ಬೆಂಗಳೂರು : ಪ್ರತಿಯೊಬ್ಬರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಆಹಾರದ ಶಕ್ತಿಯನ್ನು ವೃದ್ಧಿಸುವ ಉದ್ದೇಶದಿಂದ ನೆಸ್ಲೆ ಇಂಡಿಯಾ ಇಂದು ಮತ್ತು ನಾಳಿನ ಪೀಳಿಗೆಗೆಂದೇ ಹೊಸ ರಿಸೋರ್ಸ್ ಆ್ಯಕ್ಟೀವ್ (Resource Activ) ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಬಹು ಉಪಯೋಗಿಯಾಗಿದ್ದು, ಆ್ಯಕ್ಟೀವ್ ಮಿಲೇನಿಯಲ್ ಗಳ ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚಿನ ಪ್ರೊಟೀನ್ ಸಪ್ಲಿಮೆಂಟ್ ಗಳನ್ನು ಪೂರೈಸುವ ರೀತಿಯಲ್ಲಿ ಸಿದ್ಧಪಡಿಸಲಾಗಿದೆ. ಇದರ ಅನನ್ಯವಾದ `ನ್ಯೂ ಎಡ್ಜ್ ಫಾರ್ಮುಲಾ’ ದೊಂದಿಗೆ ರಿಸೋರ್ಸ್ ಆ್ಯಕ್ಟೀವ್ ಸ್ನಾಯುಗಳಿಗೆ ಉತ್ತಮ ಗುಣಮಟ್ಟದ ಪ್ರೊಟೀನ್ ಗಳು, ಪುಷ್ಟೀಕರಿಸಿದ ಕ್ಯಾಲ್ಸಿಯಂ ಮತ್ತು ವಿಟಮಿನ್ –ಡಿಯನ್ನು ನೀಡುತ್ತದೆ. ಇದರಿಂದ ಮೂಳೆಗಳ ಆರೋಗ್ಯ ರಕ್ಷಣೆಯಾಗುತ್ತದೆ ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಇದು ಫೈಬರ್ ಮತ್ತು ರೋಗನಿರೋಧಕ ಪೋಷಕಾಂಶಗಳನ್ನು ಸಹ ಒಳಗೊಂಡಿದ್ದು, ಸಪ್ಲಿಮೆಂಟ್ ಗಳ ಮೂಲಕ ಮಿಲೇನಿಯನ್ ಗಳ ಪೌಷ್ಟಿಕಾಂಶದ ಅಗತ್ಯತೆಗಳನ್ನು ಪೂರೈಸುತ್ತದೆ.
ವೇಗವಾಗಿ ಬೆಳೆಯುತ್ತಿರುವ ಪ್ರೊಟೀನ್ ಸಪ್ಲಿಮೆಂಟ್ ಮಾರುಕಟ್ಟೆಯ ಹೊರತಾಗಿಯೂ ವ್ಯಕ್ತಿಗಳಿಗೆ ಅನುಗುಣವಾಗಿ ಪೋಷಕಾಂಶಗಳನ್ನು ಒದಗಿಸುವ ಅಗತ್ಯವಿದೆ. ಅಧ್ಯಯನಗಳ ಪ್ರಕಾರ, 30 ವರ್ಷದ ವಯಸ್ಸಿನ ನಂತರ ಸ್ನಾಯುವಿನ ಶಕ್ತಿ ನಷ್ಟವಾಗುತ್ತಾ ಹೋಗುತ್ತದೆ. ಇದರ ಪರಿಣಾಮ ಮೂಳೆಯ ಸಾಂದ್ರತೆ, ಅಂಗಾಂಶಗಳ ಸ್ಥಗಿತ ಮತ್ತು ಚರ್ಮದ ಜಲಸಂಚಯನ ಹಾಗೂ ಸ್ಥಿತಿಸ್ಥಾಪಕತ್ವದಲ್ಲಿ ನಷ್ಟ ಉಂಟಾಗಿ ವಯಸ್ಸಾದವರಂತೆ ಕಾಣಲಾರಂಭಿಸುತ್ತಾರೆ. ಈ ಹಿನ್ನೆಲೆಯಲ್ಲಿ ರಿಸೋರ್ಸ್ ಆ್ಯಕ್ಟೀವ್ ಅನ್ನು ಇಂತಹ ವಯೋಮಾನದವರ ಪೌಷ್ಟಿಕಾಂಶದ ಅಗತ್ಯತೆಗಳನ್ನು ಪೂರೈಸಲೆಂದೇ ಕಸ್ಟಮೈಸ್ ಮಾಡಲಾಗಿದೆ. ಸ್ನಾಯುಗಳ ಆರೋಗ್ಯ, ಶಕ್ತಿ ವೃದ್ಧಿ, ಮೂಳೆ ಮತ್ತು ಚರ್ಮದ ಉತ್ತಮ ಆರೋಗ್ಯಕ್ಕೆ ಇದು ಸಹಾಯ ಮಾಡುತ್ತದೆ. ಗ್ರಾಹಕರು ವೆನಿಲ್ಲಾ ಬಿಸ್ಕೆಟ್ ಫ್ಲೇವರ್ ನಲ್ಲಿ ದೊರೆಯಲಿರುವ ಈ ರಿಸೋರ್ಸ್ ಆ್ಯಕ್ಟೀವ್ ಅನ್ನು ನೀರು ಅಥವಾ ಹಾಲಿನೊಂದಿಗೆ ಬೆರೆಸಿ ಆನಂದಿಸಬಹುದು.
ಈ ಹೊಸ ಉತ್ಪನ್ನದ ಬಿಡುಗಡೆ ಬಗ್ಗೆ ಮಾತನಾಡಿದ ನೆಸ್ಲೆ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾರಾಯಣನ್ ಅವರು, “ಪ್ರಬಲ ಬ್ರ್ಯಾಂಡ್ ಗಳು ಉತ್ಪನ್ನಗಳ ಮೂಲಕ ನೆಸ್ಲೆ ಇಂಡಿಯಾ ತನ್ನ ಗ್ರಾಹಕರ ಜೀವನಕ್ಕೆ ಮೌಲ್ಯವನ್ನು ಸೇರಿಸಲು ನಿರಂತರ ಪ್ರಯತ್ನದಲ್ಲಿ ಸಾಗಿದೆ. ಮಿಲೇನಿಯಲ್ ಗಳು ಸೇರಿದಂತೆ ಸಕ್ರಿಯ ವಯಸ್ಕರಿಗೆ ರಿಸೋರ್ಸ್ ಆ್ಯಕ್ಟೀವ್ ಅನ್ನು ಬಿಡುಗಡೆ ಮಾಡಲು ನಾವು ಸಂತೋಷಪಡುತ್ತಿದ್ದೇವೆ. ಈ ಹೊಸ ರಿಸೋರ್ಸ್ ಆ್ಯಕ್ಟೀವ್ ಒಂದು ವ್ಯಾಪಕವಾದ ಸಂಶೋಧನೆಯ ನಂತರ ಉತ್ಪಾದನೆಯಾಗಿರುವ ಉತ್ಪನ್ನವಾಗಿದೆ. ನೆಸ್ಲೆಯ ಗುಣಮಟ್ಟ ಮತ್ತು ಸುರಕ್ಷತೆಯ ಭರವಸೆಯಿಂದ ಬೆಂಬಲಿತವಾಗಿದೆ. ಈ ಬ್ರ್ಯಾಂಡ್ ಸಕ್ರಿಯ ಮಿಲೇನಿಯನ್ ಗಳ ಪೌಷ್ಟಿಖಾಂಶದ ಅಗತ್ಯತೆಗಳನ್ನು ಪೂರೈಸಲು ಮತ್ತು ಸಕ್ರಿಯ ಜೀವನವನ್ನು ನಡೆಸಲು ಅವರಿಗೆ ಸಹಾಯ ಮಾಡುತ್ತದೆ ಎಂಬ ವಿಶ್ವಾಸ ನಮ್ಮದಾಗಿದೆ’’ ಎಂದರು.
ಈ ರಿಸೋರ್ಸ್ ಆ್ಯಕ್ಟೀವ್ ಎಲ್ಲಾ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಮತ್ತು ದೆಹಲಿ ಎನ್ ಸಿಆರ್, ಕೋಲ್ಕತ್ತಾ, ಪುಣೆ, ಹೈದ್ರಾಬಾದ್, ಬೆಂಗಳೂರು, ಚೆನ್ನೈ, ಕೊಯಮತ್ತೂರು, ಕೊಚ್ಚಿ, ಕೋಝಿಕೋಡ್ ಮತ್ತು ತಿರುವನಂತಪುರ ಸೇರಿದಂತೆ ದೇಶದ 11 ನಗರಗಳಲ್ಲಿನ ಫಾರ್ಮಾಸಿಗಳು ಮತ್ತು ಕೆಮಿಸ್ಟ್ ಗಳಲ್ಲಿ ಲಭ್ಯವಿದೆ.
ನೆಸ್ಲೆ ಹೆಲ್ತ್ ಸೈನ್ಸ್ ಪೌಷ್ಟಿಕಾಂಶ ವಿಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. ಗ್ರಾಹಕರು, ರೋಗಿಗಳು, ವೈದ್ಯರು, ದಾದಿಯರು ಮತ್ತು ಆರೋಗ್ಯ ರಕ್ಷಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಆರೋಗ್ಯ ನಿರ್ವಹಣೆಯ ಹಾದಿಯನ್ನು ಬದಲಾಯಿಸುವ ಪೌಷ್ಟಿಕಾಂಶದ ಚಿಕಿತ್ಸಕ ಪಾತ್ರವನ್ನು ಮುನ್ನಡೆಸುವಲ್ಲಿ ಇದು ಕೇಂದ್ರೀಕರಿಸುತ್ತದೆ. ಪ್ರಮುಖ ಉತ್ಪನ್ನಗಳೆಂದರೆ ರಿಸೋರ್ಸ್ ಹೈ ಪ್ರೊಟೀನ್, ಪೆಪ್ಟಾಮೆನ್, ಆಪ್ಟಿಫಾಸ್ಟ್, ರಿಸೋರ್ಸ್ ಡಯಾಬಿಟಿಕ್, ರಿಸೋರ್ಸ್ ಫೈಬರ್ ಚಾಯ್ಸ್, ಥಿಕನ್ ಅಪ್ ಕ್ಲಿಯರ್, ರಿಸೋರ್ಸ್ ರೆನಲ್ ಮತ್ತು ರಿಸೋರ್ಸ್ ಡಯಾಲಿಸಿಸ್ ಆಗಿವೆ. ನೆಸ್ಲೆ ಹೆಲ್ತ್ ಸೈನ್ಸ್ ಸಹ ವೈದ್ಯಕೀಯ ತಜ್ಞರ ಸಮರ್ಪಿತ ತಂಡವನ್ನು ಹೊಂದಿದೆ. ಅವರು ಆರೋಗ್ಯ ವೃತ್ತಿಪರರೊಂದಿಗೆ ಆರೋಗ್ಯಕರವಾದ ಪರಿಸರ ಮತ್ತು ಶಿಕ್ಷಣದ ಬಗ್ಗೆ ಭಾರತದಾದ್ಯಂತ ಮೂಡಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.