾಬಾದ್ನ ನಿಜಾಮರ ಆಭರಣಗಳ ವಿನ್ಯಾಸಗಳ ಮನಮೋಹಕ ಆಭರಣಗಳಲ್ಲಿ ಒಂದು.
ಚಾಂದ್ ಎಂದರೆ ಚಂದ್ರ ಮತ್ತು ಬಾಲಿ ಎಂದರೆ ಕಿಯೋಲೆ ಎಂದರ್ಥ. ಅರ್ಧಚಂದ್ರನ ಆಕಾರದಲ್ಲಿ ರೂಪುಗೊಂಡಿರಲಿದೆ. ಇದರಲ್ಲಿ ಸಣ್ಣ ಸಣ್ಣ ಮುತ್ತುಗಳನ್ನು ಪೋಣಿಸಿರುತ್ತಾರೆ.
ಆರಂಭದಲ್ಲೇ ಹೇಳಿದ ಹಾಗೆ ಇದನ್ನು ರಾಜವಂಶ, ನಿಜಾಮರ ಕಾಲದಲ್ಲಿ ವಿನ್ಯಾಸಗೊಳಿಸಿದ್ದು, ಇದರ ಮೂಲ ಕೆದಕಿದರೆ ಮಧ್ಯಕಾಲೀನ ಆಡಳಿತಗಾರರು ಮತ್ತು ಮೊಘಲ್ ಶ್ರೀಮಂತರ ಕಾಲದಿಂದಲೂ ಇದನ್ನು ಕಾಣಬಹುದಾಗಿದೆ.
ಚಿನ್ನದ ಚಾಂದ್ ಬಾಲಿಯ ಕಿವಿಯೋಲೆಗಳ ಬೆಲೆ 17,500 ರೂ. ಗಳಿಂದ ಪ್ರಾರಂಭವಾಗುತ್ತದೆ. ಚಿನ್ನದ ಶುದ್ಧತೆ, ವಿನ್ಯಾಸ ಹಾಗೂ ತೂಕ ಎಲ್ಲವೂ ಸೇರಿ 4,40,000 ರೂ. ಗಳವರೆಗೂ ಹೆಚ್ಚಾಗಬಹುದು.
ಡೈಲಿ ವೇರ್ ಆರ್ಟಿಫೀಶಲ್ ಚಾಂದ್ ಬಾಲಿಯ ದರವು ಕೈ ಗೆಟಕುವಂತದ್ದು. 350 ಆರಂಭಿಕ ಬೆಲೆಯಾಗಿರುತ್ತದೆ.ಆನ್ ಲೈನ್ನಲ್ಲಿ ಕೊಂಚ ಕಡಿಮೆ ದರದಲ್ಲಿಯೇ ಚಾಂದ್ ಬಾಲಿ ಲಭ್ಯವಿದೆ.
ಯಾವುದೇ ಸಾಂಪ್ರದಾಯಿಕ ಉಡುಗೆಗೆ ಒಪ್ಪುವಂತಹ ಆಭರಣವಾಗಿದ್ದು, ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ಈ
ಆಭರಣಗಳನ್ನು ನಾಯಕಿಯರು ಧರಿಸಿದ್ದಾರೆ. ಆದರೂ ಈ ಆಭರಣವು ಜನಪ್ರಿಯತೆಗಳಿಸಿದು ರಾಮ್ ಲೀಲಾ ಸಿನಿಮಾದ ಮೂಲಕ.