ಬೊಗೊಟ್: ಕೊಲಂಬಿಯಾದ ಅಮೆಜಾನ್ ಕಾಡಿನಲ್ಲಿ ಎರಡು ವಾರಗಳ ಹಿಂದೆ ವಿಮಾನ ಅಪಘಾತ ಉಂಟಾಗಿತ್ತು. ಆದ್ರೆ, ಇದೀಗ ಅದರಲ್ಲಿದ್ದ 11 ತಿಂಗಳ ಮಗು ಸೇರಿದಂತೆ ನಾಲ್ಕು ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಅಧ್ಯಕ್ಷ ಗುಸ್ಟಾವೊ ಪೆಟ್ರೋ ಬುಧವಾರ ಹೇಳಿದ್ದಾರೆ. ಇದು ‘ದೇಶಕ್ಕೆ ಸಂತೋಷದ ಸುದ್ದಿ’ ಎಂದು ಹೇಳಿದ್ದಾರೆ.
ಪೆಟ್ರೋ ಅವರು ಟ್ವಿಟರ್ನಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ, ʻಮಿಲಿಟರಿಯಿಂದ ಕಠಿಣ ಹುಡುಕಾಟ ಪ್ರಯತ್ನಗಳ ನಂತರ ಮಕ್ಕಳನ್ನು ಪತ್ತೆ ಮಾಡಲಾಗಿದೆʼ ಎಂದು ಹೇಳಿಕೊಂಡಿದ್ದಾರೆ.
ಮೇ 1 ರಂದು ವಿಮಾನ ಅಪಘಾತಕ್ಕೀಡಾಗಿ ಮೂವರು ಸಾವನ್ನಪ್ಪಿದ್ದರು. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇನ್ನುಳಿದವರನ್ನು ಹುಡುಕಲು ಅಧಿಕಾರಿಗಳು ಸ್ನಿಫರ್ ಡಾಗ್ಗಳೊಂದಿಗೆ 100 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದ್ದರು.
11 ತಿಂಗಳ ಮಗು ಸೇರಿ 13, 9 ಮತ್ತು 4 ವರ್ಷ ವಯಸ್ಸಿನ ಮಕ್ಕಳು ದಕ್ಷಿಣ ಕ್ಯಾಕ್ವೆಟಾ ವಿಭಾಗದಲ್ಲಿ ಕಾಡಿನಲ್ಲಿ ಅಲೆದಾಡುತ್ತಿದ್ದಾರೆ ಎಂದು ರಕ್ಷಕರು ನಂಬಿದ್ದರು. ಅದರಂತೇ ಬುಧವಾರ ಸಶಸ್ತ್ರ ಪಡೆಗಳು, ರಕ್ಷಕರಿಂದ ಶೋಧ ಪ್ರಯತ್ನಗಳು ತೀವ್ರಗೊಂಡವು, ಇದೀಗ ಮಕ್ಕಳನ್ನು ಅವರು ರಕ್ಷಿಸಿದ್ದಾರೆ.
ಸೋಮವಾರ ಮತ್ತು ಮಂಗಳವಾರ, ಸೈನಿಕರು ಪೈಲಟ್ ಮತ್ತು ಇಬ್ಬರು ವಯಸ್ಕರ ಮೃತದೇಹಗಳನ್ನು ಸಶಸ್ತ್ರ ಪಡೆಗಳು ಕಂಡುಕೊಂಡರು. ಅವರು ಕೊಲಂಬಿಯಾದ ಅಮೆಜಾನ್ ಮಳೆಕಾಡಿನ ಪ್ರಮುಖ ನಗರಗಳಲ್ಲಿ ಒಂದಾದ ಸ್ಯಾನ್ ಜೋಸ್ ಡೆಲ್ ಗುವಿಯಾರ್ಗೆ ಹಾರುತ್ತಿದ್ದರು. ಮೃತ ಪ್ರಯಾಣಿಕರಲ್ಲಿ ಒಬ್ಬರಾದ ರಾನೋಕ್ ಮುಕುಟುಯ್ ಅವರು ಹ್ಯುಟೊಟೊ ಜನಾಂಗದ ನಾಲ್ಕು ಮಕ್ಕಳ ತಾಯಿಯಾಗಿದ್ದರು.