ಸಾಮಾನ್ಯವಾಗಿ, ಶಾಲಾ ಬ್ಯಾಗ್ನ ಹೊರೆ ಮಗುವಿನ ಒಟ್ಟಾರೆ ತೂಕದ ಶೇಕಡಾ 10 ಕ್ಕಿಂತ ಹೆಚ್ಚಿದ್ದರೆ, ಅದು ಬೆನ್ನುಮೂಳೆಯ ವಕ್ರತೆಯನ್ನು ಉಂಟುಮಾಡಬಹುದು ಎಂದು ಅಧ್ಯಯನಗಳು ಹೇಳುತ್ತವೆ.
ಮಕ್ಕಳ ರಜೆಯಲ್ಲಿ ಮನೆಯಲ್ಲಿರುವಾಗ ಹೆಚ್ಚಿನ ಸಮಯವನ್ನು ಮೊಬೈಲ್ ವೀಕ್ಷಣೆ ಮಾಡಿದ್ದರಿಂದ ಮಕ್ಕಳಲ್ಲಿ ಕಳಪೆ ದೈಹಿಕ ಭಂಗಿಗೆ ಕಾರಣವಾಗಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈಗ ಶಾಲೆ ಆರಂಭವಾದ ಕೂಡಲೇ ಬ್ಯಾಗನ್ನು ತುಂಬಿಸಿ ಬೆನ್ನಿನ ಮೇಲೆ ಇಟ್ಟುಕೊಂಡು ಹೋಗಲು ಶುರು ಮಾಡುತ್ತಾರೆ, ಅದು ಬೆನ್ನುಮೂಳೆಯ ನೋವನ್ನು ಉಂಟುಮಾಡಬಹುದು ಸಹಜವಾಗಿರುತ್ತದೆ.
ಶಾಲಾ ಬ್ಯಾಗ್ ನ ನಿರಂತರ ತೂಕವು ಬೆನ್ನುಮೂಳೆಯ ಕಾಲಮ್ ಅನ್ನು ಸಂಕುಚಿತವಾಗಿಸುತ್ತದೆ ಮತ್ತು ಗಮನಾರ್ಹವಾದ ಬೆನ್ನುನೋವಿಗೆ ಕಾರಣವಾಗಬಹುದು. ಏಕೆಂದರೆ ಮಕ್ಕಳು ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರುವುದಿಲ್ಲ. ಅವರು ಸಂಪೂರ್ಣವಾಗಿ ಬೆಳೆದ ವಯಸ್ಕರಂತೆ ಸ್ನಾಯುಗಳು, ಅಗಲವಾದ ಭುಜಗಳು, ಕೀಲುಗಳು ಮತ್ತು ಬಲವಾದ ಮೂಳೆಗಳನ್ನು ಹೊಂದಿರುವುದಿಲ್ಲ. ಅದಕ್ಕಾಗಿ ನಾವು ಅವರ ಬ್ಯಾಗ್ ನಲ್ಲಿ ಎಷ್ಟು ಬೇಕು ಅಷ್ಟೇ ಪುಸ್ತಕ ಮತ್ತು ಪಟ್ಟಿಗಳನ್ನು ಹಾಕಿ ಕೊಡುವುದಕ್ಕೆ ಪೋಷಕರಾದ ನಾವೇ ಜಾಗೃತೆ ಮಾಡಬೇಕು.
NCERT ಮಾರ್ಗಸೂಚಿಯ ಪ್ರಕಾರ ಪೋಷಕರು ಮತ್ತು ಶಿಕ್ಷಕರು ಇಬ್ಬರೂ ಬೆನ್ನುಹೊರೆಯ ತೂಕವನ್ನು ಮಗುವಿನ ದೇಹದ ತೂಕದ ಶೇಕಡಾ 10 ಕ್ಕಿಂತ ಕಡಿಮೆಗೊಳಿಸಬೇಕು. ಚಿಕ್ಕ ವಯಸ್ಸಿನಿಂದಲೇ ಉತ್ತಮ ಭಂಗಿ ಅಭ್ಯಾಸಗಳನ್ನು ರೂಢಿಸಲು ಶಿಫಾರಸು ಮಾಡಬೇಕು. ಉತ್ತಮ ವ್ಯಾಯಾಮ ಮತ್ತು ಆಹಾರ ಪದ್ಧತಿಗಳು ಆರೋಗ್ಯಕರ ಜೀವನವನ್ನು ನಡೆಸಲು ಹೆಚ್ಚು ಸಹಕಾರಿ ಆಗಿದ್ದರಿಂದ ಪಾಲಕರು ಬ್ಯಾಗ್ ತೂಕವನ್ನು ಆಗಾಗ್ಗೆ ಪರಿಶೀಲಿಸಬೇಕು ಮತ್ತು ಮಕ್ಕಳು ದಿನವಿಡೀ ಅನಗತ್ಯ ನೋಟ್ಬುಕ್ಗಳನ್ನು ಒಯ್ಯುವುದನ್ನು ತಪ್ಪಿಸಬೇಕು.
ಬೆನ್ನು ಮತ್ತು ಭುಜದ ನೋವಿನ ಬಗ್ಗೆ ಮಕ್ಕಳನ್ನು ವಿಚಾರಿಸಿ, ಆರಂಭಿಕ ಹಂತದಲ್ಲೇ ಪರಿಶೀಲನೆ ಮಾಡುವುದರಿಂದ ಬೆನ್ನುಮೂಳೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಪ್ಪಿಸಬಹುದು. ನಿಮ್ಮ ಮಗುವಿಗೆ ಬೆನ್ನು ಅಥವಾ ಭುಜದ ನೋವನ್ನು ನಿರ್ಲಕ್ಷಿಸುವುದು ಅಪಾಯಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ.
ಈ ಎಲ್ಲ ಕಾರಣಕ್ಕಾಗಿ ಮಕ್ಕಳ ಸ್ಕೂಲ್ ಬ್ಯಾಗ್ ಅನ್ನು ನಾವು ಆದಷ್ಟು ಕಡಿಮೆ ಭಾರ ಇರುವ ಹಾಗೆ ನೋಡಿಕೊಳ್ಳುವುದು ಒಳ್ಳೆಯದು.