ಬೂದುಗುಂಬಳ ಕಾಯಿ ಮಜ್ಜಿಗೆ ಹುಳಿ
ಬೇಕಾಗುವ ಸಾಮಾಗ್ರಿಗಳು:
ಒಂದು ಸಣ್ಣ ಖಡಿ ಬೂದುಗುಂಬಳ
1 ಬೌಲ್ ಕಾಯಿತುರಿ
ಒಂದು ಲೋಟ ದಪ್ಪ ಮೊಸರು.
4 – 5 ಹಸಿರು ಮೆಣಸು
1 ಹಿಡಿ ಕೊತ್ತಂಬರಿ ಸೊಪ್ಪು
ಕಾಲು ಲೋಟಾ ಕಡಲೇ ಬೇಳೆ
2 ಚಮಚ ಕೊತ್ತುಂಬರೀ ಬೀಜ
1 ಚಿಕ್ಕ ಚಮಚ ಜೀರಿಗೆ
1 ಚಮಚ ಅರಿಶಿಣ ಪುಡಿ
ಒಂದು ಪಿಂಚ್ ಹಿಂಗು
ಸ್ವಲ್ಪ ಕರಿಬೇವು
1 ಚಮಚ ಎಣ್ಣೆ
ಸಾಸಿವೆ,
ತಯಾರಿಸುವ ವಿಧಾನ:
ಮೊದಲು 1 ಕಪ್ ನೀರು ಕುದಿಯಲು ಇಡಿ. ನೀರು ಕುದಿ ಬಂದಾಗ ಸಿಪ್ಪೆಬೀಜ ತೆಗೆದು ಕಟ್ ಮಾಡಿದ ಬೂದುಗುಂಬಳದ ಹೋಳು ಹಾಕಿ ಅರಿಶಿಣ ಪುಡಿ ಹಾಕಿ ನಂತರ 5-6 ಕರಿಬೇವು ಹಾಕಿ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ. ಈಗ ಮೇಲೆ ಹೇಳಿದ ಸಾಮಗ್ರಿಗಳನ್ನು (ಮೊಸರು ಒಂದನ್ನು ಬಿಟ್ಟು) ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.
ಈ ಕಡೆಗೆ ಬೂದುಗುಂಬಳದ ಹೋಳು ಬೆಂದಿದೆ. ಈಗ ಇದಕ್ಕೆ ರುಬ್ಬಿದ ಮಸಾಲೆ ಹಾಕಿ ಕೈಯಾಡಿಸಿ. ರುಚಿಗೆ ಉಪ್ಪು ಹಾಕಿ. ಬೆಲ್ಲ ಚೂರು ಹಾಕಿ ಮಿಶ್ರಣ ಮಾಡಿ. ಚೆನ್ನಾಗಿ ಕುದಿ ಬರಲಿ, ಈಗ ಬೀಟ್ ಮಾಡಿದ ಮೊಸರು ಹಾಕಿ. ಮೊಸರು ಹಾಕಿದಾಗ ಸಣ್ಣ ಉರಿಯಲ್ಲಿ ಕುದಿಸಿ. ನಂತರ ಸಾಸಿವೆ ಹಿಂಗು ಕರಿಬೇವಿನ ಒಗ್ಗರಣೆ ಕೊಡಿ. ಈಗ ಬೂದುಗುಂಬಳದ ಮಜ್ಜಿಗೆ ಹುಳಿ ಸಿದ್ದ… ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯಾವಾಗಲೂ ಬೇಳೆ ಕಾಳುಗಳನ್ನು ಮತ್ತು ತರಕಾರಿಗಳನ್ನು ಉಪಯೋಗಿಸಿ ಸಾಂಬಾರ್ ತಿನ್ನುವುದರಿಂದ ಬೋರಾಗುತ್ತದೆ ಅದಕ್ಕಾಗಿ ಒಮ್ಮೊಮ್ಮೆ ಈ ರೀತಿಯ ಮಜ್ಜಿಗೆಯನ್ನು ಉಪಯೋಗಿಸುವುದರಿಂದ ದೇಹಕ್ಕೂ ಒಳ್ಳೆಯ ಜೀರ್ಣಶಕ್ತಿ ಸಿಗುತ್ತದೆ.