ಮಂಗಳೂರು: ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿಯವರು ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿದರು.
ತಮ್ಮ ಪತ್ನಿ ಹಾಗೂ ಪುತ್ರಿಯೊಂದಿಗೆ ಬೆಳಗ್ಗೆಯೇ ಮತಗಟ್ಟೆಯೆಡೆಗೆ ಆಗಮಿಸಿದ ಅವರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮೂವರು ಶ್ವೇತವಸ್ತ್ರಧಾರಿಗಳಾಗಿ ಮಿಂಚಿರುವುದು ವಿಶೇಷವಾಗಿತ್ತು. ನಗರದ ಕಪಿತಾನಿಯೋ ಶಾಲೆಯಲ್ಲಿ ಅವರು ತಮ್ಮ ಮತಹಕ್ಕು ಚಲಾಯಿಸಿದರು.