ಹಪ್ಪಳ ತಯಾರಿಸಲು ಬೇಸಿಗೆ ಕಾಲವೇ ಉತ್ತಮ ಸಮಯ. ಒಳ್ಳೆಯ ಬಿಸಿಲು ಇರುವುದರಿಂದ ಹಪ್ಪಳ ಬೇಗನೇ ಒಣಗುತ್ತದೆ. ಸದಾ ಅಕ್ಕಿಯ ಹಪ್ಪಳ ಮಾಡಿ ಬೋರ್ ಆಗಿದ್ರೆ ಆಲೂಗಡ್ಡೆಯ ಹಪ್ಪಳವನ್ನೊಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಾಗ್ರಿಗಳು:
ಆಲೂಗಡ್ಡೆ – 4
ಉಪ್ಪು- ರುಚಿಗೆ ತಕ್ಕಷ್ಟು
ಖಾರದ ಪುಡಿ- ಅರ್ಧ ಚಮಚ
ಜೀರಿಗೆ- ಅರ್ಧ ಚಮಚ
ಎಣ್ಣೆ- ಒಂದು ಚಮಚ
ತಯಾರಿಸುವ ವಿಧಾನ ವಿಧಾನ:
ಮೊದಲಿಗೆ ಕುಕ್ಕರ್ ನಲ್ಲಿ ನಾಲ್ಕು ಆಲೂಗಡ್ಡೆಗಳನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಬೆಂದ ಆಲೂಗಡ್ಡೆಗಳ ಸಿಪ್ಪೆ ತೆಗೆದುಕೊಂಡು ತುರಿದುಕೊಳ್ಳಿ. ನಂತರ ಅದನ್ನು ಕೈಯಲ್ಲಿ ಚೆನ್ನಾಗಿ ನುಣ್ಣಗೆ ಮಾಡಿಕೊಳ್ಳಿ. ಬಳಿಕ ಉಪ್ಪು, ಅಚ್ಚ ಖಾರದ ಪುಡಿ, ಜೀರಿಗೆ, ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ತಯಾರಿಸಿಕೊಳ್ಳಿ.
ನಂತರ ಬಿಸಿಲಿನಲ್ಲಿ ಒಂದು ದೊಡ್ಡ ಕವರ್ ಹಾಕಿ ಆಲೂ ಮಿಶ್ರಣವನ್ನು ಸ್ಪೂನ್ ನಲ್ಲಿ ತೆಗೆದುಕೊಂಡು ಕವರ್ ಮೇಲೆ ಹಾಕಿ ಮತ್ತೊಂದು ಕವರ್ ನಿಂದ ಒತ್ತಿ. ಇದೇ ರೀತಿ ಎಲ್ಲಾ ಮಿಶ್ರಣವನ್ನೂ ಹಾಕಿ 2-3 ದಿನಗಳ ಕಾಲ ಒಣಗಿಸಿ ಎರಡೂ ಬದಿಯಲ್ಲಿ ಒಣಗಿಸಿಟ್ಟುಕೊಂಡರೆ, ಮಳೆಗಾಲದಲ್ಲಿ ಹಾಗೂ ಅಗತ್ಯವಿದ್ದ ಸಮಯದಲ್ಲಿ ಅಲೂ ಹಪ್ಪಳವನ್ನು ಎಣ್ಣೆಗೆ ಕರಿದು ಸವಿಯಿರಿ.