ಅಸ್ತಮಾ ಖಾಯಿಲೆಯ ನಿರ್ಮೂಲನೆಗಾಗಿ ಜಗತ್ತಿನಾದ್ಯಂತ ಪ್ರತಿ ವರ್ಷ ಮೇ ತಿಂಗಳ ಮೊದಲ ಮಂಗಳವಾರದಂದು ವಿಶ್ವ ಅಸ್ತಮಾ ದಿನವನ್ನು ಆಚರಿಸಲಾಗುತ್ತಿದೆ. ಅಸ್ತಮಾದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ರೋಗಿಗಳನ್ನು ಆರೈಕೆ ಮಾಡುವ ಮೂಲಕ ಆರೋಗ್ಯವನ್ನು ಸುಧಾರಿಸುವುದು ಇದರ ಮುಖ್ಯ ಗುರಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಹಲವಾರು ಮಂದಿ ಸಾಮಾನ್ಯವಾಗಿ ಅಸ್ತಮಾ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇದಕ್ಕೆ ನಗರ ಪ್ರದೇಶದ ಜನರು ಹಳ್ಳಿಗಾಡಿನ ಮಂದಿ ಎನ್ನುವ ಯಾವುದೇ ಬೇಧ ಭಾವವಿಲ್ಲ. ಇಲ್ಲಿ ಮನುಷ್ಯ ಉಸಿರಾಟಕ್ಕೆಂದು ತೆಗೆದುಕೊಳ್ಳುವ ಗಾಳಿಯೇ ಅವನಿಗೆ ಮಾರಕವಾಗುತ್ತಿದೆ.
ಪ್ರತಿದಿನ ಸುಮಾರು 40 ರೋಗಿಗಲು ಅಸ್ತಮಾ, ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಶೇ, 60 ರಷ್ಟು ಪುರುಷರಲ್ಲಿಯೇ ಹೆಚ್ಚಾಗಿ ಇದು ಕಂಡುಬರುತ್ತದೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೆ ಇದೆ.
ಅಸ್ತಮಾದ ಬರಲು ಕಾರಣಗಳು:
ಹವಾಮಾನ ಬದಲಾವಣೆ,ಧೂಳು, ಮರ ಅಥವಾ ಹುಲ್ಲಿನ ಧೂಳು, ಹೊಗೆ,ಸುಗಂಧ ದ್ರವ್ಯಗಳುಗಳಂತಹ ಬಲವಾದ ವಾಸನೆಗಳನ್ನು ಮೂಗಿನ ಮೂಲಕ ಸೇವಿಸುವುದು ,ಒತ್ತಡ, ಆಲ್ಕೋಹಾಲ್, ಸಿಗರೇಟ್ ಅಥವಾ ಡ್ರಗ್ಸ್ ಸೇವನೆಯಿಂದ ಅಸ್ತಮಾ ರೋಗಕ್ಕೆ ತುತ್ತಾಗಬಹುದು.
ವೈರಲ್ ಸೋಂಕುಗಳು
ಅಸ್ತಮಾದ ರೋಗ ಲಕ್ಷಣ :
ಉಸಿರಾಟದ ತೊಂದರೆ, ವಿಪರೀತ ಕೆಮ್ಮು ಮತ್ತು ದೀರ್ಘಕಾಲದ ಶೀತ, ಎದೆಯಲ್ಲಿ ನೋವು ಇವೆಲ್ಲಾ ಪುನರಾವರ್ತನೆಗೊಳ್ಳುವುದು. ನಿದ್ರಾ ಸಮಯದಲ್ಲಿ ಚಡಪಡಿಕೆ, ಎದೆಯಲ್ಲಿ ನೋವು, ನಿದ್ರಿಸಲು ಉಸಿರಾಟದ ಸಮಸ್ಯೆ ಉಂಟಾಗುತ್ತಿದ್ದರೆ ಇವೆಲ್ಲವು ಕೂಡ ಅಸ್ತಮಾ ರೋಗದ ಲಕ್ಷಣಗಳಾಗಿವೆ.
ಆಸ್ತಮಾವನ್ನು ನಿಯಂತ್ರಣ ಕ್ರಮ:
ನಿಮ್ಮ ಉಸಿರಾಟಕ್ಕೆ ಸಮಸ್ಯೆಯನ್ನೊಡ್ಡುವ ವಸ್ತುಗಳಿಂದ ಅಥವಾ ಅಂತಹ ಪರಿಸರದಿಂದ ದೂರವಿರಿ. ಧೂಮಪಾನವನ್ನು ತ್ಯಜಿಸಿ ಮತ್ತು ನಿಮ್ಮ ಹತ್ತಿರ ಧೂಮಪಾನವನ್ನು ಮಾಡುತ್ತಿದ್ದರೆ ಅವರಿಂದ ದೂರವಿರಿ.
ಅಸ್ತಮಾ ಇರುವ ವ್ಯಕ್ತಿ ಏನು ಮಾಡಬೇಕು?
ಆಸ್ತಮಾದ ವ್ಯಕ್ತಿಯು ತಮ್ಮ ಔಷಧಿಗಳನ್ನು ಸರಿಯಾಗಿ ಅನುಸರಿಸಬೇಕು ಮತ್ತು ಯಾವಾಗಲೂ ತಮ್ಮ ನೆಬ್ಯುಲೈಸರ್ ಮತ್ತು ಇನ್ಹೇಲರ್ ಅನ್ನು ಕೈಯಲ್ಲಿ ಇಟ್ಟುಕೊಳ್ಳಬೇಕು. ಅಸ್ತಮಾ ಇರುವವರು ಸ್ವಚ್ಛ ವಾತಾವರಣದಲ್ಲಿ ವಾಸಿಸಬೇಕು ಮತ್ತು ಅವರು ಸಾಧ್ಯವಾದಷ್ಟು ತಾಜಾ ಗಾಳಿಯನ್ನು ತೆಗೆದುಕೊಳ್ಳಬೇಕು