ಟ್ರೆಕ್ಕಿಂಗ್ ಪ್ರಾರಂಭಿಸುವ ಮುನ್ನ ದೈಹಿಕವಾಗಿ ಸದೃಢವಾಗಿದ್ದು ಮತ್ತು ಉತ್ತಮ ಆರೋಗ್ಯವನ್ನು ಹೊಂದಿರುವುದು ತುಂಬಾ ಅಗತ್ಯ. ಪ್ರತಿಯೊಬ್ಬರು ಜೀವನದಲ್ಲಿ ಒಮ್ಮೆ ಆದರೂ ಟ್ರೆಕ್ಕಿಂಗ್ ಹೋಗಬೇಕು ಎಂದು ಆಶಿಸುತ್ತಾರೆ. ಪ್ರಕೃತಿಯೊಂದಿಗೆ ಸಾಮರಸ್ಯದ ಪ್ರಯಾಣವು ದೇಹ ಮತ್ತು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಜೊತೆಗೆ ದೈಹಿಕ ಶಕ್ತಿ ಮತ್ತು ಮಾನಸಿಕ ದೃಢತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಟ್ರಕ್ಕಿಂಗ್ ವೇಳೆ ಎದುರಾಗುವ ಕೆಲವು ಸಮಸ್ಯೆಗಳನ್ನು ಎದುರಿಸಲು ಕೆಲವು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಅದು ಯಾವುವು ಎಂದರೆ
ದೈಹಿಕ ಸಿದ್ಧತೆ: ಟ್ರೆಕ್ಕಿಂಗ್ ಪ್ರಾರಂಭಿಸುವ ಮುನ್ನ ದೈಹಿಕವಾಗಿ ಬಲಿಷ್ಠನಾಗಿರುವುದು ಮತ್ತು ಉತ್ತಮ ಆರೋಗ್ಯವನ್ನು ಹೊಂದಿರುವುದು ಮುಖ್ಯ. ಸಾಮಾನ್ಯ ನೆಲದ ಮೇಲೆ ನಡೆಯುವುದಕ್ಕೂ, ಕಲ್ಲು ಮುಳ್ಳುಗಳಿರುವ ಎತ್ತರ ಇಳಿತದ ದಾರಿಯಲ್ಲಿ ನಡೆಯುವುದಕ್ಕೂ ವ್ಯತ್ಯಾಸವಿದೆ. ಎತ್ತರಕ್ಕೆ ಹೋಗುವಾಗ ಅಗತ್ಯವಾದ ಸ್ನಾಯುಗಳು, ಹೃದಯ ಬಡಿತ ನಿಯಂತ್ರಣ ಮತ್ತು ಉಸಿರಾಟದ ವ್ಯಾಯಾಮಗಳಿಗೆ ಒಗ್ಗಿಕೊಳ್ಳಲು ನೀವು ವ್ಯಾಯಾಮಗಳನ್ನು ಮಾಡಬೇಕು. ನೀವು ಪ್ರತಿದಿನ ನಿಮ್ಮ ಮನೆಯಲ್ಲಿ ಮೆಟ್ಟಿಲನ್ನು ಹತ್ತುವುದು ಮತ್ತು ಕೆಳಗೆ ಇಳಿಯುವುದನ್ನು ಅಭ್ಯಾಸ ಮಾಡಿಕೊಂಡಿದ್ದರೆ ಟ್ರೆಕ್ಕಿಂಗ್ ಸುಲಭವಾಗುವುದು.
ಮಾನಸಿಕ ಸ್ಥಿತಿ: ಟ್ರೆಕ್ಕಿಂಗ್ಗೆ ಹೋಗುವುದು ಒಂದು ಸವಾಲೆ ಸರಿ. ಆದರೆ ಅದಕ್ಕೂ ಮುನ್ನ ಮಾನಸಿಕವಾಗಿ ಸಿದ್ಧತೆ ಮಾಡಿಕೊಳ್ಳುವುದು ಅಗತ್ಯ. ಅಲ್ಲಿ ಹೋಗುವಾಗ ಏನಾದರೂ ಸಮಸ್ಯೆ ಎದುರಾದರೆ ನಾನು ಅದನ್ನು ಎದುರಿಸಿ ನಿಲ್ಲುತ್ತೇನೆ ಎಂಬುವ ಧೈರ್ಯ ನಮ್ಮಲ್ಲಿರಬೇಕು. ಹಾಗಾಗಿ ಟ್ರೆಕ್ಕಿಂಗ್ ಗೆ ಹೋಗಬೇಕು ಅಂದುಕೊಂಡಾಗ ನಮ್ಮ ಮಾನಸಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳಬೇಕು.
ಮಾರ್ಗ ಮತ್ತು ಮಾರ್ಗದರ್ಶನದ ಆಯ್ಕೆ: ಟ್ರೆಕ್ಕಿಂಗ್ಗೂ ಮುನ್ನ ಸೂಕ್ತವಾದ ಮಾರ್ಗವನ್ನು ಮತ್ತು ಜ್ಞಾನ ಹೊಂದಿರುವ ಅನುಭವ ಮಾರ್ಗದರ್ಶಿಯ ಸಹಾಯ ಪಡೆದುಕೊಂಡಿರುವುದು ಬಹಳ ಮುಖ್ಯ. ನಿಮ್ಮ ಅನುಭವದ ಮಟ್ಟ ಮತ್ತು ಫಿಟ್ನೆಸ್ ಮಟ್ಟಕ್ಕೆ ಹೊಂದಿಕೆಯಾಗುವ ಮಾರ್ಗವನ್ನು ಆಯ್ಕೆಮಾಡಿ. ಹೋಗುವ ಮಾರ್ಗ, ಭೂಪ್ರದೇಶ ಮತ್ತು ಹವಾಮಾನ ಕುರಿತ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುವುದನ್ನು ಮರೆಯಬಾರದು.
ಸಲಕರಣೆಗಳು: ಟ್ರೆಕ್ಕಿಂಗ್ ಮಾಡುವಾಗ ಬ್ಯಾಗ್ನಲ್ಲಿ, ಟೆಂಟ್, ಶೂಗಳು ಮತ್ತು ವಾಕಿಂಗ್ ಸ್ಟಿಕ್ ಮತ್ತು ಮುಖ್ಯವಾಗಿ ಕುಡಿಯಲು ನೀರು ತಿನ್ನಲು ಕೆಲವು ತಿಂಡಿಗಳನ್ನು ಇಟ್ಟುಕೊಂಡಿರಬೇಕು. ದೇಹದ ಉಷ್ಣತೆಯನ್ನು ನಿಯಂತ್ರಿಸವ ಮತ್ತು ಬಿಸಿಲು, ಮಳೆ ಮತ್ತು ಚಳಿಯಿಂದ ರಕ್ಷಿಸವ ಉಡುಪಗಳನ್ನು ಧರಿಸಬೇಕು. ಗಾಯಗಳು ಆಗುವುದನ್ನು ತಪ್ಪಿಸಲು ಉತ್ತಮ ಗುಣಮಟ್ಟದ, ಗಟ್ಟಿಮುಟ್ಟಾದ ಪಾದರಕ್ಷೆಗಳನ್ನು ಧರಿಸಿ.
ಸುರಕ್ಷತೆ: ಕಾಡಿನಲ್ಲಿ ಬಿಸಿಲು ಮತ್ತು ಕೀಟಗಳಿರುತ್ತದೆ. ಹಾಗಾಗಿ ನಿಮ್ಮ ತ್ವಚೆಯನ್ನು ಸೂರ್ಯನ ಕಿರಣಗಳಿಂದ ರಕ್ಷಿಸಲು ಸನ್ ಸ್ಕ್ರೀನ್ ಬಳಸುವುದು ಮುಖ್ಯ. ಕೀಟ ನಿವಾರಕವನ್ನು ಸಹ ಕೈಯಲ್ಲಿ ಇಟ್ಟುಕೊಂಡಿರಿ. ಇದರ ಜೊತೆಗೆ, ನೋವು ನಿವಾರಕಗಳು, ಮತ್ತು ಕೆಲವು ಮಾತ್ರೆಗಳನ್ನು ತೆಗೆದುಕೊಂಡು ಹೋಗುವುದು ಬಹಳ ಮುಖ್ಯ. ಅದೇ ರೀತಿ ಚಾರಣದ ವೇಳೆ ಎದುರಾಗುವ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಅದಕ್ಕೆ ಪೂರ್ವ ತಯಾರಿ ಮಾಡಿಕೊಂಡು ಹೋರಡುವುದು ಉತ್ತಮ.