ಮಸಾಲೆ ತಯಾರಿ
ಇಲ್ಲಿ ಮಸಾಲೆಗೆ ಹಸಿ ಬಟಾಣಿ ಉಪಯೋಗಿಸಬೇಕು.
ಮೊದಲು ಬಟಾಣಿ ಮತ್ತು 2 ಆಲೂಗೆಡ್ಡೆ ಬೇಯಿಸಿ ಕೊಳ್ಳಿ.
ಮಿಕ್ಸಿ ಯಲ್ಲಿ, 1 ಈರುಳ್ಳಿ, 4 ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೂಪ್ಪು, ಪುದೀನ, 1 ತುಂಡು ಚಕ್ಕೆ, 1 ಚಮಚ ಜೀರಿಗೆ, 1 ಟೊಮಾಟೊ, 4 ಚಮಚ ತೆಂಗಿನ ತುರಿ ಹಾಕಿ ರುಬ್ಬಿ.
ಬಾಣಲೆಗೆ ಬೆಂದ ಬಟಾಣಿ, ಬೇಯಿಸಿ ಮ್ಯಾಶ್ ಮಾಡಿದ ಆಲೂಗೆಡ್ಡೆ, ರುಬ್ಬಿದ ಮಿಶ್ರಣ, ರುಚಿಗೆ ಉಪ್ಪು ಮತ್ತು ಮಸಾಲೆಗೆ ಬೇಕಾದಷ್ಟು ನೀರು ಹಾಕಿ ಕುದಿಸಿ.
ಗ್ರೀನ್ ಚಟ್ನಿ:
ಮೊದಲು ಪುದೀನ, ಕೂತ್ತಂಬರಿ ಸೊಪ್ಪು ಕ್ಲೀನ್ ಮಾಡಿ. ಮಿಕ್ಸಿ ಗೆ ಸೂಪ್ಪು, ರುಚಿಗೆ ಉಪ್ಪು, 4-5 ಹಸಿಮೆಣಸಿನ ಕಾಯಿ, 1 ಚಮಚ ಹುರಿಗಡಲೆ, 2 ಚಮಚ ಹುಣಸೆ ರಸ, 1/2 ಚಮಚ ಬ್ಲಾಕ್ ಸಾಲ್ಟ್ , 1/4 ಕಪ್ ನೀರು ಹಾಕಿ ಗಟ್ಟಿಯಾದ ಚಟ್ನಿಯಂತೆ ರುಬ್ಬಿ. ಬೇಕಾದಾಗ ನೀರು ಸೇರಿಸಿ.
ಸ್ವೀಟ್ ಚಟ್ನಿ:
ಮೊದಲು 1 ನಿಂಬೆ ಗಾತ್ರದ ಹುಣಸೆಹಣ್ಣು ನೆನೆಸಿ.
ಮಿಕ್ಸಿಗೆ ನೆನೆಸಿದ ಹುಣಸೆಹಣ್ಣು, 5-6 ಹಸಿ ಕರ್ಜೂರ, ಉಪ್ಪು, 1 ಚಮಚ ಕಾರದ ಪುಡಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ, ಅದನ್ನು ಬಾಣಲೆಗೆ ಹಾಕಿ ಅದಕ್ಕೆ 1/2 ಕಪ್ ಬೆಲ್ಲದ ಪುಡಿ, ಹಾಕಿ ಗಟ್ಟಿ ಆಗೋವರೆಗೆ ಕುದಿಸಬೇಕು.
ಮಸಾಲೆ ಪುರಿ ಮಿಕ್ಸಿಂಗ್
ಪ್ಲೇಟ್ ಗೆ ಕರಿದ ಪುರಿ ಹಾಕಿ ಪುಡಿ ಮಾಡಿ ಅದರ ಮೇಲೆ ಮಸಾಲೆ, ಹೆಚ್ಚಿದ ಈರುಳ್ಳಿ, ತುರಿದ ಕ್ಯಾರೆಟ್. ಮೀಠ ಮತ್ತು ಕಾರ ಚಟ್ನಿ ಬೊಂದಿ, ಕಡಲೆ ಬೀಜ, ಕೊತ್ತಂಬರಿ ಸೊಪ್ಪು ಉದುರಿಸಿ ಬಿಸಿ ಆಗಿ ಸರ್ವ್ ಮಾಡಿ.
ಬೇಲ್ ಪುರಿ:
ಬೌಲ್ ಗೆ ಅವಲಕ್ಕಿ ಪುರಿ, 2 ಚಮಚ ಎಣ್ಣೆ, 2 ಚಮಚ ಕಾರದ ಪುಡಿ, ಸಣ್ಣಗೆ ಹೆಚ್ಚಿದ ಈರುಳ್ಳಿ,. ತುರಿದ ಕ್ಯಾರೆಟ್, ಹೆಚ್ಚಿದ ಟೊಮಾಟೊ, ಸೇವ್, ಬೂಂದಿ, ಕಡಲೆ ಬೀಜ, ಗ್ರೀನ್ ಚಟ್ನಿ. ಮೀಠ ಚಟ್ನಿ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ, ಸರ್ವ್ ಮಾಡುವಾಗ ಮೇಲೆ ಸ್ವಲ್ಪ ಸೇವ್, ಕಡಲೆಬೀಜ ಕೊತ್ತಂಬರಿ ಸೊಪ್ಪು ಉದುರಿಸಿ.