ಮಂಗಳೂರು : ಮಂಗಳೂರು ಹೊರವಲಯದ ಕುತ್ತಾರು ಮದನಿ ನಗರದಲ್ಲಿ ಗೋಡೆ ಕುಸಿದು ನಾಲ್ವರ ದುರಂತ ಸಾವು ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ.
ಸ್ಥಳ ಪರಿಶೀಲನೆ ನಡೆಸಿದ ಸಚಿವ ಕೃಷ್ಣ ಭೈರೇಗೌಡ ಕೇಂದ್ರ ಸರ್ಕಾರದ ಜಿಯೋ ಗ್ರಾಫಿಕಲ್ ಸಂಸ್ಥೆ ಮೂಲಕ ಎಲ್ಲೆಲ್ಲಿ ಭೂ ಕುಸಿತ ಆಗಬಹುದು ಎನ್ನುದನ್ನು ಗುರುತಿಸಿದ್ದೇವೆ . ಎಲ್ಲಿ ತೀರಾ ತೊಂದರೆಗೆ ಒಳಗಾಗಬಹುದು ಅಂತ ABC ಹೀಗೆ ಪಟ್ಟಿ ಮಾಡಿಕೊಂಡಿದ್ದೇವೆ.
ತೀವ್ರ ಸ್ವರೂಪದ ತೊಂದರೆ ಆಗುವ ಪ್ರದೇಶದ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದೇವೆ. ಇದಕ್ಕಾಗಿ ಅನುದಾನ ಕೂಡ ನೀಡುತ್ತೇವೆ. ಎಲ್ಲ ಕಡೆ ಗೋಡೆ ಕಟ್ಟಲು ಆಗುದಿಲ್ಲ.ಹಾಗೆ ಕಟ್ಟಿದ್ರೆ ಮಲೆನಾಡು ಇರುವಲ್ಲಿ ಅರ್ಧ ಗೋಡೆಗಳೇ ಆಗುತ್ತೆ. ತೀವ್ರ ಸಮಸ್ಯೆ ಇರುವಲ್ಲಿ ತಡೆಗೋಡೆ ಕಟ್ಟಲು 80 ಕೋಟಿ ಕೊಡಲು ನಿರ್ಧರಿಸಲಾಗಿದೆ.
ರಸ್ತೆ ಬದಿ ಭೂ ಕುಸಿತ ತಡೆಗಟ್ಟಲು ತಡೆಗೋಡೆ ನಿರ್ಮಿಸುವ ಯೋಜನೆ ಇದೆ. ಆದ್ರೆ ಬೆಟ್ಟ ಕಡಿದು ಮನೆ ಕಟ್ಟಿಕೊಂಡದ್ದು ಬೇರೆಯೇ ಸಮಸ್ಯೆ ಆಗುತ್ತೆ. ಮನೆ ಕಟ್ಟುವಾಗ ಫೌಂಡೇಷನ್ ಸರಿ ಹಾಕಿಲ್ಲ, ತಡೆ ಗೋಡೆ ಸರಿಯಾಗಿ ನಿರ್ಮಾಣ ಮಾಡಿಲ್ಲ. ಮನೆ ಕಟ್ಟುವಾಗ ರಕ್ಷಣಾ ಕ್ರಮದ ಬಗ್ಗೆ ಗಮನ ಕೊಡುತ್ತಿಲ್ಲ. ಹೀಗೆ ಸಾವು ನೋವು ಆದಾಗ ಸಮಾಜಕ್ಕೆ ವಿಷಾದದ ಸಂಗತಿ.
ಮನೆ ಕಟ್ಟುವಾಗ ಗಟ್ಟಿಯಾಗಿ ಕಟ್ಟದೇ ಸಮಸ್ಯೆ ಆಗುತ್ತೆ. ರಸ್ತೆ ಬದಿ ತಡೆಗೋಡೆ ಕಟ್ಟಲು ಎಲ್ಲ ಜಿಲ್ಲೆಗೆ ಅನುದಾನ ನೀಡುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇ ಗೌಡ ಹೇಳಿದರು.