ಮಂಗಳೂರು:ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಆರೋಪ ಹಿನ್ನೆಲೆ. ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಎಚ್ಚರಿಕೆ.
ಎಚ್ಚರಿಕೆ ಬೆನ್ನಲ್ಲೇ ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಖಾಕಿ ಭದ್ರ ಕೋಟೆ.ಬಿಜೆಪಿ ಪ್ರತಿಭಟನೆ ನಡೆಸುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ನೀಡಲಾಗಿದೆ.
ಮಂಗಳೂರು ನಗರದ ಮಲ್ಲಿಕಟ್ಟೆ ಬಳಿ ಇರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಕದ್ರಿ, ಪಾಂಡೇಶ್ವರ ಠಾಣೆ ಪೊಲೀಸರಿಂದ ಭದ್ರತೆ.
ಕಚೇರಿ ಮುಂಭಾಗ ಬ್ಯಾರಿಕೇಡ್ ಅಳವಡಿಸಿ ಕಚೇರಿ ಒಳಗೆ ಪ್ರತಿಭಟನಾಕಾರರು ನುಗ್ಗದಂತೆ ಭದ್ರತೆ.ಎರಡು ಕೆ.ಎಸ್.ಆರ್.ಪಿ ತುಕಡಿಗಳ ನಿಯೋಜನೆ.
ಮಂಗಳೂರು ದಕ್ಷಿಣ ವಿಭಾಗದ ಎಸಿಪಿ ಧನ್ಯನಾಯಕ್ ಸ್ಥಳದಲ್ಲೇ ಮೊಕ್ಕಾಂ.ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿರುವ ದಕ್ಷಿಣಕನ್ನಡ ಬಿಜೆಪಿ ಜಿಲ್ಲಾ ಯುವ ಮೋರ್ಚಾ.
ನಾಸಿರ್ ಹುಸೇನ್ರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ ಇದೆ.
ಡಿಸಿಪಿ ಜೊತೆ ಕಾಂಗ್ರೆಸ್ ನಾಯಕರ ವಾಗ್ವಾದ :
ಮಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಪ್ಲಾನ್ ವಿಚಾರ ಮಂಗಳೂರು ಡಿಸಿಪಿ ಜೊತೆ ಕಾಂಗ್ರೆಸ್ ನಾಯಕರ ವಾಗ್ವಾದ ನಡೆಸಿದ್ದಾರೆ.
ಕದ್ರಿಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರ್ತಿದಾರೆ, ತಡೆಯಿರಿ ಅಂತ ಆಕ್ರೋಶ ವ್ಯಕ್ತ.ನೀವು ಇಲ್ಲಿ ಬಂದು ಬಂದೋಬಸ್ತ್ ಮಾಡಿದ್ರೆ ಆಗುತ್ತಾ ಎಂದಿದ್ದಾರೆ.
.