ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆದ ಸ್ಯಾಮ್ಸಂಗ್ ಇಂದು ಹೊಸ ಶ್ರೇಣಿಯ ಸಂಪೂರ್ಣ ಸ್ವಯಂಚಾಲಿತ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ಆದ ಎಐ ಇಕೋಬಬಲ್ಟಿಎಂ ಅನ್ನು ಅನಾವರಣಗೊಳಿಸಿದೆ. ಈ ಹೊಸ ಶ್ರೇಣಿಯ ವಾಷಿಂಗ್ ಮೆಷಿನ್ಗಳು 11 ಕೆಜಿ ವಿಭಾಗದಲ್ಲಿ ಎಐ ವಾಶ್, ಕ್ಯೂ-ಡ್ರೈವ್ಟಿಎಂ ಮತ್ತು ಆಟೋ ಡಿಸ್ಪೆನ್ಸ್ ನಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಅದು ನಿಮ್ಮ ಬಟ್ಟೆ ಒಗೆಯುವ ಕ್ರಿಯೆಯನ್ನು 50% ವೇಗವಾಗಿಸುತ್ತದೆ, 45.5% ಉತ್ತಮ ಬಟ್ಟೆಯ ಆರೈಕೆ ಮಾಡುತ್ತದೆ ಮತ್ತು 70%ರಷ್ಟು ಹೆಚ್ಚು ಶಕ್ತಿ-ದಕ್ಷತೆ ಹೊಂದಿದೆ.
ಎಐ ಇಕೋಬಬಲ್ಟಿಎಂ ಸ್ಯಾಮ್ಸಂಗ್ನ ಕ್ಯೂ-ಬಬಲ್ಟಿಎಂ ಮತ್ತು ಡ್ವಿಕ್ ಡ್ರೈವ್ಟಿಎಂ ತಂತ್ರಜ್ಞಾನಗಳ ಪರಿಪೂರ್ಣ ಮಿಶ್ರಣವಾಗಿದ್ದು, ಅದು ಒಟ್ಟೆ ಒಗೆಯುವಿಕೆಯನ್ನು ಹೆಚ್ಚು ಪರಿಪೂರ್ಣಗೊಳಿಸುತ್ತದೆ ಮತ್ತು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಕ್ಯೂ-ಬಬಲ್ಟಿಎಂ ತಂತ್ರಜ್ಞಾನವು ಡೈನಾಮಿಕ್ ಡ್ರಮ್ ತಿರುಗುವಿಕೆಯನ್ನು ಹೆಚ್ಚುವರಿ ನೀರಿನ ಹರಿಯುವಿಕೆ ಜೊತೆ ಸಂಯೋಜಿಸಿ ಹೆಚ್ಚು ಮತ್ತು ಶಕ್ತಿಯುತವಾದ ಬಬಲ್ ಉಂಟು ಮಾಡಿ ಡಿಟರ್ಜೆಂಟ್ ಅನ್ನು ಸೂಕ್ತವಾಗಿ ಬಳಸುವಂತೆ ಮಾಡುತ್ತದೆ. ಡ್ವಿಕ್ ಡ್ರೈವ್ಟಿಎಂ ತಂತ್ರಜ್ಞಾನವು ಒಗೆಯುವ ಸಮಯವನ್ನು 50%ವರೆಗೆ ಕಡಿಮೆ ಮಾಡುತ್ತದೆ. ಈ ವೈಶಿಷ್ಟ್ಯಗಳು ನೀರು ಮತ್ತು ಶಕ್ತಿ ಸಂರಕ್ಷಣೆ ಮಾಡುವ ಮೂಲಕ ಎಐ ಇಕೋಬಬಲ್ ನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.
ಆಟೋ ಡಿಸ್ಪೆನ್ಸ್ ಮತ್ತು ಎಐ ವಾಶ್ನೊಂದಿಗೆ ಹೊಸ ಶ್ರೇಣಿಯು ಹೆಚ್ಚು ಅರ್ಥಗರ್ಭಿತವಾಗಿದೆ ಮತ್ತು ಸ್ಮಾರ್ಟ್ ಆಗಿದೆ. ಎಐ ವಾಶ್ ವೈಶಿಷ್ಟ್ಯವು ಬಟ್ಟೆಗಳ ತೂಕವನ್ನು ಗ್ರಹಿಸುತ್ತದೆ ಮತ್ತು ಅಗತ್ಯವಿರುವಷ್ಟೇ ನೀರು ಮತ್ತು ಮಾರ್ಜಕದ ಪ್ರಮಾಣವನ್ನು ಹೊಂದಿಸುತ್ತದೆ. ಇದು ಬಟ್ಟೆಯ ಮೃದುತ್ವವನ್ನು ಪತ್ತೆ ಮಾಡಿ, ಅದನ್ನು ರಕ್ಷಿಸಲು ಒಗೆಯುವ ಮತ್ತು ತಿರುಗುವ ಸಮಯವನ್ನು ಸರಿಹೊಂದಿಸುತ್ತದೆ.
“ಸ್ಯಾಮ್ಸಂಗ್ ನಲ್ಲಿ, ನಾವು ಕೇವಲ ಅರ್ಥಗರ್ಭಿತವಷ್ಟೇ ಅಲ್ಲ, ಜೊತೆಗೆ ಸುಸ್ಥಿರ ತಂತ್ರಜ್ಞಾನವನ್ನು ಪರಿಚಯಿಸುವತ್ತ ಗಮನ ಹರಿಸುತ್ತೇವೆ. ಗ್ರಾಹಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನಾವು ಹೊಸ ಶ್ರೇಣಿಯನ್ನು ವಿನ್ಯಾಸಗೊಳಿಸಿದ್ದೇವೆ. 11 ಕೆಜಿಯ ಸಂಪೂರ್ಣ ಸ್ವಯಂಚಾಲಿತ ಫ್ರಂಟ್ ಲೋಡ್ ವಾಶಿಂಗ್ ಮೆಷಿನ್ ವಿಭಾಗದಲ್ಲಿ ನಮ್ಮ ಈ ಮೊದಲ ಶ್ರೇಣಿಯು ಹೆಚ್ಚು ಶಕ್ತಿ ದಕ್ಷತೆಯನ್ನು ಹೊಂದಿದೆ. ಆಟೋ ಡಿಸ್ಪೆನ್ಸ್, ಎಐ ವಾಶ್ ಮತ್ತು ಕ್ಯೂ-ಡ್ರೈವ್ಟಿಎಂ ನಂತಹ ವೈಶಿಷ್ಟ್ಯಗಳು ಬಟ್ಟೆ ಒಗೆಯುವಿಕೆಯನ್ನು ಸುಲಭ ಮತ್ತು ಸರಳವಾಗಿ ಮಾಡಲು ಕೊಡುಗೆ ನೀಡುತ್ತವೆ” ಎಂದು ಸ್ಯಾಮ್ಸಂಗ್ ಇಂಡಿಯಾದ ಡಿಜಿಟಲ್ ಅಪ್ಲಯನ್ಸಸ್ ಬಿಸಿನೆಸ್ ಡೈರೆಕ್ಟರ್ ಪುಷ್ಪ್ ಸೌರಭ್ ಬೈಶಾಖಿಯಾ ಹೇಳಿದರು.
ಈ ವೇಳೆ ಅವರು, “ನಮ್ಮ ಹೊಸ ಶ್ರೇಣಿಯ ಎಐ ಇಕೋಬಬಲ್ಟಿಎಂ ವಾಷಿಂಗ್ ಮೆಷಿನ್ಗಳ ಮೂಲಕ ಸ್ಯಾಮ್ಸಂಗ್ ಜೀವನಶೈಲಿಯನ್ನು ಸುಧಾರಿಸಲು ಕೊಡುಗೆ ನೀಡುತ್ತದೆ ಮತ್ತು ಇಂದಿನ ಗ್ರಾಹಕರ ಜೀವನಕ್ಕೆ ಮೌಲ್ಯವನ್ನು ಸೇರುಸುತ್ತದೆ ಎಂಬ ವಿಶ್ವಾಸ ನಮಗಿದೆ” ಎಂದು ಅವರು ಹೇಳಿದರು.
ಆಧುನಿಕ ಭಾರತೀಯ ಗ್ರಾಹಕರು ವಾಶಿಂಗ್ ಸೈಕಲ್ ಕಡಿಮೆ ಮಾಡುವ, ನೀರನ್ನು ಉಳಿಸುವ ಮತ್ತು ಹಾಸಿಗೆಗಳು/ ಕರ್ಟೈನ್ಗಳಂತಹ ಭಾರವಾದ ಬಟ್ಟೆಗಳನ್ನು ಒಗೆಯಬಲ್ಲ ಹೊಸ ಲಾಂಡ್ರಿ ಪರಿಹಾರಗಳನ್ನು ಹುಡುಕುತ್ತಿದ್ದಾರೆ. ಪ್ರಸ್ತುತ ಬಿಡುಗಡೆ ಮಾಡಲಾದ ಎಐ ಇಕೋಬಬಲ್ಟಿಎಂ ಶ್ರೇಣಿಯ ವಾಶಿಂಗ್ ಮೆಷಿನ್ ಗಳು ಗ್ರಾಹಕರ ಈ ಅಗತ್ಯವನ್ನು ಪೂರೈಸಲಿದೆ.
ಹೊಸ ಶ್ರೇಣಿಯ ಎಐ ಇಕೋಬಬಲ್ಟಿಎಂ ವಾಷಿಂಗ್ ಮೆಷಿನ್ಗಳನ್ನು ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ಸ್ಯಾಮ್ಸಂಗ್ ಸ್ಮಾರ್ಟ್ ಥಿಂಗ್ಸ್ ಆಪ್ ಮೂಲಕ ಯಾವುದೇ ಸಮಯದಲ್ಲಿ ಮತ್ತು ಯಾವುದೇ ಸ್ಥಳದಲ್ಲಿ ಮೇಲ್ವಿಚಾರಣೆ ಮಾಡಬಹುದು ಮತ್ತು ನಿಯಂತ್ರಿಸಬಹುದು. ಈ ಉತ್ಪನ್ನ ಹ್ಯಾಬಿಟ್ ಲರ್ನಿಂಗ್ ಮತ್ತು ಇನ್ಫರ್ಮೇಟಿಗ್ ಡಿಸ್ ಪ್ಲೇ ಥರದ ಪರ್ಸನಲೈಸ್ಡ್ ಫೀಚರ್ ಜೊತೆ ಬರುತ್ತದೆ. ಈ ವ್ಯವಸ್ಥೆಯು ನಿಮ್ಮ ಬಳಕೆಯ ರೀತಿಯನ್ನು ಗ್ರಹಿಸಿ ನಿಮಗೆ ಒಗೆಯುವ ಸೈಕಲ್ ನೆನಪಿಸುತ್ತದೆ, ಅಗತ್ಯ ಮಾಹಿತಿಗಳನ್ನು ಡಿಸ್ ಪ್ಲೇ ಮಾಡುತ್ತದೆ. ಸ್ಯಾಮ್ಸಂಗ್ ಸ್ಮಾರ್ಟ್ ಥಿಂಗ್ಸ್, ವಾಶಿಂಗ್ ಸೈಕಲ್ ಗಳು, ಯೋಜನೆ ಮತ್ತು ದೋಷನಿವಾರಣೆಯ ಕುರಿತ ಸಲಹೆ ಸೇರಿದಂತೆ ಹೆಚ್ಚುವರಿ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಇದು ಒಣಗಿಸುವ ಮಾದರಿಯನ್ನು ಸ್ವಯಂಚಾಲಿತವಾಗಿ ಆಯ್ಕೆ ಮಾಡುತ್ತದೆ*.
ಹೊಸ ಉತ್ಪನ್ನವು ವಿಶಿಷ್ಟವಾದ ಸ್ಪೇಸ್ ಮ್ಯಾಕ್ಸ್ಟಿಎಂ ತಂತ್ರಜ್ಞಾನವನ್ನು ಸಹ ಹೊಂದಿದ್ದು, ಅದು ಬಾಹ್ಯ ವಿನ್ಯಾಸವನ್ನು ದೊಡ್ಡದಾಗಿಸದೆ ಒಳಗೆ ಹೆಚ್ಚಿನ ಸ್ಥಳಾವಕಾಶ ದೊರೆಯುವಂತೆ ಮಾಡುತ್ತದೆ.
ವಿನ್ಯಾಸ ಮತ್ತು ಬಣ್ಣಗಳು ಇಕೋಬಬಲ್ಟಿಎಂ ಸಂಪೂರ್ಣ ಸ್ವಯಂಚಾಲಿತ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ಶ್ರೇಣಿ ಆಗಿದ್ದು, ರೇರ್ ಕಂಟ್ರೋಲ್ ಪ್ಯಾನೆಲ್ ಜೊತೆಗೆ ಆಧುನಿಕ ವಿನ್ಯಾಸವನ್ನು ಹೊಂದಿರುತ್ತದೆ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿರುತ್ತದೆ.
ಬೆಲೆ ಮತ್ತು ಲಭ್ಯತೆ
ಹೊಸ ಶ್ರೇಣಿಯ ಬೆಲೆ ರೂ.67990 ರಿಂದ ರೂ.71990ವರೆಗೆ ಇರುತ್ತದೆ. ಮಾರ್ಚ್ 7, 2024ರಿಂದ ಲಭ್ಯವಾಗಲಿದೆ.
ಸ್ಯಾಮ್ಸಂಗ್ನ ಅಧಿಕೃತ ಆನ್ಲೈನ್ ಸ್ಟೋರ್ Samsung.com, ಸ್ಯಾಮ್ಸಂಗ್ ಶಾಪ್ ಆಪ್, ರಿಟೇಲ್ ಅಂಗಡಿಗಳು ಮತ್ತು ಇತರ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಆಯ್ದ ಮಾದರಿಗಳು ಲಭ್ಯವಿರುತ್ತವೆ.
ವಾರಂಟಿ ಮತ್ತು ಆಫರ್ ಗಳು
ಡಿಜಿಟಲ್ ಇನ್ವರ್ಟರ್ ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿರುವ ಹೊಸ ಮಾದರಿಗಳು 20 ವರ್ಷಗಳ ವಾರಂಟಿಯೊಂದಿಗೆ ಬರುತ್ತವೆ.
70%ರಷ್ಟು ಎನರ್ಜಿ ಉಳಿಸುವ ಇಕೋಬಬಲ್ಟಿಎಂ
ಉತ್ಪನ್ನವು ಎಐ ಇಕೋಬಬಲ್ಟಿಎಂ ಫೀಚರ್ ಹೊಂದಿದ್ದು, ಅದು ಡಿಟರ್ಜೆಂಟ್ ಅನ್ನು ಗುಳ್ಳೆಗಳಾಗಿ ಪರಿವರ್ತಿಸುವ ಅತ್ಯಂತ ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನವಾಗಿದೆ. ಇದು ಕಡಿಮೆ ತಾಪಮಾನದಲ್ಲಿಯೂ ಕೊಳೆಯನ್ನು ತ್ವರಿತವಾಗಿ ತೆಗೆದುಹಾಕುತ್ತದೆ, 70%ರಷ್ಟು ಎನರ್ಜಿ ಉಳಿಸುತ್ತದೆ, ಮಣ್ಣಿನ ಕಲೆ ತೆಗೆಯುವಿಕೆಯಲ್ಲಿ 24%ರಷ್ಟು ಸುಧಾರಣೆ ಹೊಂದಿದೆ ಮತ್ತು 45.5% ಉತ್ತಮ ಬಟ್ಟೆಯ ಕಾಳಜಿ ವಹಿಸುತ್ತದೆ. ಎಐ ಇಕೋಬಬಲ್ಟಿಎಂ ವಿವಿಧ ಬಟ್ಟೆಗಳು ಮತ್ತು ಅದರ ಗುಣಲಕ್ಷಣಗಳನ್ನು ಗ್ರಹಿಸುತ್ತದೆ ಮತ್ತು ಹಲವಾರು ಡೇಟಾ ಮಾಹಿತಿ ಬಳಸಿ ಸೂಕ್ತವಾದ ವಾಶ್ ಸೈಕಲ್ ಅನ್ನು ನಿಮಗೆ ತಿಳಿಸುತ್ತದೆ. ಇದು ಫ್ಯಾಬ್ರಿಕ್ ಸೆನ್ಸಿಂಗ್ನೊಂದಿಗೆ ಬಟ್ಟೆಗಳನ್ನು 20%ವರೆಗೆ ರಕ್ಷಿಸಲು ಸಹಾಯ ಮಾಡುತ್ತದೆ.
ಹೆಚ್ಚು ಸ್ಥಳಾವಕಾಶ ಒದಗಿಸುವ ಸ್ಪೇಸ್ ಮ್ಯಾಕ್ಸ್ಟಿಎಂ ವಿನ್ಯಾಸ
600x850x600 ಮಿಮೀ ಗಾತ್ರದ, ಹೊಸ 11 ಕೆಜಿಯ ವಾಶಿಂಗ್ ಮೆಷಿನ್ ಯಾವುದೇ ಜಾಗಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ತಮ್ಮ ವಾಸಸ್ಥಳವನ್ನು ಅತ್ಯುತ್ತಮವಾಗಿಸಲು ಬಯಸುವ ಇಂದಿನ ಗ್ರಾಹಕರಿಗೆ ಸೂಕ್ತವಾದ ಆಯ್ಕೆಯಾಗಿದೆ. ಇದರ ಸ್ಪೇಸ್ ಮ್ಯಾಕ್ಸ್ಟಿಎಂ ವಿನ್ಯಾಸವು ದೊಡ್ಡ ಬಟ್ಟೆಗಳನ್ನು ಒಗೆಯಲು ಸಹಾಯ ಮಾಡುವ ಹೆಚ್ಚಿನ ಸ್ಥಳಾವಕಾಶವನ್ನು ಸೃಷ್ಟಿಸುತ್ತದೆ.
ಒಗೆಯುವ ಸಮಯ ಕಡಿಮೆ ಮಾಡುವ ಕ್ವಿಕ್ ಡ್ರೈವ್ಟಿಎಂ
ಮತ್ತೊಂದು ವಿಶಿಷ್ಟ ವೈಶಿಷ್ಟ್ಯವೆಂದರೆ ಕ್ವಿಕ್ ಡ್ರೈವ್ಟಿಎಂ ಇದು ಒಗೆಯುವ ಸಮಯವನ್ನು 50%ವರೆಗೆ ಕಡಿಮೆ ಮಾಡುತ್ತದೆ.
ಕ್ಯೂ-ಬಬಲ್ಟಿಎಂ ತಂತ್ರಜ್ಞಾನವು ಹೆಚ್ಚು ಹೇರಳವಾದ ಮತ್ತು ಶಕ್ತಿಯುತವಾದ ಗುಳ್ಳೆಗಳನ್ನು ರಚಿಸಲು ಹೆಚ್ಚುವರಿ ನೀರಿನ ಹೊಡೆತಗಳೊಂದಿಗೆ ಡ್ರಮ್ ತಿರುಗುವಿಕೆಯನ್ನು ಸಂಯೋಜಿಸುತ್ತದೆ. ಇದು ಡಿಟರ್ಜೆಂಟ್ ಅನ್ನು ಸೂಕ್ತವಾಗಿ ಬಳಸಲು ಮತ್ತು ತ್ವರಿತವಾಗಿ ಮತ್ತು ನಿಧಾನವಾಗಿ ಒಗೆಯಲು ಅನುವು ಮಾಡಿಕೊಡುತ್ತದೆ. ಕ್ವಿಕ್ ಡ್ರೈವ್ಟಿಎಂ ಬಟನ್ ಅಪ್ಲಿಕೇಶನ್ ಅನ್ನು ಹೆಚ್ಚು ಅರ್ಥಗರ್ಭಿತ ಮತ್ತು ಸುಲಭಗೊಳಿಸುತ್ತದೆ.
ಬಟ್ಟೆಗಳ ಕಾಳಜಿ ವಹಿಸುವ ಫ್ಯಾಬ್ರಿಕ್ ಸೆನ್ಸಿಂಗ್
ಎಐ ವಾಶ್ ವೈಶಿಷ್ಟ್ಯವು ತೂಕವನ್ನು ಗ್ರಹಿಸುತ್ತದೆ ಮತ್ತು ಲೋಡ್ ಅನ್ನು ಆಧರಿಸಿ ಬೇಸಿಕ್ ಸೈಕಲ್ ಅನ್ನು ನಿರ್ಧರಿಸುತ್ತದೆ. 2 ಕೆಜಿಗಿಂತ ಕಡಿಮೆ ಇರುವ ಲೋಡ್ ಅನ್ನು ಕೂಡ ಪತ್ತೆಹಚ್ಚುತ್ತದೆ. ಜೊತೆಗೆ, ಇದು ಬಟ್ಟೆಯ ಮೃದುತ್ವವನ್ನು ಗ್ರಹಿಸುತ್ತದೆ. ಬಬಲ್ ಗಳ ಪ್ರಮಾಣ, ಮೋಟಾರ್ ವೇಗ ಮತ್ತು ಅಗತ್ಯವಿರುವ ರಿನ್ಸಿಂಗ್ ಪ್ರಮಾಣವನ್ನು ಹೊಂದಿಸಲು ಬಟ್ಟೆಯ ಗುಣಲಕ್ಷಣಗಳನ್ನು ಕೂಡ ಗುರುತಿಸುತ್ತದೆ. ಇದಲ್ಲದೆ, ಅದರ ಎಐ ಡ್ರೈಯಿಂಗ್ ವೈಶಿಷ್ಟ್ಯವು ಒಣಗಿಸುವ ಪ್ರಕ್ರಿಯೆಯಲ್ಲಿ ಬಟ್ಟೆಯ ತೇವಾಂಶವನ್ನು ವಿಶ್ಲೇಷಣೆ ಮಾಡಿ ಸೂಕ್ತವಾದ ಒಣಗಿಸುವ ಮಾದರಿಯನ್ನು ಆಯ್ಕೆ ಮಾಡುತ್ತದೆ.
ಕ್ವಿಕ್ಡ್ರೈವ್ಟಿಎಂ ಜೊತೆಗೆ ಸೂಪರ್ಸ್ಪೀಡ್
ಒಟ್ಟೆ ಒಗೆಯುವ ಕೆಲಸಕ್ಕೆ ಅತಿ ವೇಗವನ್ನು ತರುವುದು ಇದರ ವಿಶೇಷತೆ. ಹೊಸ ಎಐ ಇಕೋಬಬಲ್ಟಿಎಂ ಮಾದರಿಗಳು ಕ್ವಿಕ್ಡ್ರೈವ್ಟಿಎಂ ತಂತ್ರಜ್ಞಾನದ ಸಹಾಯದಿಂದ 39 ನಿಮಿಷಗಳಲ್ಲಿ ಸಂಪೂರ್ಣ ಲೋಡ್ ಅನ್ನು ಒಗೆಯುತ್ತವೆ. ಸ್ಪೀಡ್ ಸ್ಪ್ರೇ ಬಳಸಿ ರಿನ್ಸಿಂಗ್(ಜಾಲಾಡುವಿಕೆ) ಸಮಯವನ್ನು ಕಡಿಮೆಗೊಳಿಸಲಾಗುತ್ತದೆ ಮತ್ತು ಇದು ಸ್ಪಿನ್ ವೇಗವನ್ನು ಕೂಡ ವೇಗಗೊಳಿಸುತ್ತದೆ.
ಬಾಳಿಕೆ
ಡಿಜಿಟಲ್ ಇನ್ವರ್ಟರ್ ತಂತ್ರಜ್ಞಾನವು ಬಲವಾದ ಆಯಸ್ಕಾಂತಗಳನ್ನು ಬಳಸಿಕೊಂಡು ವಾಶಿಂಗ್ ಮೆಷಿನ್ ಗಳು ನಿಶ್ಯಬ್ದವಾಗಿ, ಕಡಿಮೆ ಎನರ್ಜಿ ಬಳಸಿಕೊಂಡು ಮತ್ತು ಹೆಚ್ಚು ಶಕ್ತಿಯುತವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇದು ಎಐ ಇಕೋಬಬಲ್ಟಿಎಂ ಅನ್ನು ಹೆಚ್ಚು ಬಾಳಿಕೆ ಬರುವ ವಾಶಿಂಗ್ ಮೆಷಿನ್ ಅನ್ನಾಗಿ ಮಾಡುತ್ತದೆ.
ನಿರ್ವಹಣೆ
ಡಿಟರ್ಜೆಂಟ್ ಡ್ರಾಯರ್ನಲ್ಲಿರುವ ಜಿಗುಟಾದ ಕೊಳೆಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ಬಳಕೆದಾರರೇ ಮಾಡಬೇಕಾಗಿಲ್ಲ. ವಾಟರ್ ಫ್ಲಶಿಂಗ್ ಸಿಸ್ಟಮ್ ಮೂಲಕ ವಿಶೇಷವಾಗಿ ವಿನ್ಯಾಸಗೊಳಿಸಿರುವ ಸ್ಟೇ ಕ್ಲೀನ್ ಡ್ರಾಯರ್ ನಲ್ಲಿ ಬಾಕಿ ಉಳಿದ ಹೆಚ್ಚಿನ ಡಿಟರ್ಜೆಂಟ್ ಅವಶೇಷಗಳು ವೇಗವಾದ ನೀರಿನ ಜೆಟ್ಗಳಿಂದ ತೊಳೆಯಲ್ಪಡುತ್ತದೆ.