ಎಲ್ಲರ ಮನೆಯ ದೋಸೆಯು ತೂತು ಅನ್ನುವಂತೆ ಎಲ್ಲರ ಮನೆಯಲ್ಲಿ ಜಗಳ ಇದ್ದೇ ಇರುತ್ತದೆ ಹಾಗಂತ ಆ ಜಗಳವನ್ನೇ ದೊಡ್ಡದಾಗಿ ಮಾಡಿಕೊಂಡು ಸಮಸ್ಯೆ ಮಾಡಿಕೊಳ್ಳುವುದಕ್ಕಿಂತ ಚಿಕ್ಕ ಚಿಕ್ಕದ್ರಲ್ಲಿ ಸರಿಪಡಿಸಿಕೊಂಡು ಹೋಗುವುದು ಉತ್ತಮ ಇಲ್ಲವಾದಲ್ಲಿ ಅದು ಮಕ್ಕಳಿರುವ ಮನೆಯಾದರೆ ಅವರ ಮೇಲೆ ಪ್ರಭಾವ ಬೀರುತ್ತದೆ.
ಹೆತ್ತವರು ತಮ್ಮ ಮುಂದೆ ಜಗಳವಾಡುವುದನ್ನು ನೋಡಿದ ಮಕ್ಕಳು ಏನು ಮಾಡಬೇಕು ಎಂದು ತೋಚದೆ ಕೆಲವೊಮ್ಮೆ ಅಳಲು ಪ್ರಾರಂಭಿಸುತ್ತಾರೆ. ಜಗಳವಾಡುವ ದಂಪತಿ ಕೆಲವೊಮ್ಮೆ ದೂರವಾಗುತ್ತಾರೆ ಇದು ತುಂಬಾ ಚಿಂತೆಗೀಡು ಮಾಡುತ್ತದೆ. ಮಕ್ಕಳಿಗೆ ತಂದೆ ಮತ್ತು ತಾಯಿ ಇಬ್ಬರೂ ಮುಖ್ಯವಾಗಿದ್ದರಿಂದ ಇಬ್ಬರೂ ತಮ್ಮ ಜೀವನದಲ್ಲಿರಲಿಬೇಕೆಂದು ಬಯಸುತ್ತಾರೆ. ಅನೇಕ ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಚಾರವೆಂದರೆ ದಂಪತಿಗಳ ನಡುವೆ ಜಗಳಆಗಿ ಅವರು ದೂರ ಇರುವ ಪರಿಸ್ಥಿತಿ ತಂದುಕೊಳ್ಳುತ್ತಾರೆ.
ಆದರೆ ಪೋಷಕರು ತಮ್ಮ ಮಕ್ಕಳ ಮುಂದೆ ಜಗಳವಾಡುವುದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಮಕ್ಕಳು ತಮ್ಮ ಹೆತ್ತವರೊಂದಿಗೆ ಹೆಚ್ಚು ಸುರಕ್ಷಿತವಾಗಿರುತ್ತಾರೆ. ಆದರೆ ತಮ್ಮ ಕಣ್ಣ ಮುಂದೆ ಜಗಳಗಳು ನಡೆದಾಗ ಅವರು ತುಂಬಾ ಹೆದರುತ್ತಾರೆ. ಪೋಷಕರ ನಡುವೆ ಆಗಾಗ ನಡೆಯುವ ಹಿಂಸಾತ್ಮಕ ಜಗಳಗಳು ಮನೆ ಸುರಕ್ಷಿತ ಸ್ಥಳವಲ್ಲ ಎಂಬ ಭಾವನೆಯನ್ನು ಮಕ್ಕಳಿಗೆ ಉಂಟುಮಾಡಬಹುದಾದ ಸಾಧ್ಯತೆಯನ್ನು ತಂದುಡುತ್ತದೆ.
ಈ ಬಗ್ಗೆ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಎಂಡಿ ಸಮೀರ್ ಮಲ್ಹೋತ್ರಾ ಮಾತನಾಡಿ, ಮಗುವಿನ ನಡವಳಿಕೆ ಮತ್ತು ವ್ಯಕ್ತಿತ್ವವನ್ನು ರೂಪಿಸುವಲ್ಲಿ ಆರೋಗ್ಯಕರ ಕುಟುಂಬದ ವಾತಾವರಣವು ಪ್ರಮುಖ ಪಾತ್ರ ವಹಿಸುತ್ತದೆ. ಪೋಷಕರ ನಡುವೆ ಪದೇ ಪದೇ ಅನಾವಶ್ಯಕ ಜಗಳಗಳು, ಕೋಪವನ್ನು ನಿಯಂತ್ರಿಸದೇ ಕೆಟ್ಟದಾಗಿ ವ್ಯಕ್ತಪಡಿಸುವುದು, ಮಾತನಾಡುವುದು, ಅಸಹನೆ, ಮಾನಸಿಕ ಅಸ್ವಸ್ಥತೆಗಳು, ಅಹಂ, ಕೂಗಾಟ ಮತ್ತು ಒಬ್ಬರನ್ನೊಬ್ಬರು ದೂಷಿಸುವುದು ಇತ್ಯಾದಿಗಳು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ದಂಪತಿಗಳು ಕೆಲವೊಮ್ಮೆ ತಮ್ಮ ಸಂಗಾತಿಯನ್ನು ನೋಯಿಸುವ ಸಾಧನವಾಗಿ ಮಕ್ಕಳನ್ನು ಬಳಸಿಕೊಳ್ಳುತ್ತಾರೆ. ಮಕ್ಕಳೂ ಸಹ ಕೆಲವೊಮ್ಮೆ ತಮ್ಮ ಪೋಷಕರ ನಡುವಿನ ಜಗಳವನ್ನು ತಮ್ಮ ಅನುಕೂಲಕ್ಕೆ ಉಪಯೋಗಿಸಿಕೊಳ್ಳುತ್ತಾರೆ ಮತ್ತು ಸಮಸ್ಯೆಯನ್ನು ದೊಡ್ಡದಾಗಿ ಮಾಡುತ್ತಾರೆ. ಅದೇ ರೀತಿ, ಮಕ್ಕಳು ಹೆಚ್ಚಾಗಿ ತಮ್ಮ ಪೋಷಕರ ನಡುವಿನ ಜಗಳವನ್ನು ಆಂತರಿಕವಾಗಿ ದೊಡ್ಡ ಸಮಸ್ಯೆಯನ್ನು ಉಂಟುಮಾಡುತ್ತದೆ.
ಅಲ್ಲದೇ, ಪೋಷಕರ ನಡುವಿನ ಜಗಳಗಳು ಮಕ್ಕಳು ಕೆಟ್ಟ ಮಾತುಗಳನ್ನು ಕೇಳುವುದು, ಹೆಚ್ಚು ಕೋಪಗೊಳ್ಳುವುದು ಮತ್ತು ಸುಳ್ಳು ಹೇಳುವುದು ಮುಂತಾದ ಅನೇಕ ತಪ್ಪು ನಡವಳಿಕೆಗಳನ್ನು ಉಂಟುಮಾಡಬಹುದು.
ದಂಪತಿಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಸಂವಾದದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಪಟ್ಟು, ಜಗಳವು ಭವಿಷ್ಯದಲ್ಲಿ ಕಷ್ಟಕರವಾದ ಜೀವನ ಸನ್ನಿವೇಶಗಳನ್ನು ಎದುರಿಸಲು ನಿಮ್ಮ ಮಗುವಿನ ಸಾಮರ್ಥ್ಯ ಮತ್ತು ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆಯಿಂದ ಇದ್ದರೆ ಯಾವುದೇ ಅಹಿತಕರ ವಿಷಯಗಳು ನಡೆಯದ ಹಾಗೆ ನೋಡಿಕೊಳ್ಳಬಹುದು.