ಮಂಗಳೂರು: ರಾಜ್ಯದದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಮಂಗಳೂರಿನ ಕೆನರಾ ಪಿಯು ಕಾಲೇಜಿನ ವಿದ್ಯಾರ್ಥಿನಿ ತುಳಸಿ ಪೈ 596 ಅಂಕ ಪಡೆದು ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇತ್ತ ನಗರದ ಕೆನರಾ ಪಿಯು ಕಾಲೇಜಿನಲ್ಲಿ ಸಂಭ್ರಮ ಸಡಗರ ಆಚರಿಸಲಾಗಿದೆ.ಸಿಹಿ ತಿನ್ನಿಸಿ, ಅಭಿನಂದನೆ ಸಲ್ಲಿಸಿ, ಹರ್ಷ ವ್ಯಕ್ತಪಡಿಸಿದ ಕಾಲೇಜಿನ ಆಡಳಿತ ಮಂಡಳಿ.
ವಿದ್ಯಾರ್ಥಿನಿ ತುಳಸಿ ಪೈ ರಿಯಾಕ್ಷನ್
ನನ್ನ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ, ಕಾಲೇಜಿನವರು ತುಂಬಾ ಬೆಂಬಲ ನೀಡಿದ್ದಾರೆ.ಪ್ರತಿ ದಿನವೂ ಶ್ರದ್ಧೆಯಿಂದ ತಯಾರಿ ಮಾಡಿದ್ದೇನೆ.ಮುಂದೆ ಕೆನರಾ ಕಾಲೇಜಿನಲ್ಲಿ ಉನ್ನತ ವಿದ್ಯಾಭ್ಯಾಸ ಮುಂದುವರೆಸುತ್ತೇನೆ.ಮುಂದೆ ಚಾರ್ಟೆಡ್ ಅಕೌಂಟೆಂಟ್ ಆಗುವ ಕನಸು ಹೊಂದಿದ್ದೇನೆ. ನನಗೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸುತ್ತೇನೆ ಎಂದು ತುಳಸಿ ಪೈ ಹೇಳಿದರು.