ಕಾಲಕ್ಕೆ ತಕ್ಕಂತೆ ಈಗಿನ ಯುವತಿಯರು ತಮ್ಮ ಫ್ಯಾಶನ್ ಸೆನ್ ಉತ್ತಮಗೊಳಿಸುತ್ತಿದ್ದಾರೆ. ತಮ್ಮ ಸುಂದರವಾದ ಕೈಯ ಅಂದವನ್ನು ಹೆಚ್ಚಿಸಲು ನೈಲ್ ಆರ್ಟ್ ನ ಮೋರೆ ಹೋಗುತ್ತಿದ್ದಾರೆ.
ನೈಲ್ ಆರ್ಟ್ ಕಲೆಯು ಉಗುರುಗಳನ್ನು ಚಿತ್ರಿಸಲು, ಅಲಂಕರಿಸಲು, ಸೃಜನಶೀಲ ಮಾರ್ಗವಾಗಿದೆ. ಇದು ಬೆರಳಿನ ಉಗುರುಗಳು ಮತ್ತು ಕಾಲ್ಬೆರಳ ಉಗುರುಗಳ ಮೇಲೆ ಮಾಡಬಹುದಾದ ಒಂದು ರೀತಿಯ ಕಲಾಕೃತಿಯಾಗಿದ್ದು, ಸಾಮಾನ್ಯವಾಗಿ ಮ್ಯಾನಿಕ್ಯೂರ್ಗಳು ಅಥವಾ ಪೆಡಿಕ್ಯೂರ್ಗಳ ನಂತರ ನೈಲ್ ಆರ್ಟ್ ಗಳನ್ನು ಮಾಡಲಾಗುವುದು. ಕೆಲವರು ಒಂದಕ್ಕಿಂತ ಹೆಚ್ಚು ಬಣ್ಣಗಳನ್ನು ಹಚ್ಚಲು ಆಯ್ಕೆ ಮಾಡುತ್ತಾರೆ. ಅನೇಕರು ತಮ್ಮನ್ನು ಅಥವಾ ತಮ್ಮ ಸಂಸ್ಕೃತಿಯನ್ನು ವ್ಯಕ್ತಪಡಿಸಲು ಉಗುರು ವಿನ್ಯಾಸಗಳನ್ನು ಬಳಸುತ್ತಾರೆ.
ನೈಲ್ ವಿನ್ಯಾಸದ ಬಗ್ಗೆ ಒಂದಿಷ್ಟು ಮಾಹಿತಿ
ಪ್ಯಾಸ್ಟಲ್ ಪವರ್
ಪಿಂಕ್ ಮತ್ತು ಹಳದಿ ಬಣ್ಣ ಎರಡು ನೈಲ್ ಪೆಯಿಂಟ್ ಅನ್ನು ಉಗುರಿನ ಎರಡು ಬದಿಗಳಲ್ಲಿ ಹಚ್ಚಿ ಮಧ್ಯ ಭಾಗದಿಂದ ಬಿಳಿಯ ಬಣ್ಣದ ಸೊಟ್ಟ ಗೆರೆಯನ್ನು ಎಳೆದು ಅದರ ಮೇಲೆ ಕಪ್ಪು ಚುಕ್ಕೆಯನ್ನು ಇಡಲಾಗುತ್ತದೆ.
ಪ್ಲೊರಲ್ ಟಚ್
ಪಿಂಕ್ ಹಿನ್ನಲೆಯ ಬಣ್ಣಕ್ಕೆ ಹಸಿರು ಬಣ್ಣದ ಹೂಗಳು, ಹಸಿರು ಬಣ್ಣದ ಹಿನ್ನಲೆಗೆ ಪಿಂಕ್ ಬಣ್ಣದ ಹೂಗಳ ಚಿತ್ತಾರವನ್ನು ಬಿಡಿಸಲಾಗುವುದು. ಈ ಸಿಸನ್ನ ಯೂನಿಕ್ ವಿನ್ಯಾಸ ಎನ್ನಬಹದು.
ಶೇಡ್ಸ್ ಆಫ್ ಪಿಂಕ್
ಗಾಢ ಪಿಂಕ್ ಮತ್ತು ಬೇಬಿ ಪಿಂಕ್ ನ ಮಧ್ಯ ಭಾಗದಲ್ಲಿ ಗ್ಲಿಟರ್ ನ ಗರೆ ಎಳೆದರೆ ಆಕರ್ಷಕವಾಗಿರುತ್ತದೆ.
ವಿರುದ್ದ ಬಣ್ಣಗಳ ಬಳಕೆ
ಎರಡು ಬೇರೆ ಬೇರೆ ವಿರುದ್ದ ಬಣ್ಣಗಳ ನೈಲ್ ಪೆಯಿಂಟ್ ನ ಬಳಕೆ. ನೀಲಿ ಬಣ್ಣದ ಬಳಕೆ ನೀಲಿ ಬಣ್ಣವನ್ನು ಒಂದು ಒಂದು ಬೆರಳಿಗೆ ಹಚ್ಚಿ, ಉಳಿದ ಬೆರಳಿಗೆ ಪಿಂಕ್ ಬಣ್ಣದ ನೈಲ್ ಪೆಯಿಂಟ್ ಹಚ್ಚಿ ಅದರ ಮೇಲೆ ನೀಲಿ ಬಣ್ಣದ ಹೂವಿನ ಚಿತ್ತಾರ.
ಆರೆಂಜ್ ಬಣ್ಣದ ಶೆಡ್
ಯಾವುದೇ ತಿಳಿ ಬಣ್ಣದ ನೈಲ್ ಪೆಯಿಂಟ್ ಹಾಕಿ ಆರೆಂಜ್ ಬಣ್ಣದ ಶೇಡ್ಗಳನ್ನು ನೀಡುವುದು.
ಬೊಟನಿಕಲ್ ಪ್ಯಾರಡೈಸ್
ಹಾಟ್ ಪಿಂಕ್ ಮತ್ತು ನಿಯೋನ್ ಆರೆಂಜ್ ಮತ್ತು ಹೂವಿನ ಚಿತ್ತಾರ ಒಂದೊಂದು ಉಗುರಿಗೆ ಒಂದೊಂದು ಬಣ್ಣ.
ಹಲವು ಬಣ್ಣಗಳ ಪ್ರಯೋಗ
ಒಂದೊಂದು ಉಗುರಿಗೆ ಒಂದೊಂದು ಬಣ್ಣವನ್ನು ಅರ್ಧ ಚಂದ್ರಕಾರದಲ್ಲಿ ಹಚ್ಚಿ ಅದರ ಮೇಲೆ ಚುಕ್ಕೆಗಳು ಮತ್ತು ಹೂವಿನ ಚಿತ್ತಾರಗಳನ್ನು ಬಿಡಿಸಿದರೆ ಆಕರ್ಷವಾಗಿರುತ್ತದೆ.
ಕಾಮನ ಬಿಲ್ಲು
ಕಾಮನಬಿಲ್ಲನ್ನು ಉಗುರಿನ ಮೇಲೆ ಸೃಷ್ಟಿಸಬಹದು,
ಗ್ಲಿಟರ್ ಬಳಕೆ
ಬಣ್ಣ ಬಣ್ಣದ ನೈಲ್ ಪೆಯಿಂಟ್ನ ಮೇಲೆ ಗ್ಲಿಟರ್ನ ಬಳಕೆಯಿಂದ ಇನ್ನಷ್ಟು ಮೆರಗನ್ನು ನೈಲ್ಗೆ ನೀಡಬಹುದು
ಇಂದು ಸರಳ ನೈಲ್ ಪೇಯಿಂಟ್ ನಿಂದ ಹಿಡಿದು, 3ಡಿ ನೈಲ್ ಆರ್ಟ್, ಜೆಲ್, ಪ್ರಾಣಿಗಳ ಚಿತ್ರಗಳು, ಪ್ರೇಮಿಗಳ ದಿನಾಚರಣೆ ಸ್ಪೆಷಲ್, ವೆಡಿಂಗ್ ನೈಲ್ ಆರ್ಟ್ ಹೀಗೆ ಬಣ್ಣ ಬಣ್ಣದ ವಿನ್ಯಾಸಗಳಲ್ಲಿ ಇಂದು ನೈಲ್ ಆರ್ಟ್ ಟ್ರೆಂಡಿಗೆ ಬಂದಿದೆ. ಇಂದಿನ ಯುವತಿಯರ ಫ್ಯಾಶನ್ ಲುಕ್ ಗಳಿಗೆ ಇದು ಹೊಸ ಮೆರುಗು ನೀಡುವಂತದಾಗಿದೆ.