ರಾಜ್ಯದಲ್ಲಿ ಬಿಜೆಪಿ ಹಿನ್ನಡೆಯೊಂದಿಗೆ ಹಲವಾರು ಅನೀರಿಕ್ಷಿತ ಪರಿಣಾಮಗಳನ್ನು ಏದುರಿಸಬೇಕಾಯಿತು ಅದರಲ್ಲಿ ಮುಖ್ಯವಾಗಿ ಬಿಜೆಪಿ ಭದ್ರಕೋಟೆಯಾಗಿದ್ದ ಪತ್ತೂರು ಕ್ಷೇತ್ರವನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಪಕ್ಷ ಅಶೊಕ್ ರೈ ಗೆಲುವನ್ನು ಪಡೆದುಕೊಂಡಿದೆ. ಇದು ಕಾಂಗ್ರೆಸ್ ಗೆಲುವು ಎನ್ನುವುದಕ್ಕಿಂತ ಬಿಜೆಪಿ ಸೋಲು ಎಂಬಂತೆ ಬಿಂಬಿತವಾಗಿದೆ. ಬಿಜೆಪಿ ಮೂರನೇ ಸ್ಥಾನವನ್ನು ಪಡೆದಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ಕಳದ ಬಾರಿ ಬಿಜೆಪಿ ಸಂಜೀವ ಮಠಂದೂರು ಇಲ್ಲಿಯ ಶಾಸಕರಾಗಿದ್ದರು. ಆದರೆ ಬದಲಾವಣೆಯ ನೆಪದಲ್ಲಿ ಹೊಸ ಮುಖಕ್ಕೆ ಅವಕಾಶ ನೀಡಬೇಕೆಂದು ಆಶಾ ತಮ್ಮಪ್ಪ ಗೌಡ ಅವರಿಗೆ ಇ ಬಾರಿಯ ಟಿಕೆಟ್ನ್ನು ನೀಡಲಾಗಿತ್ತು. ಆದರೆ ಹಿಂದೂ ಸಂಘಟನೆಯ ನಾಯಕ ಅರುಣ್ ಪುತ್ತಿಲ ಅವರು ಕೂಡ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಕೈತಪ್ಪಿದ ಬೆನ್ನಲ್ಲೆ ಕಾರ್ಯಕರ್ತರ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅರುಣ್ ಪುತ್ತಿಲ ಎರಡನೇ ಸ್ಥಾನ ಪಡೆಯುವ ಮೂಲಕ ಬಿಜೆಪಿ ಮತ ಇಬ್ಬರು ಅಭ್ಯರ್ಥಿಗಳಿಗೆ ಹಂಚಿಹೋಗಿತ್ತು.
ಪ್ರವೀಣ್ ನಿಟ್ಟಾರು ಹತ್ಯೆ ಪರಿಣಾಮ:
ಕಳೆದ ವರ್ಷ ಜುಲೈನಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನಿಟ್ಟಾರು ಹತ್ಯೆ ಈ ಬಾರಿಯ ಪತ್ತೂರು ಕ್ಷೇತ್ರದ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ ಎಂದು ಹೇಳಲಾಗುತ್ತಿದೆ. ಆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಅಸಮಾಧನಗೊಂಡಿದ್ದು, ನೆಟ್ಟಾರು ಅಂತಿಮ ದರ್ಶನ ವೇಳೆ ನಳಿನ್ ಕುಮಾರ್ ಕಾರಿನ ಮೇಲೆ ನಡೆದ ದಾಳಿಯಲ್ಲಿ ಅರುಣ್ಪುತ್ತಿಲ ಅವರು ಹೆಸರು ಮುಖ್ಯವಾಗಿ ಕೇಳಿಬಂದಿತ್ತು. ಈ ಕಾರಣದಿಂದಾಗಿ ಅರುಣ್ ಪುತ್ತಿಲ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದರು.
ಅರುಣ್ ಪುತ್ತಿಲ ಚುನಾವಣಾ ಕಣಕ್ಕೆ ಇಳಿದ ನಂತರ ಬಿಜೆಪಿ ಪರವಾಗಿ ಪ್ರಚಾರ ನಡೆಸಿದ್ದರು. ಅಷ್ಟೇ ಅಲ್ಲದೇ ಜಿಲ್ಲೆಯ ಇತರ ಭಾಗದ ಬಿಜೆಪಿ ಕಾರ್ಯಕರ್ತರು ಕೂಡ ಪುತ್ತಿಲ ಪರವಾಗಿ ಧ್ವನಿ ಎತ್ತಿದ್ದರು. ಇದರಿಂದಾಗಿ ಪುತ್ತೂರು ಕ್ಷೇತ್ರವು ಪುತ್ತಿಲ ವರ್ಸ್ಸ್ ಬಿಜೆಪಿ ಎಂಬಂತೆ ಬಿಂಬಿಸಲಾಗಿತ್ತು. ಬಿಜೆಪಿ ಹೆಚ್ಚಿನ ಮತಗಳು ಪುತ್ತಿಲಗೆ ದೊರಕಿರುವುದು ಇಬ್ಬರ ಜಾಗದಲ್ಲಿ ಮೂರನೇಯವನಿಗೆ ಲಾಭ ಎಂಬಂತೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಜಯಭೇರಿಯನ್ನು ಬಾರಿಸಿದ್ದಾರೆ. ಅಶೋಕ್ ಕುಮಾರ್ ರೈ ಕೂಡ ಬಿಜೆಪಿಯ ಹಿನ್ನಲೆಯ ವ್ಯಕ್ತಿಯಾಗಿದ್ದು ಇದು ಕೂಡಾ ಬಿಜೆಪಿ ಸೋಲಿನ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.