ನಮ್ಮ ದೇಹವನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿಡಲು, ವಿವಿಧ ರೀತಿಯ ಉತ್ತಮ ಆಹಾರಗಳು ಮತ್ತು ಆರೋಗ್ಯಕರ ಪಾನೀಯಗಳನ್ನು ಸೇವಿಸುವುದು ಬಹಳ ಮುಖ್ಯವಾಗಿದೆ.
ಹಾಲು ಅನೇಕ ಪೋಷಕಾಂಶಗಳನ್ನು ಹೊಂದಿದೆ ಇನ್ನು ಅದರೊಟ್ಟಿಗೆ ಅರಿಶಿನವನ್ನು ಬೆರೆಸಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮ್ಮ ಅಜ್ಜಿ ಮುತ್ತಜ್ಜಿ ಕಾಲದಿಂದ ಹೇಳಿಕೊಂಡು ಬಂದಿದ್ದಾರೆ.
ಹಾಲು ಅನೇಕ ಪೋಷಕಾಂಶಗಳನ್ನು ಹೊಂದಿದ್ದು, ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿದೆ. ರಾತ್ರಿ ಮಲಗುವಾಗ ಸಾಮಾನ್ಯವಾಗಿ ಎಲ್ಲರೂ ಹಾಲನ್ನು ಕುಡಿಯುತ್ತಾರೆ. ಅರಿಶಿನವನ್ನು ಹಾಲಿನೊಂದಿಗೆ ಬೆರೆಸಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಅಷ್ಟಕ್ಕೂ ಹಾಲಿಗೆ ಅರಿಶಿನವನ್ನು ಬೆರೆಸಿ ಕುಡಿಯುವುದರಿಂದ ಸಿಗುವ ಪ್ರಯೋಜನಗಳು ಎಂದು ನೋಡುವುದಾದರೆ:
ಹೃದಯಕ್ಕೆ ಉತ್ತಮ: ಹೆಲ್ತ್ಲೈನ್ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಹಾಲಿನ ಜೊತೆಗೆ ಅರಿಶಿನವನ್ನು ಬೆರೆಸಿ ಕುಡಿಯುವುದು ಹೃದಯಕ್ಕೆ ತುಂಬಾ ಒಳ್ಳೆಯದು. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೇ ದೇಹವನ್ನು ಸದೃಢಗೊಳಿಸುತ್ತದೆ ಎಂದು ಹೇಳಬಹುದು.
ಕೀಲು ನೋವುಗಳನ್ನು ಕಡಿಮೆ: ಅರಿಶಿನ ಹಾಕಿದ ಹಾಲನ್ನು ಕುಡಿಯುವುದರಿಂದ ಕೀಲು ನೋವು ಬರುವುದಿಲ್ಲ.
ಮೆದುಳನ್ನು ಬಲಪಡಿಸುತ್ತೆ: ಅರಿಶಿನದ ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ಮೆದುಳು ಬಲಗೊಳ್ಳುತ್ತದೆ. ಇದು ನೆನಪಿನ ಶಕ್ತಿ ಸುಧಾರಿಸಲು ಉಪಯುಕ್ತ. ಇದರಲ್ಲಿರುವ ಪೋಷಕಾಂಶಗಳು ಮೆದುಳಿಗೆ ತುಂಬಾ ಒಳ್ಳೆಯದು.
ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮೂಲ: ಅರಿಶಿನ ಹಾಲು ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಒದಗಿಸುತ್ತದೆ. ಮೂಳೆಗಳನ್ನು ಬಲವಾಗಿಡಲು ಇದು ತುಂಬಾ ಪ್ರಯೋಜನಕಾರಿ. ಇದರ ಸೇವನೆಯು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ. ರಾತ್ರಿ ಮಲಗುವಾಗ ಇದನ್ನು ಕುಡಿಯುವುದರಿಂದ ಆಯಾಸ ನಿವಾರಣೆಯಾಗುವುದರಲ್ಲಿ ಸಂಶಯವಿಲ್ಲ.
ಜೀರ್ಣಾಂಗ ವ್ಯವಸ್ಥೆ: ಅರಿಶಿನ ಮಿಶ್ರಿತ ಹಾಲು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವ ಅನೇಕ ಗುಣಗಳನ್ನು ಹೊಂದಿರುತ್ತದೆ.
ರೋಗನಿರೋಧಕ ಶಕ್ತಿ: ಅರಿಶಿನ ಹಾಲಿನ ನಿಯಮಿತ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಅನೇಕ ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ.
ಒಣ ಕೆಮ್ಮು ಬರುವವರೆಗೆ ಈ ಅರಿಶಿಣ ಮಿಶ್ರಿತ ಹಾಲನ್ನು ಒಂದು ನಾಲ್ಕು ದಿನ ಕೊಡುವುದರಿಂದ ಅದು ಕಡಿಮೆ ಮಾಡಿಕೊಳ್ಳಬಹುದು. ಒಟ್ಟಿನಲ್ಲಿ ಅರಿಶಿನ ಬೆರೆಸಿದ ಬೆಚ್ಚಗಿನ ಹಾಲನ್ನು ಸೇವಿಸುವುದು ದೇಹದ ಎಲ್ಲಾ ದೃಷ್ಟಿಯಿಂದಲೂ ಹಿತವಾಗಿರುತ್ತದೆ.