ಮಂಗಳೂರು: ಯಾವಾಗಲೂ ಧರ್ಮಯುದ್ಧದಲ್ಲಿ ಮಂಜುನಾಥನ ದರ್ಶನ ಪಡೆಯುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮಾತು ಬಿಡದ ಮಂಜುನಾಥ, ಕಾಸು ಬೆಳೆದ ತಿಮ್ಮಪ್ಪ ಅಂತಾ ಮಾತಿದೆ. ನನ್ನ ಜೀವನದಲ್ಲಿ ಮಂಜುನಾಥ, ಈಶ್ವರ, ಗಂಗಾಧರ ಅಜ್ಜ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ.ಹಾಗಾಗಿ ಈ ಯುದ್ಧ ಆರಂಭಿಸುವ ಮುನ್ನ ಮಂಜುನಾಥ ಸ್ವಾಮಿ ಅಣ್ಣಪ್ಪಸ್ವಾಮಿ ದರ್ಶನ ಮಾಡಿ, ಆಶೀರ್ವಾದ ಪಡೆದು ಹೋಗೋ ಪದ್ಧತಿ, ಪರಂಪರೆ ಇಟ್ಟುಕೊಂಡಿದ್ದೇನೆ.
ಅದಕ್ಕೋಸ್ಕರ ಇವತ್ತು ಇಲ್ಲಿಗೆ ಬಂದು ಮಂಜುನಾಥನ ದರ್ಶನ ಪಡೆದು ಹೊರಡುತ್ತಿದ್ದೇನೆ. ಮಂಜುನಾಥ ಸ್ವಾಮಿ ಧರ್ಮಸ್ಥಳದ ಶಕ್ತಿ ಅಂದರೆ ಮಾತು ಬಿಡದ ಮಂಜುನಾಥ.
ನಾವು ಪಂಚ ಗ್ಯಾರೆಂಟಿಗಳನ್ನು ಕೊಟ್ಟ ಮಾತಿನಂತೆ ಉಳಿಸಿಕೊಂಡಿದ್ದೇವೆ.ಇನ್ನು ಹೆಚ್ಚಿಗೆ ಶಕ್ತಿ ಕೊಡಿ ಅಂತ ಹೇಳಿ ಆ ಭಗವಂತನಲ್ಲಿ ಪ್ರಾರ್ಥನೆ ಮಾಡಲು ಬಂದಿದ್ದೇನೆ.
ನುಡಿದಂತೆ ನಡೆಯಲು ಆ ದೇವರು ಶಕ್ತಿ ಕೊಟ್ಟಿದ್ದಾನೆ ಇದು ನಮ್ಮ ಭಾಗ್ಯ.ಇನ್ನು ಜನ ತೀರ್ಮಾನ ಮಾಡುತ್ತಾರೆ.ಎಲ್ಲ ಹೆಣ್ಣು ಮಕ್ಕಳು ಫ್ರೀಯಾಗಿ ಬಂದಿದ್ದಾರೆ.
ಎಲ್ಲಾ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟುವಾಗುತ್ತಿದೆ.ಎಲ್ಲರೂ ತೀರ್ಥಯಾತ್ರೆ ಧರ್ಮ ಯಾತ್ರೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಆ ಜನ ಕೊಟ್ಟ ಶಕ್ತಿ.
ಅವರಿಗೆ ಋಣವನ್ನು ತಿಳಿಸಿದ್ದೇವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ಬಳಿಕ ಡಿಕೆಶಿ ಹೇಳಿದರು.