ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (NTCA) ಪ್ರೋಟೋಕಾಲ್ ಅನುಸಾರ ದೇಶಾದ್ಯಂತ ಹುಲಿ, ಸಹ-ಪರಭಕ್ಷಕ, ಆನೆ ಹಾಗೂ ಇವುಗಳ ಬೇಟೆಯ ಅಂದಾಜು ಜನಗಣತಿ ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ ಎಂದು ಆಲ್ ಇಂಡಿಯಾ ಟೈಗರ್ ಎಸ್ಟಿಮೇಷನ್ (AlTE) ಸಂಸ್ಥೆ ತಿಳಿಸಿದೆ.
ಹುಲಿ ಸಂರಕ್ಷಣೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, 2021-2022ರಲ್ಲಿ ನಡೆಸಿದ ಜನಗಣತಿಯ ಪ್ರಕಾರ ಹುಲಿ ಸಂರಕ್ಷಣೆ ಹಾಗೂ ಶಿಷ್ಟಾಚಾರವನ್ನು ಅನುಸರಿಸಿದೆ ಎಂದು ವರದಿ ತಿಳಿಸಿದೆ.
ಈ ಸಮೀಕ್ಷೆಗಳು ಹೆಚ್ಚಾಗಿ ಹುಲಿ ಮತ್ತು ಸಹ ಪರಭಕ್ಷಕಗಳಿಗೆ ಬಳಸಲಾಗುವ ಕ್ಯಾಮರಾ ಟ್ರ್ಯಾಪ್ ಅನ್ನು ಒಳಗೊಂಡಿವೆ. ಈ ಸಮೀಕ್ಷೆಯನ್ನು ಕರ್ನಾಟಕದ ಎಲ್ಲಾ ವಿಭಾಗಗಳಲ್ಲಿ ನಡೆಸಲಾಗುತ್ತಿದ್ದು, ರಾಜ್ಯದ ಎಲ್ಲಾ 5 ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ ಸೇರಿದಂತೆ 37 ಕಡೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.
ಬಂಡೀಪುರ, ಭದ್ರಾ, ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ ಮತ್ತು ಕಾಳಿ (ದಾಂಡೇಲಿ-ಅಂಶಿ) ಹುಲಿ ಮೀಸಲು ಮತ್ತು ವನ್ಯಜೀವಿ ಅಭಯಾರಣ್ಯಗಳು ಸೇರಿದಂತೆ ಎಲ್ಲಾ ಉದ್ಯಾನವನಗಳಲ್ಲಿ ಹುಲಿ ಉಪಸ್ಥಿತಿಯನ್ನು ತೋರಿಸಿವೆ.
ಈ ಬಗ್ಗೆ NTCA ತನ್ನ 2023ರ AlTE ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಿದೆ.
ಹುಲಿಗಳ ಕನಿಷ್ಠ ಜನಗಣತಿ ಅಂದಾಜು 3167 ಎಂದು ಘೋಷಿಸಲಾಗಿದೆ. ಆದರೆ ಪಶ್ಚಿಮ ಘಟ್ಟ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಗೋವಾ ರಾಜ್ಯಗಳಲ್ಲಿ ಹುಲಿಗಳ ಸಂಖ್ಯೆ ಕುಸಿತ ಕಂಡಿದೆ ಎಂದು ವರದಿ ತಿಳಿಸಿದೆ.
ಕರ್ನಾಟಕದ ಅರಣ್ಯಾಭವನದ ಸಹಾಯದಿಂದ ರಾಜ್ಯದಲ್ಲಿನ ಹುಲಿಗಳ ಸಂಖ್ಯೆತನ್ನು ವಿಶ್ಲೇಷಿಸಿ ವರದಿ ಹೊರತರಲಾಗಿದೆ. ರಾಜ್ಯಾದ್ಯಂತ ಒಟ್ಟು 5399 ಕ್ಯಾಮರಾ ಟ್ರ್ಯಾಪ್ ಸ್ಥಳಗಳನ್ನು ಗುರುತಿಸಲಾಗಿದೆ. ಇದರಿಂದ ಎಲ್ಲಾ ವನ್ಯಜೀವಿ ಜಾತಿಗಳ 66 ಲಕ್ಷಕ್ಕೂ ಹೆಚ್ಚು ಫೋಟೋಗಳು ಸಂಗ್ರಹಿಸಲಾಗಿದೆ.
ಹುಲಿ ಚಿತ್ರಗಳನ್ನು ಮತ್ತೆ ಎಐ ಆಧಾರಿತ ಸಾಫ್ಟ್ ವೇರ್ ಅನ್ನು ಬಳಸಿ ಹುಲಿಗಳನ್ನು ಗುರುತಿಸಿ ಪ್ರತ್ಯೇಕಿಸಲಾಗಿದೆ.
2018 ರ AITE ವರದಿ ಪ್ರಕಾರ ರಾಜ್ಯದಲ್ಲಿ ಕನಿಷ್ಠ ಹುಲಿಗಳ ಸಂಖ್ಯೆ 404 ಆಗಿತ್ತು. ಇನ್ನು ರಾಜ್ಯದಲ್ಲಿ AITE 2022 ರ ವರದಿಯಲ್ಲಿ ಕನಿಷ್ಠ 435 ಹುಲಿಗಳು ಇರುವುದು ಪತ್ತೆಯಾಗಿದೆ.
ಫೋಟೋಗಳ ಮೂಲಕ ಹುಲಿಗಳ ವಯಸ್ಸು, ಲಿಂಗ ಹಾಗೂ ಅವುಗಳ ಚಲನ ಪ್ರದೇಶವನ್ನು ಪತ್ತೆ ಮಾಡಲಾಗಿದೆ. ಇದರಿಂದ ಹುಲಿಗಳ ನಡುವಿನ ಘರ್ಷಣೆ ಅಥವಾ ಗಾಯಗಳನ್ನು ಅವುಗಳ ಮೈ ಮೇಲಿರುವ ಕಳೇಬರ ಮೂಲಕ ಗುರುತಿಸಬಹುದಾಗಿದೆ.
ಭಾರತ ಹಾಗೂ ಕರ್ನಾಟಕದಲ್ಲಿನ ಹುಲಿಗಳ ಸಂಖ್ಯೆಯ ಶ್ರೇಣಿ ಕೆಳಗಿನಂತಿದೆ.
ವರ್ಷ | ಭಾರತ | ಕರ್ನಾಟಕ | ||
ಹುಲಿಗಳ ಸಂಖ್ಯೆ | ಶ್ರೇಣಿ | ಹುಲಿಗಳ ಸಂಖ್ಯೆ | ಶ್ರೇಣಿ | |
2006 |
1411 | 1165-1657 | 290 | 241-339 |
2010 | 1706 | 1520-1909 | 300 | 280-320 |
2014 | 2226 | 1945-2491 | 406 | 360-452 |
2018 | 2967 | 2603-3346 | 524 |
475-573 |
2018ರ ವರದಿಯ ಪ್ರಕಾರ ಹುಲಿಗಳ ಸಂಖ್ಯೆ ಹೆಚ್ಚು ಹೊಂದಿರುವ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಮೇಲಿನ ಅಂಕಿಅಂಶಗಳ ಪ್ರಕಾರ ಬಂಡೀಪುರ, ನಾಗರಹೊಳೆ ಭದ್ರಾ, ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ ಮತ್ತು ಕಾಳಿ (ದಾಂಡೇಲಿ-ಅಂಶಿ) ಹುಲಿ ಮೀಸಲು ಮತ್ತು ವನ್ಯಜೀವಿ ಅಭರಾಣ್ಯಗಳು ಸೇರಿ ಒಟ್ಟು 17 ಅರಣ್ಯಗಳಲ್ಲಿ ಹುಲಿಗಳನ್ನು ಗುರುತಿಸಲಾಗಿದೆ.
ಇಷ್ಟೇ ಅಲ್ಲದೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಬೆಳಗಾವಿ ವಿಭಾಗ, ಭದ್ರಾವತಿ ವಿಭಾಗ, ಕಾವೇರಿ ವನ್ಯಜೀವಿ ಅಭಯಾರಣ್ಯ, ಚಿಕ್ಕಮಗಳೂರು ವನ್ಯಜೀವಿ ವಿಭಾಗ, ಹಳಿಯಾಳ ವಿಭಾಗ, ಕಾರವಾರ ವಿಭಾಗ, ಕೊಪ್ಪ ವಿಭಾಗ, ಕುದುರೆಮುಖ ವನ್ಯಜೀವಿ ವಿಭಾಗ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ಮತ್ತು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ, ಮಡಿಕೇರಿ ಪ್ರಾದೇಶಿಕ ವಿಭಾಗ, ಮಡಿಕೇರಿ ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ, ತಲಕಾವೇರಿಯನ್ನು ಒಳಗೊಂಡಿರುವ ವನ್ಯಜೀವಿ ವಿಭಾಗ ವನ್ಯಜೀವಿ ಅಭಯಾರಣ್ಯ ಮತ್ತು ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ, ಮಲೆ ಮಹದೇಶ್ವರ ಹಿಲ್ಸ್, ಮೈಸೂರು ಪ್ರಾದೇಶಿಕ ವಿಭಾಗ, ಶಿವಮೊಗ್ಗ ವನ್ಯಜೀವಿ ವಿಭಾಗ ಇದರಲ್ಲಿ ಸೇರಿವೆ.
ಅದರ ಜೊತೆಗೆ ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ, ವಿರಾಜಪೇಟೆ ವಿಭಾಗ, ಯಲ್ಲಾಪುರ ವಿಭಾಗ ಮತ್ತು ಶಿರಸಿ ವಿಭಾಗ. ಇನ್ನು ಕೆಲವು ಅರಣ್ಯಗಳಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಟ್ಟು 612 ಕ್ಯಾಮೆರಾಗಳನ್ನು ಬಳಸಲಾಗಿದ್ದು, ಒಟ್ಟು 1709 ಹುಲಿಗಳ ಚಿತ್ರಗಳನ್ನು ಪಡೆಯಲಾಗಿದೆ. ಇವುಗಳಲ್ಲಿ 32 ಹುಲಿ ಮರಿಗಳು ಇವೆ.
ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಟ್ಟು 330 ಕ್ಯಾಮೆರಾಗಳನ್ನು ಬಳಸಲಾಗಿದ್ದು, ಒಟ್ಟು 297 ಹುಲಿಗಳ ಚಿತ್ರಗಳನ್ನು ಪಡೆಯಲಾಗಿದೆ. ಇವುಗಳಲ್ಲಿ 27 ಹುಲಿ ಮರಿಗಳು ಇವೆ.
ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಟ್ಟು 288 ಕ್ಯಾಮೆರಾಗಳನ್ನು ಬಳಸಲಾಗಿದ್ದು, ಒಟ್ಟು 331 ಹುಲಿಗಳ ಚಿತ್ರಗಳನ್ನು ಪಡೆಯಲಾಗಿದೆ. ಇವುಗಳಲ್ಲಿ 2 ಹುಲಿ ಮರಿಗಳು ಇವೆ.
ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಟ್ಟು 448 ಕ್ಯಾಮೆರಾಗಳನ್ನು ಬಳಸಲಾಗಿದ್ದು, ಒಟ್ಟು 118 ಹುಲಿಗಳ ಚಿತ್ರಗಳನ್ನು ಪಡೆಯಲಾಗಿದೆ. ಇವುಗಳಲ್ಲಿ 1 ಹುಲಿ ಮರಿ ಪತ್ತೆಯಾಗಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಟ್ಟು 502 ಕ್ಯಾಮೆರಾಗಳನ್ನು ಬಳಸಲಾಗಿದ್ದು, ಒಟ್ಟು 1624 ಹುಲಿಗಳ ಚಿತ್ರಗಳನ್ನು ಪಡೆಯಲಾಗಿದೆ. ಇವುಗಳಲ್ಲಿ 1 ಹುಲಿ ಮರಿ ಪತ್ತೆಯಾಗಿದೆ.
ಬನ್ನೇರುಘಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಟ್ಟು 80 ಕ್ಯಾಮೆರಾಗಳನ್ನು ಬಳಸಲಾಗಿದ್ದು, ಒಟ್ಟು 34 ಹುಲಿಗಳ ಚಿತ್ರಗಳನ್ನು ಪಡೆಯಲಾಗಿದೆ.
2018ರ ವರದಿಗೆ ಹೋಲಿಸಿದರೆ ಈ ವರ್ಷ ಹೆಚ್ಚುವರಿ ಹುಲಿಗಳು ಪತ್ತೆಯಾಗಿರುವುದು ಸಂತಸದ ಸಂಗತಿಯಾಗಿದೆ. ಇದು ಪರಿಣಾಮಕಾರಿ ರಕ್ಷಣೆಯ ಸೂಚಕ ಹಾಗೂ ಸಂರಕ್ಷಿತ ಪ್ರದೇಶಗಳು ಅಳವಡಿಸಿಕೊಂಡ ಸಂರಕ್ಷಣಾ ತಂತ್ರಗಳಾಗಿವೆ.