ಹಿಂದಿನ ರೈತರು ಮುಂಚೆ ಬೇಳೆಯುತ್ತಿದ್ದ ಬೆಳೆಯನ್ನೇ ಮತ್ತೆ ಬೆಳೆದು ಅದರಲ್ಲಿಯೇ ಲಾಭವೋ ನಷ್ಟವೋ ಅದರಲ್ಲೆ ಖುಷಿ ಪಡೆದುಕೊಳ್ಳುತ್ತಿದ್ದರು. ಆದರೆ ಇಂದು ಭಾರತದ ರೈತರು ಹೊಸ ಪ್ರಯೋಗಳನ್ನು ಮಾಡುತ್ತಾ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಆಧುನಿಕ ಕೃಷಿಯತ್ತ ಮುಖ ಮಾಡಿರುವ ರೈತರು ಇಂದು ಸುಖೀ ಜೀವನದೊಂದಿಗೆ ಕಾರು ಬಂಗಲೆ ಮಾಲೀಕರಾಗುತ್ತಿದ್ದಾರೆ. ಹಾಗಾಗಿ ಇಂದು ನಾವು ಅಂತಹ ಒಂದು ಕೃಷಿಯ ಬಗ್ಗೆ ತಿಳಿಸುತ್ತೇನೆ. ಇದನ್ನು ನೀವು ಬೆಳೆಯುದರಿಂದ ತುಂಬಾ ದುಡ್ಡನ್ನು ಸಂಪಾದಿಸಬಹುದು. ಹಾಗಾದರೆ ಇದು ಯಾವ ರೀತಿಯ ಕೃಷಿ?
ಈ ಕೃಷಿ ಎಂದರೆ ಆವಕಾಡೊ ಹಣ್ಣಿನ ಕೃಷಿ ಇದನ್ನು ಬಟರ್ ಫ್ರೂಟ್ ಅಂತಾ ಕೂಡ ಕರೆಯಲಾಗುತ್ತೆ. ಈ ಹಣ್ಣಿನಲ್ಲಿ ಅನೇಕ ಆರೋಗ್ಯ ಪ್ರಯೋಜನಗಳು ತುಂಬಾ ಇವೆ. ಈ ಹಣ್ಣು ಸಾಮಾನ್ಯವಾಗಿ ಭಾರತದಲ್ಲಿ ಸಿಗುವುದು ಕಡಿಮೆ. ಆದರೆ ಈಗ ಭಾರತದಲ್ಲಿ ಇದರ ಬೇಸಾಯ ಈಗೀಗ ಹೆಚ್ಚುತ್ತಿದೆ. ಈ ಹಣ್ಣಿನ ತಿರುಳನ್ನು ತಿನ್ನಲಾಗುತ್ತದೆ. ಬೆಣ್ಣೆಯಂತಹ ಮೃದುವಾದ ತಿರುಳಿನ ನಡುವೆ ದೊಡ್ಡ ಬೀಜವಿರುತ್ತದೆ. ವಾಸ್ತವವಾಗಿ, ದಕ್ಷಿಣ ಮೆಕ್ಸಿಕೋದಲ್ಲಿ ಬೆಳೆಯುವ ಈ ಹಣ್ಣು ಅದರ ಗುಣಲಕ್ಷಣಗಳು ಮತ್ತು ಪ್ರಯೋಜನಗಳಿಂದಾಗಿ ವಿಶ್ವಾದ್ಯಂತ ಪ್ರಸಿದ್ಧವಾಗಿದೆ.
ಬಟರ್ ಫ್ರೂಟ್ ಬೆಳೆಯುವುದು ಹೇಗೆಂದರೆ ಬೆಚ್ಚನೆಯ ವಾತಾವರಣವಿರುವ ಯಾವುದೇ ಪ್ರದೇಶದಲ್ಲಿ ಈ ಹಣ್ಣನ್ನು ಬಹಳ ಸುಲಭವಾಗಿ ಬೆಳೆಸಬಹುದು. ತಂತ್ರಜ್ಞಾನ ಮತ್ತು ಸರಿಯಾದ ಜ್ಞಾನದ ಅಭಿವೃದ್ಧಿಯೊಂದಿಗೆ, ಈ ಹಣ್ಣಿನ ಕೃಷಿಯನ್ನು ಸುಲಭವಾಗಿ ಮಾಡಬಹುದಾಗಿದೆ. ಈ ಹಣ್ಣಿನ ಕೃಷಿಗೆ ತಾಪಮಾನವು 20 ರಿಂದ 40 ಡಿಗ್ರಿಗಳಿದ್ದರೆ ಸಾಕು.
ಭಾರತದಲ್ಲಿ, ಈ ಹಣ್ಣನ್ನು ಪ್ರಸ್ತುತ ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳದ ಭಾಗಗಳಲ್ಲಿ ಬೆಳೆಯಲಾಗುತ್ತಿತ್ತು. ಲ್ಯಾಟರೈಟ್ ಮಣ್ಣನ್ನು ಈ ಕೃಷಿಗೆ ಅತ್ಯುತ್ತಮವೆಂದು ಹೇಳಲಾಗಿದೆ. ಅಲ್ಲದೆ ಮಣ್ಣಿನ pH 5 ರಿಂದ 6 ರ ನಡುವೆ ಇರಬೇಕು. ಮಣ್ಣಿನಲ್ಲಿ ಪಳೆಯುಳಿಕೆಗಳ ಪ್ರಮಾಣವು ಹೆಚ್ಚಾದಾಗ, ಸಸ್ಯವು ಹೆಚ್ಚು ಫಲವನ್ನು ನೀಡುತ್ತದೆ.ಶುಷ್ಕ ಮತ್ತು ಬಿಸಿ ವಾತಾವರಣದಲ್ಲಿ ಪ್ರತಿ 3 ರಿಂದ 4 ವಾರಗಳಿಗೊಮ್ಮೆ ಸಸ್ಯಕ್ಕೆ ನೀರು ಹಾಕಿದರೆ ಸಾಕಾಗುತ್ತದೆ.
ಮಳೆಗಾಲದಲ್ಲಿ ನೀರು ಹೆಚ್ಚಾದರೆ ಕೂಡಲೇ ನೀರು ಬೇರಡೆ ಹರಿಸಬೇಕು. ಭಾರತದಲ್ಲಿ ಆವಕಾಡೊ ಕೃಷಿ ಹೆಚ್ಚಾಗಿದೆ ಆದರೆ ಇನ್ನೂ ಬೇಡಿಕೆಯಷ್ಟು ಇಲ್ಲ. ಇಂದು ಜನರು ಹೆಚ್ಚು ಹೆಚ್ಚು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವುದರಿಂದ ಅದರ ಬೇಡಿಕೆಯೂ ಹೆಚ್ಚಾಗುತ್ತಿದೆ. ಇಂದು ಮಾರುಕಟ್ಟೆಯಲ್ಲಿ ಆವಕಾಡೊ ಗುಣಮಟ್ಟಕ್ಕೆ ಅನುಗುಣವಾಗಿ ಕೆಜಿಗೆ 500 ರಿಂದ 1500 ರೂಪಾಯಿಗಳವರೆಗೆ ಮಾರಾಟವಾಗುತ್ತಿದೆ.
ಈ ರೀತಿ ಹೊಸ ಹೊಸ ವೈಜ್ಞಾನಿಕ ಬೆಳೆಗಳನ್ನು ಬೆಳೆಯುತ್ತ ನಾವು ನಮ್ಮ ಹಣಕಾಸು ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಬಹುದು.