ನಮ್ಮ ಪಾರಂಪರಿಕವಾದ ನೈಸರ್ಗಿಕ ಪದಾರ್ಥಗಳ ಗುಣಗಳು ಆಗಾಧವಾದ್ದದು. ಗಿಡ ಮೂಲಿಕೆಗಳ ಬಗ್ಗೆ ತಿಳಿದವರು ಇಂದಿಗೂ ಅದರ ಸದುಪಯೋಗ ಪಡೆಯತ್ತಾರೆ. ಇಂದಿನ ದಿನಕ್ಕೆ ಅದರಲ್ಲೂ ಈ ಉರಿಬಿಸಿಲಿನಿಂದ ನಮ್ಮನ್ನು ಕೊಂಚ ತಂಪ್ಪಾಗಿಸಲು ಲಾವಂಚ ಬೇರು ಸಹಾಯ ಮಾಡುತ್ತದೆ.
ಇದು ಸ್ವಾಭಾವಿಕವಾಗಿ ತಂಪಾದ ಗುಣವನ್ನು ಹೊಂದಿದೆ. ಲಾವಂಚ ಬೇರಿನ ಬಗ್ಗೆ ತಿಳಿದವರು ಇದನ್ನು ತಾವು ನಿತ್ಯವು ಕುಡಿಯುವ ನೀರಿನಲ್ಲಿ ಹಾಕಿ ಇಡುತ್ತಾರೆ. ಪ್ರತಿ ಬಾರಿ ನೀರನ್ನು ಕುಡಿದಾಗ ಸುವಾಸನೆಯೊಂದಿಗೆ ಕೊಂಚ ಸಿಹಿಯಾದ ರುಚಿಯೊಂದಿಗೆ ದೇಹವನ್ನು ಸೇರುತ್ತದೆ.
ಲಾವಂಚ ಬೇರು ನಮ್ಮ ದೇಹವನ್ನು ಡಿ ಹೈಡ್ರೇಟ್ ಆಗುವುದನ್ನು ತಪ್ಪಿಸಿ ಶರೀರದಲ್ಲಿ ನೀರಿನಾಂಶವನ್ನು ಕಾಪಾಡುತ್ತದೆ. ಚರ್ಮದ ಸಮಸ್ಯೆಗಳಾದ ಮೊಡವೆ, ಗುಳ್ಳೆ ಮತ್ತು ದದ್ದುಗಳಿಂದ ರಕ್ಷಿಸುತ್ತದೆ. ಮೈ ಉರಿ ಅನುಭವಿಸುವವರಿಗೂ ಇದು ಉತ್ತಮ ಅನುಭವನ್ನು ನೀಡುತ್ತದೆ.
ತುರಿಕೆ ಮತ್ತು ಚಿಕನ್ ಫಾಕ್ಸ್, ಸರ್ಪಸುತ್ತು ಮೈಯಲ್ಲಿ ಕಾಣಿಸಿಕೊಂಡಾಗ ಸಾಮಾನ್ಯವಾಗಿ ಮೈ ಜ್ವಾಲೆ ಬರುವುದು ಸಹಜ. ಇಂತಹ ಸಂದರ್ಭದಲ್ಲಿ ಲಾವಂಚ ಬೇರನ್ನು ನೀರಲ್ಲಿ ನೆನೆಸಿ ಆ ನೀರನ್ನು ಕುಡಿದಾಗ ಸಾಕಷ್ಟು ಆರಾಮ ಸಿಗುತ್ತದೆ. ಇದಲ್ಲದೆ ರಕ್ತವನ್ನು ಶುದ್ದಿಕರಿಸುವ ಕೆಲಸವನ್ನು ಕೂಡ ಮಾಡುತ್ತದೆ. ಸಮಸ್ಯೆಗಳನ್ನು ಉಂಟುಮಾಡುವ ಬ್ಯಾಕ್ಟೀರಿಯದ ವಿರುದ್ದ ಹೊರಾಡುತ್ತದೆ.
ಲಾವಂಚದ ಬೇರುಗಳು ಪಂಡಿತರ ಅಂಗಡಿಗಳಲ್ಲಿ ಲಭ್ಯ. ಬೇರನ್ನು ತಂದು ಕೊಂಚ ನೀರಿನಲ್ಲಿ ತೊಳೆದು ಒಣಗಿಸಿ ಇಟ್ಟುಕೊಂಡಿರಬೇಕು. ಬೇಕಾದಗಲ್ಲೆಲ್ಲ ಕುಡಿಯುವ ನೀರಿಗೆ ಬೇಕಾಗುವಷ್ಟು ಹಾಕಿ ಇಡಬೇಕು. ಇನ್ನು ಕೆಲವರು ಒಣಗಿಸಿದ ಬೇರನ್ನು ಚೆನ್ನಾಗಿ ಪುಡಿಮಾಡಿಕೊಂಡು ಇಟ್ಟಿರುತ್ತಾರೆ. ಬೇಕಾದಗ ಒಂದು ಚಿಮಿಟಿಯಷ್ಟು ಪುಡಿಯನ್ನು ನೀರಿಗೆ ಹಾಕಿಕೊಳ್ಳ ಬಹುದು. ಬೇಸಿಗೆಯಲ್ಲಿ ದಾಹ ತಣಿಸಲು ಪ್ರತಿ ಬಾರಿ ಜ್ಯೂಸ್ನ ಮೋರೆ ಹೋಗುವ ಬದಲು ಲಾವಂಚ ಬೇರಿನ ನೀರನ್ನು ಅವಲಂಬಿಸಬಹದು. ಉಪಾಯ ಒಂದು ಲಾಭ ಹಲವು.