ಬೆಂಗಳೂರು: ನಮ್ಮ ಮೆಟ್ರೋದ ನೀಲಿ ಮಾರ್ಗವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ಯು ಗರ್ಡರ್ ಗಳನ್ನು ಅಳವಡಿಕೆ ಮಾಡಲಾಗಿದೆ.
ಈ ಬಗ್ಗೆ ಬಿಎಂ ಆರ್ ಸಿಎಲ್ ಮಾಹಿತಿ ನೀಡಿದ್ದು, ನೀಲಿ ಮಾರ್ಗದ ಕಾಮಗಾರಿ ಪೂರ್ಣಗೊಳ್ಳಲು 2026ರ ಜೂನ್ ವರೆಗೆ ಕಾಲಾವಕಾಶ ಬೇಕಿದೆ ಎಂದಿದೆ.
ಈ ಕಾಮಗಾರಿಯು 2ಎ ಮತ್ತು 2ಬಿ ಎಂಬ ಎರಡು ಹಂತದಲ್ಲಿ ನಡೆಯಲಿದ್ದು, ಮೊದಲಿಗೆ ಕೆ.ಆರ್ ಪುರಂ ನಿಂದ ಸೆಂಟ್ರಲ್ ಸಿಲ್ಕ ಬೋರ್ಡ್ ಮತ್ತು ಕೆ. ಆರ್ ಪುರಂ ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ಸದ್ಯ ಚಿಕ್ಕಜಾಲ ಹತ್ತಿರ ಯು ಗರ್ಡರ್ ಗಳನ್ನು ಅಳವಡಿಸಲಾಗಿದೆ.
ಎನ್ ಸಿಸಿ ಲಿಮಿಟೆಡ್ ಸಂಸ್ಥೆಯು 2ಬಿ ಕಾಮಗಾರಿಯ ಕಾಂಟ್ರ್ಯಾಟ್ ಪಡೆದುಕೊಂಡಿದ್ದು, ಇದರಲ್ಲಿ 17 ಸ್ಟೇಷನ್ ಗಳು ಬರಲಿವೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜನರು ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುತ್ತಿದ್ದು, ಇದೇ ರೀತಿ ಹೆಬ್ಬಾಳ ರಸ್ತೆಯಲ್ಲೂ ಮೆಟ್ರೋ ಸಂಚಾರ ನಡೆಸಬೇಕು ಎಂದಿದ್ದಾರೆ. ಇನ್ನು ಕೆಲವರು ಈ ಬಾರಿಯಾದರೂ ಬಿಎಂಆರ್ ಸಿಎಲ್ ತನ್ನ ಡೆಡ್ ಲೈನ್ ಗೆ ಕಾಮಗಾರಿ ಮುಗಿಸಲಿ ಎಂದಿದ್ದಾರೆ.
ನಮ್ಮ ಮೆಟ್ರೋ ಮಾಗ್ರವೂ ಒಟ್ಟು 58.19 ಕಿ.ಮೀ ನಷ್ಟಿದ್ದು, ಭಾರತದಲ್ಲೇ ಅತಿದೊಡ್ಡ ಮೆಟ್ರೋ ಲೇನ್ ಆಗಲಿದೆ. ಅದರ ಸುಮಾರು 25ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂಬ ಮಾಹಿತಿ ಬಂದಿದೆ.