ಒಬ್ಬ ವ್ಯಕ್ತಿ ಜೀವನದಲ್ಲಿ ತುಂಬಾ ಯಶಸ್ಸು ಕಾಣುತ್ತಾನೆ, ಮತ್ತೊಬ್ಬ ಯಶಸ್ಸು ಕಾಣೋದಿಲ್ಲ ಅಂತ ನಾವೆಲ್ಲಾ ಅಂದಾಜಿಸುತ್ತೇವೆ. ಒಟ್ಟಿನಲ್ಲಿ ಹೇಳುವುದಾದರೆ ಈ ಯಶಸ್ಸು ವ್ಯಕ್ತಿನಿಷ್ಠವಾಗಿರುತ್ತದೆ ಅಲ್ವಾ?
ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ತುಂಬಾನೇ ಯಶಸ್ವಿ ಹೊಂದಬೇಕು ಅಂತಾನೆ ಶ್ರಮ ಪಡುತ್ತಿರುತ್ತಾರೆ. ಜೀವನದಲ್ಲಿ ಯಶಸ್ವಿಯಾಗಲು ತಮ್ಮದೇ ಆದ ಮಾರ್ಗಗಳನ್ನು ಕಂಡುಕೊಂಡಿರುತ್ತಾರೆ.
ನೀವು ಯಶಸ್ವಿ ವ್ಯಕ್ತಿಯಾಗಬೇಕಾದರೆ ನಿಮ್ಮಲ್ಲಿ ಈ ನಡವಳಿಕೆಗಳನ್ನು ರೂಢಿಸಿಕೊಳ್ಳಿ…
• ಬೆಳಗ್ಗೆ ಬೇಗ ಎದ್ದೇಳುವುದನ್ನು ರೂಢಿಸಿಕೊಳ್ಳಿ: ನಿಮ್ಮ ದಿನವನ್ನು ಬೇಗನೆ ಪ್ರಾರಂಭಿಸಿದರೆ, ನಿಮ್ಮ ಕೆಲಸಗಳನ್ನು ಮಾಡಿಕೊಳ್ಳಲು ನಿಮಗೆ ದಿನದಲ್ಲಿ ತುಂಬಾ ಸಮಯ ಸಿಗುತ್ತದೆ. ರಾತ್ರಿ ಸಹ ಬೇಗನೆ ಮಲಗುವುದನ್ನು ಅಭ್ಯಾಸ ಮಾಡಿಕೊಂಡರೆ, ನಮ್ಮ ಮೆದುಳಿಗೆ, ಮನಸ್ಸಿಗೆ ಒಳ್ಳೆಯ ವಿಶ್ರಾಂತಿ ದೊರೆಯುತ್ತದೆ.
• ಯಾವುದೇ ವಿಷಯದಲ್ಲಿದ್ದರೂ ಕ್ರಿಯಾಶೀಲತೆಯಿಂದ ಯೋಚಿಸಿ: ಸದಾ ಕ್ರಿಯಾಶೀಲರಾಗಿ ಮತ್ತು ನಮ್ಮ ಬಗ್ಗೆ ಬೇರೆಯವರು ಏನು ಅಂದುಕೊಳ್ಳುತ್ತಾರೆ ಅಂತ ಯೋಚನೆ ಮಾಡುವುದು ಬೇಡ. ಬೇರೆಯವರ ಅನವಶ್ಯಕವಾದ ಮಾತುಗಳಿಗೆ ಪ್ರತಿಕ್ರಿಯಿಸುವುದು ಒಳ್ಳೆಯದಲ್ಲ. ನಮ್ಮ ಪೂರ್ಣ ಗಮನ ನಮ್ಮ ಗುರಿಯತ್ತ ಇರಲಿ.
• ನಿಮ್ಮ ಗುರಿ ಸ್ಪಷ್ಟವಾಗಿರಲಿ: ಸ್ಪಷ್ಟ ಗುರಿ ಹೊಂದುವುದರ ಮೂಲಕ ನಿಮಗೆ ಉದ್ದೇಶ ಮತ್ತು ನಿರ್ದೇಶನವನ್ನು ನೀಡುತ್ತದೆ.
• ನೀವು ಧೈರ್ಯವಾಗಿ ನಿರ್ಣಯ ಮಾಡಬೇಕು: ಯಶಸ್ಸನ್ನು ಸಾಧಿಸಲು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಅಲ್ಲಿಯೇ ಧೈರ್ಯ ಬರುತ್ತದೆ.
• ನಿಮ್ಮ ಕೆಲಸಗಳ ಬಗ್ಗೆ ನಿಮಗೆ ಆತ್ಮ ವಿಶ್ವಾಸವಿರಲಿ: ಜೀವನದಲ್ಲಿ ಏನಾದರೂ ಸಾಧಿಸಬೇಕು ಅನ್ನೋ ಆತ್ಮವಿಶ್ವಾಸ ಮತ್ತು ಛಲ ಖಂಡಿತ ಇರಲಿ.
• ನಿಮ್ಮ ಸಾಧನೆಯತ್ತ ನಿಮ್ಮ ಗಮನವಿರಲಿ: ಪರಿಪೂರ್ಣತೆಯ ಗುರಿಯು ಇಲ್ಲದೆ ಪ್ರಗತಿಯು ನಿಮ್ಮ ಕಣ್ಣಿಗೆ ಕಾಣುವುದಿಲ್ಲ. ಪ್ರತಿ ಸಣ್ಣ ಪುಟ್ಟ ಗೆಲುವು ಸಹ ನೋಡಲು ಸಹಾಯವಾಗುತ್ತದೆ.
• ಬದಲಾವಣೆಗಳನ್ನು, ಸಲಹೆಗಳನ್ನು ಪರಿಶೀಲಿಸಿ ಸ್ವೀಕರಿಸಿ: ಯಶಸ್ವಿ ವ್ಯಕ್ತಿಗಳ ಮತ್ತೊಂದು ರಹಸ್ಯವೆಂದರೆ ನಾವು ಯಾವುದೇ ರೀತಿಯ ಬದಲಾವಣೆಯನ್ನು ಸಹ ತೆರೆದ ತೋಳುಗಳಿಂದ ಸ್ವೀಕರಿಸಬೇಕು.
• ಜೀವನದಲ್ಲಿ ಏನೇ ಆದರು ಎಲ್ಲದರಿಂದಲೂ ಕಲಿಯುವ ಹುಮ್ಮಸ್ಸು ಇರಲಿ: ಸಾಧಕರು ಎಂದಿಗೂ ನನಗೆ ಎಲ್ಲಾ ಗೊತ್ತು ಅಂತ ಎಂದಿಗೂ ಬೀಗುವುದಿಲ್ಲ, ಬದಲಾಗಿ ತಮಗೆ ಇನ್ನೂ ಜೀವನದಲ್ಲಿ ಕಲಿಯುವುದು ತುಂಬಾನೇ ಇದೆ ಅಂತ ತಿಳಿದುಕೊಂಡು ಮುಂದೆ ಸಾಗಬೇಕು.
• ನಿಮ್ಮ ದಿನಚರಿ ಶಿಸ್ತುಬದ್ಧವಾಗಿರಲಿ: ಯಶಸ್ವಿ ಜನರ ಜೀವನದಲ್ಲಿ ಶಿಸ್ತು ಎಂಬುದು ತುಂಬಾನೇ ಮುಖ್ಯ. ಪ್ರತಿ ವಿಷಯದಲ್ಲೂ ಅವರು ತುಂಬಾ ಶಿಸ್ತನ್ನು ಪಾಲಿಸಬೇಕು.