ಬೇಕಾಗುವ ಸಾಮಗ್ರಿಗಳು:
ಎಳೆನೀರು ½ ಗ್ಲಾಸ್
ಎಳೆ ನೀರಿನ ಒಳಗೆ ಇರುವ ಗಂಜಿ ಒಂದು ಬೌಲ್
ಹಾಲು ½ ಲೀಟರ್
ಸಕ್ಕರೆ ಒಂದು ಗ್ಲಾಸ್
ಕಾರ್ನ್ ಫ್ಲೋರ್ ಎರಡು ಸ್ಪೂನ್
ಮಾಡುವ ವಿಧಾನ: ಅರ್ಧ ಲೀಟರ್ ಹಾಲನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು. ಹಾಲು ಕುದಿಯುತ್ತಿರುವಾಗ ಸಮಯದಲ್ಲಿ ಒಂದು ಮಿಕ್ಸಿ ಜಾರಿಗೆ ಎಳೆನೀರಿನ ಗಂಜಿ ಮತ್ತು ಸ್ವಲ್ಪ ಎಳನೀರು ಹಾಕಿ ಪೇಸ್ಟ್ ಆಗುವ ರೀತಿ ರುಬ್ಬಿಕೊಳ್ಳಬೇಕು. ಹಾಲನ್ನುಚಿಕ್ಕ ಉರಿಯಲ್ಲಿ ಇಟ್ಟುಕೊಂಡು ಮಗುಚುತ್ತಾ ಇರಬೇಕು ಇನ್ನೂ ಮೂರು ನಾಲ್ಕು ನಿಮಿಷ ಕುದಿಸಿಕೊಂಡು ಅದಕ್ಕೆ ಒಂದು ಗ್ಲಾಸ್ ಆಗುವಷ್ಟು ಸಕ್ಕರೆಯನ್ನು ಹಾಕಿ ಅದನ್ನು ತಿರುಗಿಸಿಕೊಳ್ಳುತ್ತಿರಬೇಕು. ಸಣ್ಣ ಉರಿಯಲ್ಲಿ ಇದನ್ನು ಕುದಿಸುತ್ತಾ ಮೊದಲೇ ತಯಾರಿಸಿಕೊಂಡಿರುವ ಎಳೆ ನೀರಿನ ಗಂಜಿ ಪೇಸ್ಟ್ ಅನ್ನು ಈ ಕುದಿಯುತ್ತಿರುವ ಹಾಲಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಎರಡು ನಿಮಿಷ ಹಾಗೇ ಬಿಟ್ಟು ನಂತರ ಅದಕ್ಕೆ ಕಾರ್ನ್ ಫ್ಲೋರ್ ಮಿಶ್ರಣವನ್ನು ಹಾಕಿ ಗಂಟು ಆಗದ ಹಾಗೇ ಮಗುಚಬೇಕು. ಹಾಲು ಸ್ವಲ್ಪ ದಪ್ಪವಾಗುತ್ತಾ ಹೋಗುತ್ತದೆ ಮೂರು ನಿಮಿಷ ಹಾಗೆ ಮಗುಚುತ್ತಿದ ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ. ತಣ್ಣಗಾಗುತ್ತಿರುವ ಕೂಡ ಅದನ್ನು ಮಗುಚುತ್ತಾ ಇರಬೇಕು. ಪೂರ್ತಿಯಾಗಿ ತಣ್ಣಗಾದ ಮೇಲೆ ಅದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಮೇಲಿಂದ ಅಲ್ಯೂಮಿನಿಯಂ ಪೇಪರ್ ನಿಂದ ಸ್ವಲ್ಪವೂ ಗಾಳಿ ಹೋಗದ ರೀತಿಯಲ್ಲಿ ಅದನ್ನು ಮುಚ್ಚಿ ಮೂರು ಗಂಟೆಗಳ ಕಾಲ ಡೀಪ್ ಫ್ರೀಜರ್ ನಲ್ಲಿ ಇಡಬೇಕು. 3 ಗಂಟೆಯಾದ ಮೇಲೆ ಅದನ್ನು ತೆಗೆದು ಮಿಕ್ಸಿ ಜಾರಿಗೆ ಹಾಕಿ ಮತ್ತೊಮ್ಮೆ ಪೇಸ್ಟ್ ಮಾಡಿಕೊಂಡು ಮತ್ತೆ ಅದೇ ರೀತಿ ಬೌಲಿನಲ್ಲಿ ಹಾಕಿ ಒಂದು ರಾತ್ರಿ ಇಡಿ ಡೀಪ್ ಫ್ರೀಜರ್ ನಲ್ಲಿ ಇಟ್ಟು ಬೆಳಗ್ಗೆ ಎದ್ದು ನೋಡಿದರೆ ಟೆಸ್ಟ್ ಟೇಸ್ಟಿಯಾದ ಎಳೆನೀರು ಐಸ್ ಕ್ರೀಮ್ ಸವಿಯಲು ಸಿದ್ಧ