ಕೊರೋನಾ ಸೋಂಕು ಎಂದು ಕೇಳಿದರೆ ಒಮ್ಮೆ ಎಲ್ಲರೂ ಬೆಚ್ಚಿ ಬೀಳ್ತೀವಿ. ಆದರೆ ಇನ್ನು ಮುಂದೆ ಕೋವಿಡ್-19 ಜಾಗತಿಕ ತುರ್ತು ಪರಿಸ್ಥಿತಿಯಾಗಿ ಇರುವುದಿಲ್ಲ ಎಂದು ವಿಶ್ವ ಸಂಸ್ಥೆ ಹೇಳಿದೆ.
ಎರಡು ವರ್ಷಗಳಲ್ಲಿ ಕನಿಷ್ಠವೆಂದರು 7 ಮಿಲಿಯನ್ ಜನರನ್ನು ಬಲಿಪಡೆದು, ಲಾಕ್ ಡೌನ್, ಕ್ವಾರೆಂಟೈನ್ ಅನ್ನು ಜನರಿಗೆ ಪರಿಚಯಿಸಿದ ಕೊರೋನಾಗೆ ವಿಶ್ವ ಸಂಸ್ಥೆ ಸಾಂಕೇತಿಕ ಅಂತ್ಯವಾಡಿದೆ.
ಇತ್ತೀಚಿಗೆ ಮಧ್ಯಪ್ರಾಚ್ಯದಲ್ಲಿ ಹಾಗೂ ಆಗ್ನೇಯ ಏಷ್ಯಾದಲ್ಲಿ ಕೊರೋನಾ ಹೆಚ್ಚಾಗುತ್ತಿದ್ದು, ತುರ್ತು ಪರಿಸ್ಥಿತಿ ಇಲ್ಲದಿದ್ದರೂ ಕೂಡ ಸಾಂಕ್ರಾಮಿಕ ರೋಗ ಮುಗಿದಿಲ್ಲ ಎಂದು ವಿಶ್ವ ಸಂಸ್ಥೆ ಹೇಳಿದೆ.
ಈ ಬಗ್ಗೆ ವಿಶ್ವ ಸಂಸ್ಥೆಯ ನಿರ್ದೇಶಕ ಜನರಲ್ ಟೆಡ್ರೋಸ್ ಅಧಾನಮ್ ಘೆಬ್ರೆಯೆಸಸ್, ಕೊರೋನಾ ಸೋಂಕು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿ ಕೊನೆಯಾಗಿದೆ. ಈ ನಿರ್ಧಾರವನ್ನು ಎಚ್ಚರಿಕೆಯಿಂದ ಪರಿಗಣಿಸಿ, ವಿಶ್ಲೇಷಿಸಿದ ಆಧಾರದ ಮೇಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.