ಒಂದು ಕಾಲದಲ್ಲಿ ಭಾರತೀಯ ಸಿನಿಮಾ ಎಂದರೆ ಬಾಲಿವುಡ್ ಎಂಬ ಕಲ್ಪನೆ ಇತ್ತು. ದಕ್ಷಿಣ ಭಾರತದ ದೊಡ್ಡ ದೊಡ್ಡ ಸ್ಟಾರ್ ನಟರು ನೆಲೆಯೂರಲು ಪ್ರಯತ್ನಿಸಿದ್ದರು ಸಾಧ್ಯವಾಗಲಿಲ್ಲ. ರಜನೀಕಾಂತ್ ವೆಂಕಟೇಶ್, ಚಿರಜೀವಿ, ನಾಗಾರ್ಜುನ ಹೀಗೆ ಹಲವರು ಪ್ರಯತ್ನಿಸಿದ್ದರು.
ಆದರೆ ಇಲ್ಲಿ ಪೂರ್ಣಪ್ರಮಾಣದಲ್ಲಿ ನೆಲೆಕಂಡಿದ್ದು ಬಹುಶಃ ಗ್ಲಾಮರ್, ಅಂದರೆ ನಟಿಯರು. ರೇಖಾ, ಹೇಮಮಾಲಿನಿ, ಶ್ರೀ ದೇವಿ, ಶಿಲ್ಪ ಶೆಟ್ಟಿ, ಐಶರ್ಯ ರೈ ಇದೀಗ ದೀಪಿಕಾ ಪಡುಕೋಣೆ ಮತ್ತು ಪೂಜಾ ಹೆಗ್ಡೆ.
ಹೇಮಮಾಲಿನ ಕನಸಿನ ಕನ್ಯೆ ಆಗಿ ಎಲ್ಲರ ನಿದ್ದೆ ಗೆಡಿಸಿದ ಈ ನೃತ್ಯಗಾತಿ ಬಾಲಿವುಡ್ ಇಂಡಸ್ಟ್ರಿಯನ್ನು ಆಳಿದ್ದು ಇತಿಹಾಸ. ಮೂಲತಃ ಇವರು ತಮಿಳುನಾಡಿನವರು. ತಮಿಳು ಅಯ್ಯಂಗಾರ್ ಬ್ರಾಹ್ಮಣ ಫ್ಯಾಮಿಲಿಗೆ ಸೇರಿದ್ದವರಾಗಿದಾರೆ.ನಟ ಧಮೇಂದ್ರರ ಪತ್ನಿ ಇಶ ಡಿಯೊಲ್ ಮತ್ತು ಅಹಾನ ಡಿಯೊಲ್ ಮಕ್ಕಳು. ೨೦೦೦ರಲ್ಲಿ ಪದ್ಮಶ್ರೀ ಪುರಸ್ಕರವನ್ನು ಪಡೆದಿರುತ್ತಾರೆ.
ಮೂಲತ ಚೆನೈಯವರಾದ ರೇಖಾ ಪುಷ್ಪವಲ್ಲಿ ಮತ್ತು ಜೆಮಿನಿ ಗಣೇಶನ್ರವರ ಮಗಳು. ಬಾಲ್ಯ ನಟಿಯಾಗಿ ಅಭಿನಯಿಸಿರುವ ಇವರು ಪೂರ್ಣ ಪ್ರಮಾಣದಲ್ಲಿ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿ ಕೊಂಡಿದ್ದು ಕನ್ನಡದ ಅಪರೇಶನ್ ಜಾಕ್ಪಾಟ್ನಲ್ಲಿ ಸಿ ಐ ಡಿ 999 ಚಿತ್ರದಲ್ಲಿ.2010 ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪುರಸ್ಕಾರವನ್ನು ಪಡೆದಿರುತ್ತಾರೆ.
ಶ್ರೀದೇವಿ ತಮಿಳುನಾಡಿನ ಮೀನಂಪಟ್ಟಿ ಇವರು ಊರು. ಬಾಲ ನಟಿಯಾಗಿ ಚಿತ್ರರಂಗಕ್ಕೆ ಪಾರ್ಪಣೆ ಮಾಡಿ ಪೂರ್ಣ ಪ್ರಮಾಣದ ನಾಯಕಿಯಾಗಿ ತಮಿಳು ಚಿತ್ರದಲ್ಲಿ ಕೆ ಬಾಲಚಂದ್ರರವರ ನಿದೇರ್ಶನದಲ್ಲಿ ಪಾದರ್ಪಣೆ ಮಾಡಿದರು. ಮುಂದೆ ಪಂಚ ಭಾಷೆಗಳಲ್ಲಿಯು ಅಭಿನಯಿಸಿದರು.ಫಿಲ್ಮ್ ಫೇರ್ ಲೈಫ್ ಟೈಮ್ ಆಚೀವ್ಮೆಂಟ್ ಪ್ರಶಸ್ತಿ ಹಾಗೂ ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕರವನ್ನು ಪಡೆದಿರುತ್ತಾರೆ.
ಶಿಲ್ಪ ಶೆಟ್ಟಿ ಮಂಗಳೂರು ಮೂಲದ ಬೆಡಗಿ ಭರತನಾಟ್ಯ ಪ್ರವೀಣೆ. ಅಬ್ಬಸ್ ಮಸ್ತನಿ ಯವರ ಬಾಜೀಗರ್ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರೀ ಕೊಟ್ಟ ಶಿಲ್ಪ ಮೊದಲ ಸಿನಿಮಾದಲ್ಲಿಯೆ ಬಾರೀ ಯಶಸ್ಸನ್ನು ಕಂಡರು. ಇಂದಿಗೂ ಫಿಟ್ನೆಸ್ ಮಂತ್ರದ ಮೂಲಕ ಎಲ್ಲರ ಫೆವರೇಟ್ ಅಗಿದ್ದಾರೆ.
ಐಶರ್ಯ ರೈ 1994ರ ಮಿಸ್ ವೆಲ್ಡ್. ಮಂಗಳೂರಿನ ಸುಂದರಿ. ಮಿಸ್ ವೆಲ್ಡ್ ಆಗಿ ಹೊರ ಹೊಮ್ಮಿದ ಇವರು ಸಾಕಷ್ಟು ಜಾಹೀರಾತಿನಲ್ಲಿ ಮಾಡಲ್ ಆಗಿ ಕಾಣಿಸಿಕೊಂಡಿದ್ದಾರೆ. ಮಣಿರತ್ನಮ್ನ ಇರುವರ್ ಚಿತ್ರದ ಮೂಲಕ ಮೊದಲ ಬಾರಿಗೆ ಸಿನಿಜಗತ್ತಿಗೆ ಕಾಲಿಟ್ಟರು. ಮುಂದೆ ದೇವದಾಸ್ ನ ಪಾರು ಆಗಿ ಮಿಂಚಿದ್ದರು. ಭಾರತ ಸರ್ಕಾರುವು ಪದ್ಮಶ್ರೀ ಪರಸ್ಕಾರವನ್ನು ನೀಡಿದೆ.
ದೀಪಿಕಾ ಪಡುಕೋಣೆ ಹುಟ್ಟಿದು ಡೆನಾರ್ಮಾಕ್ ನಲ್ಲಿ ಆದರೆ ಬೆಳೆದಿದ್ದು ಬೆಂಗಳೂರಿನಲ್ಲಿ. ಮೊದಲ ಸಿನಿಮ ಕನ್ನಡದಲ್ಲೇ ನಟ ಉಪೇಂದ್ರ ಜೋತೆ ಐಶ್ವರ್ಯ. ಇಂದು ಬಾಲಿವುಡ್ ನಿಂದ ಹಾಲಿವುಡ್ಗೆ ಲಗ್ಗೆ ಇಟ್ಟಿರುವ ನಟಿ.
ಪೂಜಾ ಹೆಗ್ಡೆ ಮಾಡಲಿಂಗ್ ಕೆರಿಯರ್ ಜೊತೆ ವೃತ್ತ ಜೀವನ ಆರಂಭದೊಂದಿಗೆ ಇಂದು ತಮಿಳು, ತೆಲುಗು ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಹುಟ್ಟಿದ್ದು ಮುಂಬಾಯಿಯಲ್ಲಿ ಆದರೆ ಮೂಲ ಉಡುಪಿಯವರು.
ಹೀಗೆ ಬಾಲೀವುಡ್ ಬಹುತೇಕ ನಟಿಯರು ದಕ್ಷಿಣ ಭಾರತದ ಮೂಲದವರು. ಉತ್ತಮ ನಟಯಲ್ಲಿ ಅಗ್ರ ಸ್ಥಾನ ಪಡೆದಿರುವವರು.