ಮಂಗಳೂರು: ಸಾಂಪ್ರದಾಯಿಕ ಸಾವಯವ ಕೃಷಿ ವಿಷಮುಕ್ತ ಮಾತ್ರವಲ್ಲ ಈ ಉತ್ಪನ್ನಗಳು ಔಷಧೀಯ ಗುಣಗಳನ್ನು ಕೊಡಬಲ್ಲದು ಆರೋಗ್ಯಕರ ಆಹಾರ. ನಮ್ಮ ಈಗಿನ ಪೀಳಿಗೆ ಇದನ್ನು ಗಮನಿಸಿ ಈಗಿನ ಅಧಿಕ ಇಳುವರಿಗಾಗೀ ಪ್ರಸ್ತುತ ರೂಡಿ ಮಾಡಿಕೊಂಡಿರುವ ರಾಸಾಯನಿಕ ಯುಕ್ತ ಪ್ರವೃತ್ತಿ ಇಂದ ಹೊರಬರುವ ಅನಿವಾರ್ಯತೆ ಇದೆ ಎಂದು ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಎಂ ಬಿ ಪುರಾಣಿಕ್ ರವರು ಹೇಳಿದರು.
ಸಾವಯವ ಕೃಷಿಕ ಗ್ರಾಹಕ ಬಳಗ (ರಿ) ಮಂಗಳೂರು ಇವರ ವಿವಿಧ ಕಾರ್ಯಕ್ರಮಗಳ ಲೋಕಾರ್ಪಣೆ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಸಾವಯವ ಬಳಗದ ಗೌರವ ಮಾರ್ಗದರ್ಶಕರಾದ ಪ್ರದೀಪ್ ಕುಮಾರ್ ಕಲ್ಕೂರ ಇವರು ನಮ್ಮ ಮಕ್ಕಳಿಗೆ ಕೃಷಿಯಲ್ಲಿ ಆಸಕ್ತಿ ಹುಟ್ಟಲು ಪ್ರಾಯೋಗಿಕ ಅನುಭವ ನೀಡಬೇಕು. ಕೇವಲ ಅಂತರ್ಜಾಲ ವೀಕ್ಷಣೆ ಅಥವಾ ಪುಸ್ತಕದ ಜ್ಞಾನ ಪ್ರಯೋಜನಕ್ಕೆ ಬಾರದು ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಪದ್ಮಶ್ರೀ ವಿಜೇತರಾದ ಸತ್ಯನಾರಾಯಣ ಬೇಲೇರಿ, ಹರೇಕಳ ಹಾಜಬ್ಬ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತರಾದ ಬಿ ಕೆ ದೇವರಾಯರು ಅವರ ಅನುಭವ ಮತ್ತು ಸಾಧನೆ ಕುರಿತ ಪ್ರಶಂಸಿಸಿ ಹೇಳಿದರು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ದೇವರಾಯ ರವರು ತಾನು ಕಳೆದ ಐದು ದಶಕದ ಗಳಿಂದ ಸಂರಕ್ಷಿಸಿ, ಬೆಳೆಸಿದ ವಿವಿಧ ತಳಿಯ ಭತ್ತ , ಹಲಸು, ಮಾವು, ಚಿಕ್ಕು ಬಗ್ಗೆ ವಿವರಿಸಿ ತನ್ನ ಈ ಶ್ರಮ, ಸಾಧನೆ ಯುವ ಜನತೆಗೆ ಆದರ್ಶವಾಗಿ ಇನ್ನಷ್ಟು ಮಂದಿ ಸಾವಯವ ಕೃಷಿ ಕಡೆ ಒಲಿಯಲು, ಇಳಿಯಲು ಅನುಕೂಲವಾಗಲಿ ಎಂದರು.
ಪದ್ಮಶ್ರೀ ಪ್ರಶಸ್ತಿ ವಿಜೇತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರು ತಾನು ಒಬ್ಬ ಅವಿದ್ಯಾವಂತನಾದರೂ ತನ್ನ ಗ್ರಾಮದ ಮಕ್ಕಳು ಉತ್ತಮ ವಿದ್ಯಾಬ್ಯಾಸ ಮಾಡಲು ತಾನು ತೊಡಗಿಸಿ ಕೊಂಡದನ್ನು ಹೇಳಿ ತನ್ನ ಪೋಷಕರೂ ಕೃಷಿ ಅವಲಂಬಿತ ರಾಗಿದ್ದರು ಎಂದರು.
ಇನ್ನೋರ್ವ ಪದ್ಮಶ್ರೀ ಪ್ರಶಸ್ತಿ ವಿಜೇತ ಸತ್ಯ ನಾರಾಯಣ ಬೇಲೀರಿ ಯವರು ತನ್ನ ಅನುಭವಗಳನ್ನು ಬಿಚ್ಚಿಟ್ಟರು. ಆರುನೂರುಕ್ಕೂ ಮಿಕ್ಕಿ ಸ್ಥಳೀಯ ಬತ್ತದ ತಳಿಗಳನ್ನು ಸಂರಕ್ಷ್ಸಸಿ ಕೊಂಡು ಬರುವ ಬಗ್ಗೆ ತಿಳಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿ ಆರ್ ಪ್ರಸಾದ್ ಅವರು ಬಳಗದ ರೈತ ಉತ್ಪಾದಕ ಸಂಸ್ಥೆಯ ಬಗ್ಗೆ ಹಾಗೂ ಬಿಡುಗಡೆಗೊಂಡ ಸಾವಯವ ಉತ್ಪನ್ನ ಪರೀಕ್ಷೆ ಉಪಕರಣ ಬಗ್ಗೆ ವಿವರಿಸಿದರು.
ಬಳಗದ ಗೌರವ ಅಧ್ಯಕ್ಷರಾದ ಅಡ್ಡೂರು ಕೃಷ್ಣ ರಾವ್ ಅವರು ಅತಿಥಿ ಗಳನ್ನು ಸ್ವಾಗತಿಸಿ ಪರಿಚಯಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಸ್ತುತ ವಾತಾವರಣಕೆ ವಿಷಮುಕ್ತ ಅನ್ನದ ಬಟ್ಟಲು ಇವತ್ತಿನ ತುರ್ತು ಅವಶ್ಯಕತೆ ಎಂದರು. ಬಳಗದ ಕಾರ್ಯದರ್ಶಿ ಶ್ರಿ ಕೆ, ರತ್ನಾಕರ ಕುಳಾಯಿ ಯವರು ಬಳಗದ ವಿವಿಧ ಕಾರ್ಯಕ್ರಮಗಳನ್ನು ಹಾಗೂ ಮುಂದಿನ ಯೋಜನೆ ಗಳ ಬಗ್ಗೆ ವಿವರ ನೀಡಿದರು. ಬಳಗದಿಂದ ಲೋಕಾರ್ಪಣೆಗೊಂಡ ಅಂತರ್ಜಾಲ ಬಗ್ಗೆ ಗಿರೀಶ್ ಐತಾಳ್ ರವರು ಮಾಹಿತಿ ನೀಡಿದರು. ನಿರ್ದೇಶಕರಲ್ಲೊಬ್ಬರಾದ ರಾಮಚಂದ್ರ ಭಟ್ ರವರು ವಂದನಾರ್ಪಣೆ ಸಲ್ಲಿಸಿದರು. ಸ್ನೇಹ ರವರು ಕಾರ್ಯಕ್ರಮದ ನಿರ್ವಹಣೆ ಮಾಡಿದರು.