ಕೆಲವರು ತುಂಬಾ ಅಳುತ್ತಾರೆ, ಅಳುಮೂಂಜಿ ಅನಿಸಿಕೊಳ್ತಾರೆ. ಬೇಜಾರು, ಖುಷಿ, ಕೋಪ ಇವೆಲ್ಲವನ್ನು ಹೊರ ಹಾಕೋಕೆ ಜೋರಾಗಿ ಅಳೋದು ಕೆಲವರ ರೂಢಿ. ಇದರಿಂದ ಮನಸ್ಸು ತಿಳಿಯಾಗುತ್ತೆ, ಭಾವನೆಗಳನ್ನು ಹೊರ ಹಾಕಲು ಅಳೋದು ಸಹಜ. ಆದರೆ ಅಳುವುದರಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ?
ಸ್ಟ್ರೆಸ್ ಹಾರ್ಮೋನ್:
ಅಳುವುದರಿಂದ ಎಮೋಷನಲ್, ಸ್ಟ್ರೆಸ್ ಹಾಗೂ ಇತರೆ ಟಾಕ್ಸಿನ್ಸ್ ಗಳು ಹೊರ ಬರುತ್ತದೆ. ಇದರಿಂದ ಸ್ಟ್ರೆಸ್ ಕಡಿಮೆಯಾಗಿ ನೆಮ್ಮದಿಯಿಂದಿರಲು ಸಹಾಯ ಮಾಡುತ್ತದೆ.
ನೋವು ನಿವಾರಿಸುತ್ತೆ:
ಮನಸ್ಸಿಗೆ ಆಗಿರುವ ನೋವನ್ನು ಕಣ್ಣೀರು ನಿವಾರಿಸುತ್ತೆ. ಆಕ್ಸಿಟಾಸಿನ್ ಅನ್ನುವ ಅಂಶ ಶಾಂತತೆಯನ್ನು ನೀಡುತ್ತದೆ.
ದುಃಖ ಚೇತರಿಕೆ:
ಪಶ್ಚಾತಾಪ, ಕೋಪ ಮತ್ತು ದುಃಖವನ್ನು ಮನಸ್ಸಿನಿಂದ ಹೊರ ತೆಗೆಯಲು ಅಳು ಸಹಾಯ ಮಾಡುತ್ತದೆ.
ಕಣ್ಣಿಗೆ ಆರೈಕೆ:
ಅಳುವುದರಿಂದ ಕಣ್ಣುಗಳು ಸ್ವಚ್ಛವಾಗುತ್ತದೆ. ಕಣ್ಣು ಡ್ರೈ ಆಗುವುದನ್ನು ತಪ್ಪಿಸಬಹುದು. ಕಣ್ಣುಗಳಿಗೆ ಬೇಕಿರುವ ಬಾಸಲ್ ಟಿಯರ್ಸ್ ನಿಂದ ಕಣ್ಣಿನ ಆರೈಕೆ ಮಾಡುವಂತಾಗುತ್ತದೆ.
ಚೆನ್ನಾಗಿ ನಿದ್ರಿಸಬಹುದು:
ಅಳುವುದರಿಂದ ಮನಸ್ಸು ಶಾಂತವಾಗುತ್ತದೆ. ಈ ಮೂಲಕ ಮಕ್ಕಳು, ವಯಸ್ಕರರಿಗೂ ಇದು ಅನ್ವಯಿಸುತ್ತದೆ.
ಸಾಂತ್ವಾನ ನೀಡುತ್ತದೆ:
ಅಳುವುದರಿಂದ ಮನಸ್ಸು ಹಗುರವಾಗುತ್ತದೆ, ಯಾವುದೇ ವಿಚಾರದಲ್ಲಿ ಅಸಮಾಧಾನವಿದ್ದರೆ ಅದರ ನೋವನ್ನುನ ಹೊರ ಹಾಕಿ ಸಾಂತ್ವಾನ ಪಡೆಯಲು ಸಹಾಯ ಮಾಡುತ್ತದೆ.