2023 ಜೂನ್ 23ರಂದು ಬಿಡುಗಡೆ ಆದ ಎಲ್ಐಸಿ ಧನ್ ವೃದ್ಧಿ ಸ್ಕೀಮ್ ಸೆಪ್ಟಂಬರ್ 30ರವರೆಗೂ ಲಭ್ಯ ಇದೆ. ಪಾಲಿಸಿಯನ್ನು ಯಾವಾಗ ಬೇಕಾದರೂ ಸರೆಂಡ್ ಮಾಡುವ ಅವಕಾಶ ಇರುವ ಈ ಪಾಲಿಸಿಯ ಬಗ್ಗೆ ಮಾಹಿತಿ ಇಲ್ಲಿದೆ.
ಭಾರತದ ನಂಬರ್ ಒನ್ ವಿಮಾ ಸಂಸ್ಥೆ ಎಲ್ಐಸಿ (LIC) ಎಂದು ಎಲ್ಲರಿಗೂ ತಿಳಿದಿದೆ. ಎಲ್ಐಸಿ ವಿವಿಧ ರೀತಿಯ ಇನ್ಷೂರೆನ್ಸ್ ಸ್ಕೀಮ್ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಮಾರುಕಟ್ಟೆಯ ಅಗತ್ಯಗಳಿಗೆ ಮತ್ತು ವಿವಿಧ ಸ್ತರಗಳ ಜನರ ಅಗತ್ಯಗಳಿಗೆ ತಕ್ಕಂತೆ ಹೊಸ ಪಾಲಿಸಿ ಬಿಡುಗಡೆ ಮಾಡುತ್ತಿರುತ್ತದೆ.
ಎಲ್ಐಸಿ ಇತ್ತೀಚೆಗೆ ಬಿಡುಗಡೆ ಮಾಡಿದ ಧನ್ ವೃದ್ಧಿ ಎಂಬ ಹೊಸ ಸ್ಕೀಮ್ ಬಹಳ ಮಂದಿಯ ಗಮನ ಸೆಳೆದಿದೆ. ಇದು ಮಾಮೂಲಿಯ ಎಲ್ಐಸಿ ಸ್ಕೀಮ್ಗಿಂತ ತುಸು ಭಿನ್ನ. ಹೂಡಿಕೆದಾರರಿಗೆ ಹೆಚ್ಚಿನ ಹಣಕಾಸು ಸ್ವಾತಂತ್ರ್ಯ ಕೊಡುವ ಸ್ಕೀಮ್ ಇದಾಗಿದೆ. 2023, ಸೆಪ್ಟಂಬರ್ 30ರವರೆಗೂ ಈ ಪಾಲಿಸಿ ಲಭ್ಯ ಇರುತ್ತದೆ. ಎಲ್ಐಸಿ ಧನ್ ವೃದ್ಧಿ ಸ್ಕೀಮ್ನಲ್ಲಿ ಕೆಲ ವಿಶೇಷ ಫೀಚರ್ಗಳಿವೆ.
ಎಲ್ಐಸಿ ಧನ್ ವೃದ್ಧಿ ಪಾಲಿಸಿಯ ವಿಶೇಷತೆ ಏನೆಂದರೆ ಈ ಪಾಲಿಸಿಯನ್ನು ಯಾವಾಗ ಬೇಕಾದರೂ ಸರೆಂಡರ್ ಮಾಡುವ ಅವಕಾಶ ಇರುವುದು. ಪಾಲಿಸಿದಾರರು ತಮ್ಮ ಅಗತ್ಯತೆ ಮತ್ತು ಸಂದರ್ಭಗಳಿಗೆ ತಕ್ಕಂತೆ ಪ್ಲಾನ್ನಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ಹಾಗೆಯೇ, ಪಾಲಿಸಿ ಅವಧಿಯಲ್ಲೂ ಫ್ಲೆಕ್ಸಿಬಿಲಿಟಿ ಇದೆ. ಅಲ್ಪ ಅವಧಿಯಿಂದ ಹಿಡಿದು ದೀರ್ಘ ಅವಧಿಯವರೆಗೆ ವಿವಿಧ ಕಾಲಗಳಿಗೆ ಪಾಲಿಸಿ ಪಡೆಯಬಹುದು. 10, 15 ಮತ್ತು 18 ವರ್ಷಗಳ ಅವಧಿಗೆ ಈ ಪಾಲಿಸಿ ಲಭ್. ನೀವು ಮಧ್ಯದಲ್ಲಿ ಯಾವಾಗ ಬೇಕಾದರೂ ಪಾಲಿಸಿ ಕೈಬಿಡಬಹುದು. ಪಾಲಿಸಿ ಆರಂಭಿಸಿ 3 ವರ್ಷದೊಳಗೆ ನೀವು ಹಿಂಪಡೆಯುವುದಾದರೆ, ನೀವು ಅಲ್ಲಿಯವರೆಗೆ ಕಟ್ಟಿದ ಪ್ರೀಮಿಯಮ್ನ ಶೇ. 75ರಷ್ಟು ಮೊತ್ತವನ್ನು ಪಡೆಯಬಹುದು. 3 ವರ್ಷ ಮೇಲ್ಪಟ್ಟಿದ್ದರೆ ಶೇ. 90ರಷ್ಟು ಪ್ರೀಮಿಯಮ್ ಸಿಗುವಂತ ಅವಕಾಶ ಈ ಪೊಲೀಸಿಯಲ್ಲಿದೆ.
ಎಲ್ಐಸಿ ಧನ್ ವೃದ್ಧಿ ಪಾಲಿಸಿಯಲ್ಲಿ ಕನಿಷ್ಠ ವಯಸ್ಸು 90ದಿನದಿಂದ ಹಿಡಿದು 8 ವರ್ಷದವರೆಗೂ ಇದೆ. ಗರಿಷ್ಠ ವಯಸ್ಸು 32 ವರ್ಷದಿಂದ 60 ವರ್ಷದವರೆಗೂ ಇದನ್ನು ಮಾಡಿಸಬಹುದಾಗಿದೆ.
ಈ ಪಾಲಿಸಿಯಲ್ಲಿ ಕನಿಷ್ಠ ಭರವಸೆಯ ಮೊತ್ತ 1,25,000 ರೂ ಇದೆ. ಇದರ ಜೊತೆಗೆ ಪ್ರತೀ 1,000 ರೂಗೆ 25ರಿಂದ 75 ರೂವರೆಗೆ ಪ್ರತೀ ವರ್ಷವೂ ಹೆಚ್ಚುವರಿ ಹಣ ಜಮೆಯಾಗುತ್ತಾ ಹೋಗುತ್ತದೆ. ಪಾಲಿಸಿ ಮೆಚ್ಯೂರ್ ಆದಾಗ ಬೇಸಿಕ್ ಸಮ್ ಅಶೂರ್ಡ್ನಲ್ಲಿರುವ ಮೊತ್ತದ ಜೊತೆಗೆ ಹೆಚ್ಚುವರಿ ಹಣವೂ ಸೇರಿ ಸಿಗುತ್ತದೆ. ಬೇರೆ ಸ್ಕೀಮ್ಗಳಂತೆ ಇದರಲ್ಲೂ ಸಾಲ ಪಡೆಯುವ ಅವಕಾಶ ಇರುತ್ತದೆ. ಬಡ್ಡಿ ದರ ಬಹಳ ಕಡಿಮೆ ಇರುವುದೆ ಇದರ ವಿಶೇಷವಾಗಿದೆ.