ಬೆಂಗಳೂರು : ಭಾರತದಲ್ಲಿ ಸ್ಯಾಮ್ ಸಂಗ್ ಬ್ರ್ಯಾಂಡ್ನ ಉಚಿತ ಜಾಹೀರಾತು-ಬೆಂಬಲಿತ ಸ್ಟ್ರೀಮಿಂಗ್ ಟಿವಿ (ಫಾಸ್ಟ್) ಸೇವೆ ಆಗಿರುವ ಸ್ಯಾಮ್ಸಂಗ್ ಟಿವಿ ಪ್ಲಸ್ ತನ್ನ ಚಾನಲ್ ಗಳ ಪಟ್ಟಿಗೆ ಹೊಸತಾಗಿ ಆಜ್ ತಕ್ ಎಚ್ಡಿ ಮತ್ತು ದಿ ಲಲ್ಲನ್ಟಾಪ್ ಎಂಬ ಎರಡು ಚಾನಲ್ ಗಳನ್ನು ಸೇರ್ಪಡೆಗೊಳಿಸುತ್ತಿರುವುದಾಗಿ ಘೋಷಿಸಿದೆ.
ಸ್ಯಾಮ್ಸಂಗ್ ಟಿವಿ ಪ್ಲಸ್ ಮತ್ತು ಟಿವಿ ಟುಡೇ ನೆಟ್ವರ್ಕ್ ಸಹಭಾಗಿತ್ವದ ಮೂಲಕ ಈ ಚಾನಲ್ ಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಚಾನಲ್ ಗಳು ಹೊಸ ಕಾಲದ ವೀಕ್ಷಕರ ಅಗತ್ಯಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ಒದಗಿಸಲಿವೆ.
ಟಿವಿ ಟುಡೆ ನೆಟ್ವರ್ಕ್ನ ಫಾಸ್ಟ್ ಚಾನಲ್ ಗಳಾದ ದಿ ಲಲ್ಲನ್ಟಾಪ್ ಮತ್ತು ಆಜ್ ತಕ್ ಎಚ್ಡಿ ಚಾನಲ್ ಗಳು ಪ್ರೇಕ್ಷಕರಿಗೆ ಮನೆಯಲ್ಲಿ ದೊಡ್ಡ ಪರದೆಯಲ್ಲಿ ಉಚಿತ ಕಾರ್ಯಕ್ರಮಗಳನ್ನು ನೋಡಲು ಅನುವು ಮಾಡಿ ಕೊಡುತ್ತದೆ. ಬಹುತೇಕ ಕುಟುಂಬಗಳು ಇಂಟರ್ ನೆಟ್ ಆಧರಿತ ಸ್ಮಾರ್ಟ್ ಟಿವಿಗಳನ್ನು ಖರೀದಿ ಮಾಡುತ್ತಿರುವುದರಿಂದ ಇಂಟರ್ ನೆಟ್ ಕನೆಕ್ಟೆಡ್ ಟಿವಿಗಳ ಸಂಖ್ಯೆ ಭಾರತದಲ್ಲಿ ಹೆಚ್ಚುತ್ತಲೇ ಇದೆ. ಹಾಗಾಗಿ ಅವರಿಗೆ ಉತ್ತಮ ಕಾರ್ಯಕ್ರಮ ಒದಗಿಸುವ ನಿಟ್ಟಿನಲ್ಲಿ ಸ್ಯಾಮ್ ಸಂಗ್ ಹೊಸತಾಗಿ ಎರಡು ಚಾನಲ್ ಗಳನ್ನು ಒದಗಿಸಿದೆ.
ಈ ಕುರಿತು ಮಾತನಾಡಿದ ಸ್ಯಾಮ್ ಸಂಗ್ ಟಿವಿ ಪ್ಲಸ್ ಇಂಡಿಯಾದ ಪಾರ್ಟನರ್ ಶಿಪ್ ವಿಭಾಗ ಮುಖ್ಯಸ್ಥರಾದ ಕುನಾಲ್ ಮೆಹ್ತಾ ಅವರು, “ಸ್ಯಾಮ್ ಸಂಗ್ ಟಿವಿ ಪ್ಲಸ್ ಪ್ಲಾಟ್ಫಾರ್ಮ್ನಲ್ಲಿ ಪ್ರೇಕ್ಷಕರು ಮತ್ತು ಜಾಹೀರಾತುದಾರರಿಗೆ ಅತ್ಯುತ್ತಮ ಅವಕಾಶಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಆಜ್ ತಕ್ ಎಚ್ಡಿ ಮತ್ತು ದಿ ಲಲ್ಲನ್ಟಾಪ್ ಚಾನಲ್ಗಳ ಸೇರ್ಪಡೆಯಿಂದ ಬಿಸಿನೆಸ್, ರಾಜಕೀಯ ಜಗತ್ತಿನ ಸುದ್ದಿಗಳನ್ನು ತಿಳಿಯಬಹುದಾಗಿದೆ ಮತ್ತು ಹೆಚ್ಚು ಮನರಂಜನೆಯ ಜಗತ್ತಿಗೆ ಪ್ರವೇಶಿಸಬಹುದಾಗಿದೆ. ಟಿವಿ ಟುಡೇ ನೆಟ್ವರ್ಕ್ ಜೊತೆಗಿನ ಈ ಪಾಲುದಾರಿಕೆಯು ಉತ್ತಮ ಕಾರ್ಯಕ್ರಮ ಒದಗಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ” ಎಂದು ಹೇಳಿದ್ದಾರೆ.
ಟಿವಿ ಟಿಎನ್ ಡಿಜಿಟಲ್ ಬಿಸಿನೆಸ್ ವಿಭಾಗದ ಸಿಇಓ ಸಲೀಲ್ ಕುಮಾರ್ ಅವರು, “ಸ್ಯಾಮ್ಸಂಗ್ ಟಿವಿ ಪ್ಲಸ್ ಇಂಡಿಯಾದಲ್ಲಿ ನಮ್ಮ ಎರಡು ಹೊಸ ಫಾಸ್ಟ್ ಚಾನೆಲ್ಗಳನ್ನು ಬಿಡುಗಡೆ ಮಾಡಲು ನಾವು ಸಂತೋಷ ಪಡುತ್ತೇವೆ. ಈ ಪಾಲುದಾರಿಕೆಯು ನಮಗೆ ಒಂದು ಮಹತ್ವದ ಮೈಲಿಗಲ್ಲಾಗಿದೆ. ನಮ್ಮ ಅತ್ಯುತ್ತಮ ಕಾರ್ಯಕ್ರಮಗಳನ್ನು ಅತ್ಯಂತ ಜನಪ್ರಿಯ ವೇದಿಕೆಯ ಮೂಲಕ ವಿಶಾಲವಾದ ಪ್ರೇಕ್ಷಕ ಸಮೂಹಕ್ಕೆ ಒದಗಿಸಲು ಈ ಸಹಯೋಗ ಅನುವು ಮಾಡಿಕೊಡುತ್ತದೆ. ಇಂಟರ್ ನೆಟ್ ಕನೆಕ್ಟೆಡ್ ಟಿವಿ ಸೌಲಭ್ಯ ಹೊಂದಿರುವ ವೀಕ್ಷಕರಿಗೆ ಹಲವಾರು ಆಯ್ಕೆಗಳು ಲಭ್ಯವಿದ್ದರೂ ನಮ್ಮ ಈ ಸಹಯೋಗವು ನಮ್ಮ ಪ್ರೇಕ್ಷಕ ಸಮೂಹವನ್ನು ವಿಸ್ತರಿಸಿಕೊಳ್ಳಲು ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಬಯಸುವವರಿಗೆ ಹೊಸ ಕಾರ್ಯಕ್ರಮಗಳನ್ನು ಒದಗಿಸಲು ನೆರವಾಗುತ್ತದೆ” ಎಂದು ಹೇಳಿದರು.
ಸ್ಯಾಮ್ ಸಂಗ್ ಟಿವಿ ಪ್ಲಸ್ ಈಗಾಗಲೇ ಭಾರತದಾದ್ಯಂತ ಇರುವ ಲಕ್ಷಾಂತರ ಬಳಕೆದಾರರಿಗೆ 100ಕ್ಕೂ ಹೆಚ್ಚು ಫಾಸ್ಟ್ ಲೈವ್ ಚಾನೆಲ್ಗಳು ಮತ್ತು ಸಾವಿರಾರು ಆನ್-ಡಿಮಾಂಡ್ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ಉಚಿತವಾಗಿ ಒದಗಿಸುತ್ತದೆ.