ಬೆಂಗಳೂರು:ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ (ಎಂಎಸ್ಈಡಿ) ಅಧೀನದಲ್ಲಿರುವ ಮಾಧ್ಯಮ ಮತ್ತು ಮನರಂಜನಾ ಕೌಶಲ್ಯಮಂಡಳಿಯು (MESC) ಇಂದು ಯುವ ಮಹಿಳಾ ಕ್ರಿಶ್ಚಿಯನ್ಅ ಸೋಸಿಯೇಷನ್ನಲ್ಲಿ (YWCA) ಎನ್ಎಸ್ಕ್ಯೂಎಫ್ ಅನುಮೋದಿತ ಪುರಾತತ್ವ ಸಂರಕ್ಷಕ ಕಾರ್ಯಕ್ರಮವನ್ನು ಸಂಸ್ಕೃತಿ ಸಚಿವಾಲಯದಅಡಿಯಲ್ಲಿ ಭಾರತೀಯ ಪತ್ರಾಗಾರ ಇಲಾಖೆಯ (NAI) ಸಹಯೋಗದೊಂದಿಗೆ ನವದೆಹಲಿಯಲ್ಲಿ ಪ್ರಾರಂಭಿಸಿದೆ. ಈ ಕಾರ್ಯಕ್ರಮವು ದಾಖಲೆಗಳ ಡಿಜಿಟಲೀಕರಣವನ್ನು ಸಕ್ರಿಯಗೊಳಿಸಲು 1000 ಅಭ್ಯರ್ಥಿಗಳಿಗೆ ಹಳೆಯ ಮತ್ತು ಕ್ಷತಿಗ್ರಸ್ತ ದಾಖಲೆಗಳನ್ನು ಜೀವಂತಗೊಳಿಸಲು ಅಗತ್ಯಜ್ಞಾನ, ಪರಿಣತಿ ಮತ್ತು ತಾಂತ್ರಿಕ ಕೌಶಲ್ಯಗಳನ್ನು ನೀಡುವ ಮೂಲಕ ಅವರನ್ನು ಸಶಕ್ತಗೊಳಿಸುವುದು.
ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಕಾರ್ಯದರ್ಶಿಯಾಗಿರುವ ಶ್ರೀಅತುಲ್ಕುಮಾರ್ತಿವಾರಿ ಮುಖ್ಯಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅರುಣ್ಸಿಂಘಲ್, ಡೈರೆಕ್ಟರ್ ಜನರಲ್ಎ ನ್ಎಐ; ಡಾ. ಸಂಜಯ್ಗರ್ಗ್, ಉಪನಿರ್ದೇಶಕರು, ಎನ್ಎಐಮತ್ತುಶ್ರೀ. ಮೋಹಿತ್ಸೋನಿ, ಸಿಈಓ, ಎಂಈಎಸ್ಸಿ,ಅವರೂ ಕೂಡ ಕಾರ್ಯಕ್ರಮದಲ್ಲಿ ಪ್ರಮುಖಗಣ್ಯರಾಗಿ ಭಾಗವಹಿಸಿದ್ದರು.ದಾಖಲೆಗಳ ಸಂರಕ್ಷಕ ಕಾರ್ಯಕ್ರಮವು ಭಾರತೀಯ ಪತ್ರಾಗಾರ ಇಲಾಖೆಯು ಸಮಗ್ರವಾಗಿ ಡಿಜಿಟಲೀಕರಣಗೊಳಿಸುವ ತನ್ನ ಪ್ರಯತ್ನದ ಮೂಲಕ ದೇಶದ ಸಮೃದ್ಧ ದಾಖಲೆಗಳ ಆಸ್ತಿಯನ್ನು ದೇಶದ ಎಲ್ಲಾ ನಾಗರಿಕರಿಗೆ ಸುಲಭವಾಗಿಸಿಗುವಂತೆ ಮಾಡುವ ಉದ್ದೇಶವನ್ನು ಹೊಂದಿದೆ.
90 ಗಂಟೆಗಳ ಸಮಗ್ರ ತರಬೇತಿ ಘಟಕಗಳು,ಪ್ರಾಯೋಗಿಕ ಕಾರ್ಯಾಗಾರಗಳು ಮತ್ತು ಪ್ರಾಯೋಗಿಕ ಅನುಭವದ ಮೂಲಕ, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ದಾಖಲೆಗಳನ್ನು ಪುನರುಜ್ಜೀವಿತಗೊಳಿಸುವ ತಂತ್ರಗಳು, ದಾಖಲೆಗಳನ್ನು ನಿಭಾಯಿಸುವ ಉತ್ತಮ ಅಭ್ಯಾಸಗಳು, ಮೆಟಾಡೇಟಾ ನಿರ್ವಹಣೆ ಮತ್ತು ಡಿಜಿಟಲ್ ಸಂರಕ್ಷಣೆ ತಂತ್ರಗಳಲ್ಲಿ ಪ್ರಾವೀಣ್ಯತೆಯನ್ನು ಪಡೆಯುತ್ತಾರೆ. ಈ ಕಾರ್ಯಕ್ರಮವು ಎನ್ಐಎನಲ್ಲಿ ಸಂಗ್ರಹಿಸಲಾಗಿರುವ 2.25 ಕೋಟಿದಾಖಲೆಗಳ ನಿಖರವಾದ ದುರಸ್ತಿ ಮತ್ತು ಅವುಗಳನ್ನು ಪುನರುಜ್ಜೀವಿತಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಹಾಗೂ ಹೆಚ್ಚುವರಿ ಐತಿಹಾಸಿಕ ತಿಳುವಳಿಕೆಯನ್ನು ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ. ಮುಂದುವರೆದು,ಎರಡು ವರ್ಷಗಳಲ್ಲಿ ಐತಿಹಾಸಿಕ ದಾಖಲೆಗಳನ್ನು ಡಿಜಿಟಲೀಕರಗೊಳಿಸಿ ವ್ಯಾಪಕವಾಗಿ ಎಲ್ಲರಿಗೂ ಕೈಗೆಟಕುವಂತೆ ಮಾಡಿ ಸಮೃದ್ಧ ಆಸ್ತಿಯನ್ನು ಸುರಕ್ಷಿತಗಳಿಸುವ ಗುರಿಯನ್ನು ಹೊಂದಿದೆ.
ಈಸಂದರ್ಭದಲ್ಲಿ ಮಾತನಾಡಿದ ಎಂಎಸ್ಡಿಇ ಕಾರ್ಯದರ್ಶಿ ಶ್ರೀಅತುಲ್ಕುಮಾರ್ತಿವಾರಿ ಅವರು, “ಅಮೃತಕಾಲದ ಈಯುಗದಲ್ಲಿ, ಐತಿಹಾಸಿಕ ದತ್ತಾಂಶಗಳ ಸಂರಕ್ಷಣೆಯನ್ನು ನಾವು ತುಂಬಾ ಗೌರವಿಸುತ್ತೇವೆ,ಪರಂಪರೆಯ ದೃಷ್ಟಿಯಿಂದ ಮಾತ್ರವಲ್ಲದೆ ಭಾರತದ ಸಮೃದ್ಧ ಇತಿಹಾಸವನ್ನು ಜಾಗತಿಕ ವೇದಿಕೆಯಲ್ಲಿ ಪ್ರಸ್ತುತಪಡಿಸಲೂ ಸಹ ಅದರ ಮಹತ್ವವನ್ನು ತಿಳಿದ್ದಿದ್ದೇವೆ. ನವೀನ ಕೌಶಲ್ಯ ಕಾರ್ಯಕ್ರಮದಲ್ಲಿ ಎನ್ಐಎ ಜೊತೆಗೆ ನಮ್ಮ ಸಹಯೋಗವು ವಿಶೇಷ ಮೌಲಿಕ ವಿಷಯಗಳಲ್ಲಿ ಪರಿಣತ ವೃತ್ತಿಪರರಿಗೆ ಪ್ರೋತ್ಸಾಹ ನೀಡುವ ನಮ್ಮ ಧೋರಣೆಯನ್ನು ಬಿಂಬಿಸುತ್ತದೆ. ಕೌಶಲ್ಯಅಭಿವೃದ್ಧಿಯ ಕ್ಷೇತ್ರದಲ್ಲಿ ನಾವು ಅಸೀಮಿತ ಅವಕಾಶಗಳನ್ನು ಬೆಂಬಲಿಸುತ್ತೇವೆ ಜೊತೆಗೆ ಉನ್ನತಿ ಉತ್ಕೃಷ್ಟತೆಯು ನಮ್ಮ ದೇಶದ ಉನ್ನತಿಯ ದೃಷ್ಟಿಕೋನದ ಜೊತೆಗೆ ಹೊಂದುತ್ತದೆಎಂಬುವುದನ್ನು ತಿಳಿದು ಕಠಿಣ ಕಠಿಣವಾದ ಮಾನದಂಡಗಳು ಮತ್ತು ಮೌಲ್ಯಮಾಪನಗಳನ್ನುನಿರ್ವಹಿಸುವ ಬದ್ಧತೆಯಲ್ಲಿ ನಾವು ದೃಢವಾಗಿದ್ದೇವೆ.
ಕಾರ್ಯಕ್ರಮದಲ್ಲಿ ಪ್ರಮಾಣಪತ್ರವನ್ನು ಪಡೆಯುವ ಅಭ್ಯರ್ಥಿಗಳು, ಸದ್ಯದಲ್ಲಿ ನಡೆಯುತ್ತಿರುವ ಡಿಜಿಟಲೀಕರಣ ಯೋಜನೆಗಳಿಗೆ ದಕ್ಷತೆಯಿಂದ ತಮ್ಮ ಕೊಡುಗೆ ನೀಡಲು, ಐತಿಹಾಸಿಕ ದಾಖಲೆಗಳನ್ನು ಪಡೆದುಕೊಳ್ಳುವುದನ್ನು ಸುಧಾರಿಸಲು ಮತ್ತು ದೀರ್ಘಕಾಲದ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯನ್ನು ಮಾಡಲು ಸುಸಜ್ಜಿತರಾಗಿರುತ್ತಾರೆ. ಹೆಚ್ಚುವರಿಯಾಗಿ, ಇದು ರಾಜ್ಯ ಮಟ್ಟದ ಸಂಸ್ಥೆಗಳಲ್ಲಿ ಯುವಕರಿಗೆ ಉದ್ಯೋಗಾವಕಾಶದ ಅವಕಾಶಗಳನ್ನು ಹೆಚ್ಚಿಸುತ್ತದೆ, ಆ ಮೂಲಕ ಸಮಾಜಕ್ಕೆ ದೊಡ್ಡಪ್ರಮಾಣದಲ್ಲಿ ಲಾಭವಾಗುತ್ತದೆ. ಇದು ಡಿಜಿಟಲೀಕರಣದ ಹೆಚ್ಚುತ್ತಿರುವ ಬೇಡಿಕೆ ಮತ್ತುದೇಶದ ಜನರಿಗೆ ಪೌರಾಣಿಕ ದಾಖಲೆಗಳ ವಲಯದ ಮಾಹಿತಿಗಳು ನಾಗರಿಕರಿಗೆ ಸುಲಭವಾಗಿಸಿಗುವಂತೆ ಮಾಡುವುದು ಸರ್ಕಾರದ ಗುರಿಯಾಗಿದೆ.
ಅಗತ್ಯ ಕೌಶಲ್ಯಗಳನ್ನು ಪಡೆಯುವುದರಿಂದ ಭಾರತದ ರಾಷ್ಟ್ರೀಯ ಪತ್ರಾಗಾರ ಮತ್ತು ಶಾಸನಗಳ ಡಿಜಿಟಲೀಕರಣ ಪ್ರಯತ್ನದಲ್ಲಿ ಸಾಗುತ್ತಿರುವ ರಾಜ್ಯ ಮಟ್ಟದ ಸಂಘಟನೆಗಳಲ್ಲಿ ಅಭ್ಯರ್ಥಿಗಳ ಕೆಲಸ ಪಡೆಯುವ ಅರ್ಹತೆಯೂ ಹೆಚ್ಚುತ್ತದೆ. ಸಹಭಾಗಿಗಳಿಗೆ ಪುನರುಜ್ಜೀವನಗೊಳಿಸುವ ತಂತ್ರಗಳು, ದಾಖಲಾತೀಕರಣ ಮತ್ತು ಅದರ ನಿರ್ವಹಣೆಯಲ್ಲಿ ಪರಿಣತಿಯನ್ನು ಹೊಂದುವರು ಹಾಗೂ ಆ ಮೂಲಕ ಇವರು ಪತ್ರಾಗಾರ ಕ್ಷೇತ್ರದಲ್ಲಿ ಅಮೂಲ್ಯವಾದ ಆಸ್ತಿಯಾಗುತ್ತಾರೆ.
ಪೌರಾಣಿಕ ದಾಖಲೆಗಳ ಸಂರಕ್ಷಕರು ಐತಿಹಾಸಿಕ ಮತ್ತು ಮೌಲ್ಯಯುತ ದಾಖಲೆಗಳ ಸಂರಕ್ಷಣೆ, ಪುನರುಜ್ಜೀವನಗೊಳಿಸುವುದು ಮತ್ತು ಕಾಪಾಡುವ ಹೊಣೆಯನ್ನು ಹೊಂದಿರುತ್ತಾರೆ. ಈ ದಾಖಲೆಗಳಲ್ಲಿ ತಾಳೆಗರಿಗಳು, ಪುಸ್ತಕಗಳು, ನಕ್ಷೆಗಳು, ಭಾವಚಿತ್ರಗಳು, ಆಡಿಯೋ ರಿಕಾರ್ಡಿಂಗ್, ಡಿಜಿಟಲ್ ಫೈಲ್ ಮತ್ತು ಇತರ ಪೌರಾಣಿಕ ದಾಖಲೆಗಳಂತಹ ವ್ಯಾಪಕವಾದ ಸಾಮಗ್ರಿಯೂ ಒಳಗೊಂಡಿರುತ್ತದೆ. ಕೌಶಲ್ಯವನ್ನು ಹೊಂದಿದ ಸಂರಕ್ಷಕ, ದಾಖಲೆಗಳನ್ನು ಗುರುತಿಸುವುದು, ನಿರ್ವಹಿಸುವುದು ಮತ್ತು ಕಾಪಾಡುವಿಕೆ ಹಾಗೂ ಪುನರುಜ್ಜೀವನಗೊಳಿಸುವಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ.
ತಂತ್ರಜ್ಞಾನ ಮತ್ತು ಸಹಯೋಗದ ಶಕ್ತಿಯನ್ನು ಬಳಸಿಕೊಂಡು, ಭಾರತದ ರಾಷ್ಟ್ರೀಯ ಪತ್ರಾಗಾರ ಇಲಾಖೆಯು ಭೌಗೋಳಿಕ ಗಡಿಯನ್ನು ಮೀರಿ ನಮಮ್ ಸಮಗ್ರ ಇತಿಹಾಸದ ಆಳವಾದ ಜ್ಞಾನ ಮತ್ತು ಭವಿಷ್ಯದ ಪೀಳಿಗೆಯನ್ನು ಸಶಕ್ತಗೊಳಿಸುವ ಒಂದು ಜೀವಂತ ಡಿಜಿಟಲ್ ಭಂಡಾರವನ್ನು ಸೃಷ್ಟಿಸುವ ಯೋಜನೆಯನ್ನು ಹೊಂದಿದೆ. ಕಾರ್ಯಕ್ರಮವು ಸಾಂದರ್ಭಿಕ ಮಾನದಂಡಗಳನ್ನು ಮತ್ತು ನಿರ್ದೇಶಗಳನ್ನು ಪಾಲನೆಯನ್ನು ಸುನಿಶ್ಚಿತಗೊಳಿಸುತ್ತಾ ದಾಖಲೆಗಳ ಅಖಂಡತೆ, ಪ್ರಾಮಾಣಿಕತೆ ಮತ್ತು ಸುರಕ್ಷತೆಯನ್ನು ಕಾಪಾಡುವುದರ ಪ್ರಾಮುಖ್ಯತೆಯ ಮೇಲೆಯೂ ಒತ್ತು ನೀಡಲಾಗುವುದು.