ಬೆಂಗಳೂರು : ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ವಹಿಸುವುದಕ್ಕಾಗಿ ನಡವಳಿಕೆಯಲ್ಲಿ ಸಕಾರಾತ್ಮಕ ಬದಲಾವಣೆ ತರಲು ಬದ್ಧವಾಗಿರುವ ಮ್ಯಾಗಿ (MAGGI) ಹಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಮ್ಯಾಗಿ ಒಂದು ನವೀನ ಪರಿಹಾರವನ್ನು ಪರಿಚಯಿಸಿತು: ತನ್ನ ‘ದೇಶ್ ಕೆ ಲಿಯೆ 2 ಮಿನಿಟ್’ (ದೇಶಕ್ಕಾಗಿ 2 ನಿಮಿಷ) ಉಪಕ್ರಮದ ಅಡಿಯಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದಕ್ಕಾಗಿ ಮ್ಯಾಗಿ ಕಪ್ಪಾ ನೂಡಲ್ಸ್ ಅನ್ನು ಆನಂದಿಸುವ ಅನುಭವವನ್ನು ಹೆಚ್ಚಿಸಲು ಗೋಧಿ ಹಿಟ್ಟಿನಿಂದ ತಯಾರಿಸಿದ ಖಾದ್ಯ ಫೋರ್ಕ್ ನೀಡುತ್ತಿದೆ. ವಿಶ್ವ ಪರಿಸರ ದಿನದ ಈ ಸಂದರ್ಭದಲ್ಲಿ, ಈ ಉಪಕ್ರಮದ ಮೂಲಕ ನೆಸ್ಲೆ ಸಂಸ್ಥೆಯ ಯುವ ಎಕ್ಸಿಕ್ಯೂಟಿವ್ ಒಬ್ಬರು ಪರಿಸರಕ್ಕಾಗಿ ಹೇಗೆ 2 ನಿಮಿಷಗಳನ್ನು ಸಮರ್ಪಿಸಿದ್ದಾರೆ ಎನ್ನುವ ಯಶೋಗಾಥೆಯನ್ನು ಮ್ಯಾಗಿ ಹಂಚಿಕೊಂಡಿದೆ.
ಈ ಉಪಕ್ರಮವು ಮ್ಯಾಗಿಯ ಖಾಲಿ ಪೊಟ್ಟಣವನ್ನು ವಿಲೇವಾರಿ ಮಾಡುವ ಸರಿಯಾದ ವಿಧಾನವನ್ನು ಗ್ರಾಹಕರಿಗೆ ಕಲಿಸುವ ಗುರಿ ಹೊಂದಿದೆ, ಆದರೆ ಪ್ರತಿಯೊಬ್ಬ ವ್ಯಕ್ತಿಯು ಪ್ರತಿದಿನ ಇಡುವ ಇಂತಹ ಸಣ್ಣ ಹೆಜ್ಜೆಗಳು ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತವೆ ಎಂಬುದನ್ನು ಎತ್ತಿ ತೋರಿಸುತ್ತದೆ. ಪರಿಸರಕ್ಕೆ ಜವಾಬ್ದಾರಿಯುತವಾದ ಆಯ್ಕೆಯನ್ನು ಮಾಡಲು ನಮಗೆ ಕೇವಲ 2-ನಿಮಿಷ ಸಾಕು.
ಈ ಉಪಕ್ರಮದ ಮೂಲಕ ಸಾಮೂಹಿಕ ಕ್ರಿಯೆಯ ಶಕ್ತಿಯನ್ನು ಬಳಸಿಕೊಳ್ಳಲು ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಅದರ ಮೂಲದಲ್ಲೇ ಬೇರ್ಪಡಿಸುವ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲು ಮ್ಯಾಗಿ ಪ್ರಯತ್ನಿಸುತ್ತದೆ.
ಈ ಡಿಜಿಟಲ್ ಫಿಲಂ ಕುರಿತು ಮಾಡನಾಡಿದ ನೆಸ್ಲೆ ಇಂಡಿಯಾ ಸಂಸ್ಥೆಯ ಫುಡ್ಸ್ ಬ್ಯುಸಿನೆಸ್ ವಿಭಾಗದ ನಿರ್ದೇಶಕರಾದ ರಜತ್ ಜೈನ್ ಅವರು, “ಮೌಲ್ಯ ಸರಪಳಿಯಲ್ಲಿ ಬದಲಾವಣೆ ತರುವಂತಹ ಸಣ್ಣ ಪ್ರಯತ್ನಗಳ ಕುರಿತು ಜಾಗೃತಿ ಮೂಡಿಸಲು ನಾವು ದಣಿವರಿಯದೆ ದುಡಿಯುತ್ತಿದ್ದೇವೆ. ಈ ಮನವಿಯು ಈ ದಿಸೆಯಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ಪ್ರತಿಯೊಬ್ಬರೂ ಪರಿಸರಕ್ಕಾಗಿ ತಮ್ಮ ದಿನದ 2-ನಿಮಿಷಗಳನ್ನು ನೀಡುವ ಮೂಲಕ ಸಣ್ಣ ಹೆಜ್ಜೆಯನ್ನು ಮುಂದಿಡುವಂತೆ ಎಲ್ಲರನ್ನೂ ಪ್ರೇರೇಪಿಸುವ ಮತ್ತು ಅರ್ಥಪೂರ್ಣವಾದ ಪರಿಣಾಮವನ್ನು ಸಾಧಿಸುವ ಉದ್ದೇಶವನ್ನು MAGGI® ಹೊಂದಿದೆ. ಹೆಚ್ಚು ಸುಸ್ಥಿರ ಸಮಾಜವನ್ನು ರಚಿಸುವ ಈ ಪ್ರಯತ್ನಗಳಲ್ಲಿ ಮ್ಯಾಗಿ ಸಹಯೋಗದಲ್ಲಿ ಮುಂದುವರಿಯುತ್ತದೆ” ಎಂದರು.
“2 ಮಿನಿಟ್ ಸಫಾಯಿ ಕೇ ನಾಮ್,” (ಸ್ವಚ್ಛತೆಯ ಹೆಸರಿನಲ್ಲಿ 2 ನಿಮಿಷ) ಮತ್ತು “ಯೆಲ್ಲೊ + ಬ್ಲೂ = ಗ್ರೀನ್” (ಹಳದಿ + ನೀಲಿ = ಹಸಿರು) ಹೆಸರಿನ ಅಭಿಯಾನಗಳ ಮೂಲಕ, ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ತಮವಾಗಿ ಬೇರ್ಪಡಿಸುವ ಮತ್ತು ವಿಲೇವಾರಿ ಮಾಡುವ ಮಹತ್ವ ಮತ್ತು ಮಾರ್ಗಗಳಿಗೆ ಒತ್ತು ನೀಡುವ ಮತ್ತು ಅರಿವು ಮೂಡಿಸುವ ಪರಿಸರ ಜಾಗೃತಿಯನ್ನು ಮ್ಯಾಗಿ ಮುಂದುವರಿಸುತ್ತದೆ.
ವೀಡಿಯೋ ಲಿಂಕ್: https://www.instagram.com/reel/C708tD2v7tS/?igsh=b2hibmFyeGl0Njd2