ಭಾರತದ ನೆಲಕ್ಕೆ ಬಂದು ನೇರವಾಗಿ ದಾಳಿ ಮಾಡಿ ಕೊಳ್ಳೆ ಹೊಡೆದ ಕಥೆ ನೆನೆಪಿದೆಯಲ್ಲ. ಕೆಲವರು ಲೂಟಿಗೆಂದೆ ಬಂದರೆ ಇನ್ನು ಕೆಲವರು ವ್ಯಾಪರಕ್ಕಾಗಿ ಬಂದರು. ಎಲ್ಲರು ಮಾಡಿದ್ದು, ಒಂದೇ ದೇಶವನ್ನು ದೋಚಿದ್ದು. ಚಿನ್ನ, ಬೆಳ್ಳಿ, ರಾಜ ಮಹಾರಾಜರು ಉಪಯೋಗಿಸುತ್ತಿದ ಕತ್ತಿ, ಖಡ್ಗ, ಸಿಂಹಾಸನ, ಬಟ್ಟೆ, ಬೆಳೆಬಾಳುವ ವಿಗ್ರಹಗಳು ಹೀಗೆ ಎಲ್ಲವನ್ನು ದೋಚಿದರು.
ಕಾಲಕ್ರಮೇಣ ಭಾರತದಿಂದ ದೋಚಲು ಪ್ರಯತ್ನಿಸಿದ್ದು ನಮ್ಮ ಆರೋಗ್ಯದ ಗುಟ್ಟು ಯೋಗವನ್ನು. ವಿದೇಶದಿಂದ ಚಿಕಿತ್ಸೆಗೆಂದು/ವಿಹಾರಕ್ಕೆಂದು ಕೆಲವರು ಬಂದು ಯೋಗವನ್ನು ಕಲಿತು ತಮ್ಮ ದೇಶದಲ್ಲಿ ಇದನ್ನು ಫಿಟ್ನೆಸ್ ಸೆಂಟರ್ಗಳಲ್ಲಿ ಯೋಗವನ್ನು ಜನರಿಗೆ ಅಭ್ಯಾಸಿಸಲಾರಂಭಿಸಿದರು. ನಿಧಾನಕ್ಕೆ ಭಾರತ ಮೂಲದ ಯೋಗ ವಿದೇಶಿ ಮೂಲದ ಯೋಗ ಅನಿಸುವ ಮಟ್ಟಕ್ಕೆ ಇದು ವಿದೇಶದಲ್ಲಿ ಪ್ರಸಿದ್ಧಿ ಪಡೆಯಿತ್ತು.
ಭಾರತದಲ್ಲಿ ಹುಟ್ಟಿ ವಿಶ್ವಾದ್ಯಂತ ಹರಡಿದ ಯೋಗದ ಬಗ್ಗೆ ಕೆಲವೇ ವರ್ಗದ ಜನರು ಆರೋಗ್ಯ ಉತ್ತೇಜಿಸಲು ಅಭ್ಯಸಿಸುತ್ತಿದ್ದರು. ಚಿತ್ರ ನಟಿಯರು ಯೋಗವನ್ನು ಕಲಿತು ತಮ್ಮ ಫಿಟ್ನೆಸ್ ಮಂತ್ರವನ್ನಾಗಿಸುವರೆಗೆ ಯುವ ಜನತೆ ಇದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.
ಆದರೆ ಇಂದು ಯೋಗ ಪ್ರತಿಯೊಬ್ಬರ ಆರೋಗ್ಯದ ಗುಟ್ಟಾಗಿದೆ. ಗಲ್ಲಿ ಗಲ್ಲಿಗಳಲ್ಲಿ ಸಂಘ ಸಂಸ್ಥೆಗಳು ಯೋಗ ಕೇಂದ್ರಗಳನ್ನು ಆರಂಭಿಸಿ ಮಕ್ಕಳಿಂದ ಹಿಡಿದು, ಯುವ ಪೀಳಿಗೆ, ವಯಸ್ಸದವರು ಹೀಗೆ ಎಲ್ಲ ವಯಸ್ಸಿನ ಮತ್ತು ವರ್ಗದ ಜನರು ಅಭ್ಯಸಿಸುವಂತಾಗಿದೆ.
ಡಿಸೆಂಬರ್ 11. 2014 ರಂದು ವಿಶ್ವಸಂಸ್ಥೆಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ ದಿನ ಆಚರಿಸಲು ಕರೆ ನೀಡಿದ ಬಳಿಕ, ಪ್ರತಿ ವರ್ಷ ಜೂನ್ 21ರ ದಿನ ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವ ಬಗ್ಗೆ ದೃಢಪಡಿಸಿದರು.
ಅಂತರಾಷ್ಟ್ರೀಯ ಯೋಗ ದಿನದ ಪ್ರಸ್ತಾಪವನ್ನು ಯುನೈಟೆಡ್ ಸ್ಟೇಟ್ಸ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿತು ಯೋಗ ದಿನವನ್ನು ಮೊದಲು 21 ಜೂನ್ 2015 ರಂದು ವಿಶ್ವಾದಾದ್ಯಂತ ವಿಶ್ವ ಯೋಗ ದಿನವನ್ನು ಆಚರಿಸಲಾಯಿತ್ತು.
2022 ರಲ್ಲಿ ಮೈಸೂರಿನ ಅರಮನೆ ಮೈದಾನದಲ್ಲಿ 15,000 ಜನರಿಂದ ಯೋಗ ಪ್ರದರ್ಶನಗೊಂಡಿತ್ತು. ಇದರ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದರು.ಈ ಬಾರಿಯ ಯೋಗ ದಿನದಂದು ವಿಶ್ವ ಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನಡೆಯಲಿರುವ ಯೋಗ ದಿನಾಚರಣೆಯ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ.