ಮಳೆಗಾಲ ಬಂತೆಂದರೆ ಸುತ್ತಮುತ್ತಲಿನ ತಾಪಮಾನವು ಕಡಿಮೆಯಾಗುತ್ತದೆ. ಮಾತ್ರವಲ್ಲ ವಾತಾವರಣದಲ್ಲಿ ತೇವಾಂಶದ ಪ್ರಮಾಣವು ಹೆಚ್ಚಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ.
ಮಳೆಗಾಲದಲ್ಲಿ ಫ್ರಿಡ್ಜ್ ಅನ್ನು ಸರಿಯಾದ ತಾಪಮಾನದಲ್ಲಿ ಇಡುವುದು ಅವಶ್ಯಕ. ಇದರಿಂದ ಫ್ರಿಡ್ಜ್ ನಲ್ಲಿ ಇಟ್ಟಿರುವ ವಸ್ತುಗಳು ತಂಪಾಗಿ, ತಾಜಾ ಮತ್ತು ಸುರಕ್ಷಿತವಾಗಿ ಉಳಿಯುತ್ತವೆ. ಮಳೆಗಾಲದಲ್ಲಿ ಹೊರಗಿನ ತಾಪಮಾನದಲ್ಲಿ ಬದಲಾವಣೆಯಾಗುತ್ತದೆ.
ಮಳೆಗಾಲದಲ್ಲಿ ಫ್ರಿಡ್ಜ್ನ ತಾಪಮಾನ ಹೇಗಿರಬೇಕು
ಮಳೆಗಾಲ ಬಂತೆಂದರೆ ಸುತ್ತಮುತ್ತಲಿನ ತಾಪಮಾನವು ಕಡಿಮೆಯಾಗುತ್ತದೆ. ಮಾತ್ರವಲ್ಲ ವಾತಾವರಣದಲ್ಲಿ ತೇವಾಂಶದ ಪ್ರಮಾಣವು ಹೆಚ್ಚಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ, ಈ ಆರ್ದ್ರತೆಯ ಋತುವಿನಲ್ಲಿ, ಆಹಾರ ಪದಾರ್ಥಗಳನ್ನು ದೀರ್ಘಕಾಲದವರೆಗೆ ತಾಜಾವಾಗಿ ಉಳಿಯುವಂತೆ ಮಾಡಬೇಕಾದರೆ ಫ್ರಿಜ್ ತಾಪಮಾನವನ್ನು ಸರಿಯಾಗಿ ಹೊಂದಿಸಿಕೊಳ್ಳುವುದು ಬಹಳ ಮುಖ್ಯ.
ಇಷ್ಟೇ ಡಿಗ್ರಿ ಇರಲಿ ತಾಪಮಾನ :
ಸ್ಯಾಮ್ಸಂಗ್ನ ಬ್ಲಾಗ್ ಪೋಸ್ಟ್ ಮಾನ್ಸೂನ್ನಲ್ಲಿ ತಮ್ಮ ಫ್ರಿಜ್ಗಳಿಗೆ ಸೂಕ್ತವಾದ ತಾಪಮಾನವು 3 ಡಿಗ್ರಿ ಸೆಲ್ಸಿಯಸ್ ಎಂದು ಹೇಳುತ್ತದೆ. ಈ ತಾಪಮಾನದಲ್ಲಿ ರೆಫ್ರಿಜರೇಟರ್ ನಲ್ಲಿ ಇರಿಸಲಾದ ಆಹಾರ ಪದಾರ್ಥಗಳು ಬಹಳ ಸಮಯದವರೆಗೆ ತಾಜಾವಾಗಿ ಉಳಿಯುತ್ತದೆ ಎಂದು ಹೇಳಾಗಿದೆ. ಇದರಿಂದ ಬಹಳ ಸಮಯದವರೆಗೆ ನಿಮ್ಮ ನೆಚ್ಚಿನ ಆಹಾರವನ್ನು ಆನಂದಿಸಬಹುದು. ಮಾನ್ಸೂನ್ ಅಥವಾ ಇತರ ಯಾವುದೇ ಋತುವಿನಲ್ಲಿ ಫ್ರಿಜ್ ತಾಪಮಾನವು 1.7 ಡಿಗ್ರಿಯಿಂದ 3.3 ಡಿಗ್ರಿಗಳ ನಡುವೆ ಇರಬೇಕು ಎನ್ನುತ್ತಾರೆ ತಜ್ಞರು.
ಬ್ಯಾಕ್ಟೀರಿಯಾ ಬೆಳೆಯುವುದನ್ನು ತಡೆಯಲು ಈ ತಾಪಮಾನವನ್ನು ಬಳಸಲಾಗುತ್ತದೆ. ಈ ತಾಪಮಾನದಲ್ಲಿ ಇರಿಸಲಾದ ರೆಫ್ರಿಜರೇಟರ್ ನಿಮ್ಮ ಆಹಾರವನ್ನು ತಾಜಾವಾಗಿಡಲು ಸಹಾಯ ಮಾಡುತ್ತದೆ ಮತ್ತು ಅದರ ರುಚಿ ಕಡಿಮೆಯಾಗುವುದಿಲ್ಲ.
ಫ್ರಿಜ್ ನ ತಾಪಮಾನವನ್ನು 5 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ಇಡುವುದು ಸೂಕ್ತ. ಆಹಾರ ಪದಾರ್ಥಗಳನ್ನು ತಾಜಾ ಮತ್ತು ಸುರಕ್ಷಿತವಾಗಿಡಲು ಈ ತಾಪಮಾನವು ಮಾನ್ಸೂನ್ ಅಥವಾ ಇತರ ವಾತಾವರಣದಲ್ಲಿ ಪರಿಪೂರ್ಣವಾಗಿರುತ್ತದೆ. ಇದು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಆಹಾರವು ತಾಜಾ ಮತ್ತು ರುಚಿಕರವಾಗಿರುತ್ತದೆ.