ಉಳ್ಳಾಲ: ರಾಜ್ಯದ ಅತೀ ದೊಡ್ಡ ಗ್ರಾಮ ಪಂಚಾಯತ್ ಆಗಿದ್ದ ಸೋಮೇಶ್ವರ ಪುರಸಭೆಯಾಗಿ ಮೇಲ್ದಜೆರಗೇರಿದ ಬಳಿಕ ಪ್ರಥಮ ಚುನಾವಣೆ ಡಿಸೆಂಬರ್ 27ರಂದು ನಡೆಯಿತ್ತು. ಶಾಂತಿಯುತವಾಗಿ ಉತ್ಸಾಹದಿಂದ ಮತದಾನದ ಪ್ರಕ್ರಿಯೆಯಲ್ಲಿ ಮತದಾರರು ಪಾಲ್ಗೊಂಡಿದ್ದರು.
23 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 50 ಅಭ್ಯರ್ಥಿಗಳು (25 ಪುರುಷ ಅಭ್ಯರ್ಥಿಗಳು, 25 ಮಹಿಳಾ ಅಭ್ಯರ್ಥಿಗಳು)ಕಣದಲ್ಲಿದ್ದು, 23 ಮತದಾನ ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆದಿತ್ತು.
ಗ್ರಾಮ ಪಂಚಾಯತ ಅವಧಿಯಲ್ಲಿ 30 ವರುಷಗಳ ಕಾಲ ಬಿಜೆಪಿ ಪ್ರಾಬಲ್ಯವಿದ್ದ ಸೋಮೇಶ್ವರದಲ್ಲಿ, ಎಲ್ಲಾ 23 ಸ್ಥಾನಗಳಿಗೆ ಬಿಜೆಪಿ ಸ್ಪರ್ಧಿಸಿದರೆ, ಕಾಂಗ್ರೆಸ್ 22 ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು,
ಇದೀಗಾ ಫಲಿತಾಂಶ ಹೊರಬಿದ್ದಿದ್ದು,ವಾರ್ಡ್ 1 ಕಾಂಗ್ರೆಸ್ ಹಾಮೀನ ಬಶೀರ್, ವಾರ್ಡ್2 ಬಿಜೆಪಿ ಯಶವಂತ್, ವಾರ್ಡ್ 3 ಬಿಜೆಪಿ ಸ್ವಪ್ನ ಶೆಟ್ಟಿ,ವಾರ್ಡ್ 4 ಕಾಂಗ್ರೆಸ್ ಪುರುಷೋತ್ತಮ್ ಶೆಟ್ಟಿ,ವಾರ್ಡ್ 5 ಬಿಜೆಪಿ ಜಯ ಪೂಜಾರಿ,ವಾರ್ಡ್ 6 ಬಿಜೆಪಿ ಮಾಲತಿ ನಾಯ್ಕ್, ವಾರ್ಡ್ 7 ಬಿಜೆಪಿ ಕಮಲಾ ನಾಯಕ್, ವಾರ್ಡ್ 8 ಬಿಜೆಪಿ ಮೋಹನ್ ಶೆಟ್ಟಿ, ವಾರ್ಡ್ 9 ಕಾಂಗ್ರೆಸ್ ಪರ್ವಿನ್ ಶಾಜಿದ್, ವಾರ್ಡ್ 10 ಬಿಜೆಪಿ ಮನೋಜ್ ಕಟ್ಟೆಮನೆ,ವಾರ್ಡ್ 11 ಬಿಜೆಪಿ ಹರೀಶ್ ಕುಂಪಲ,ವಾರ್ಡ್ 12 ಬಿಜೆಪಿ ಅನಿಲ್ ಕೊಲ್ಯ,ವಾರ್ಡ್ 13 ಕಾಂಗ್ರೆಸ್ ದೀಪಕ್ ಪಿಲಾರ್,ವಾರ್ಡ್ 14 ಬಿಜೆಪಿ ಅಮಿತಾ, ವಾರ್ಡ್ 15 ಬಿಜೆಪಿ ಸೋನಾ ಶುಭಾಷಿನಿ,ವಾರ್ಡ್ 16 ಬಿಜೆಪಿ ಅನಿಲ್,ವಾರ್ಡ್ 17 ಬಿಜೆಪಿ ಪುರುಷೋತ್ತಮ್ ಗಟ್ಟಿ,ವಾರ್ಡ್ 18 ಕಾಂಗ್ರೆಸ್ ತಾಹೀರಾ, ವಾರ್ಡ್ 19 ಶ್ರೀಲತಾ ದಿನೇಶ್ ಗಟ್ಟಿ, ವಾರ್ಡ್ 20 ಕಾಂಗ್ರೆಸ್ ಅಬ್ದುಲ್ ಸಲಾಂ, ವಾರ್ಡ್ 21 ಕಾಂಗ್ರೆಸ್ ರಮ್ಲತ್, ವಾರ್ಡ್ 22 ಕಾಂಗ್ರೆಸ್ ತಾಹಿರಾ,ವಾರ್ಡ್ 23 ಬಿಜೆಪಿ ಜಯಶ್ರೀ ಜಯ ಸಾಧಿಸಿದ್ದಾರೆ.
ಒಟ್ಟು ಬಿಜೆಪಿಯ 16 ಅಭ್ಯರ್ಥಿಗಳು ಜಯಸಾಧಿಸಿದ್ದರೆ. ಕಾಂಗ್ರೆಸ್ನ 7 ಅಭ್ಯರ್ಥಿಗಳು ಗೆಲುವನ್ನು ಸಾದಿಸಿದ್ದಾರೆ.