ಹೊಟೇಲ್ ಗೆ ಹೋಗಿ ಊಟ ಮಾಡುವಾಗ ನಾವು ಬೆಲೆ ಲೆಕ್ಕ ಮಾಡ್ತೇವೆ. ಅದೇ ಮನೆಯಲ್ಲಿ ಸಿದ್ಧವಾಗುವ ಆಹಾರಕ್ಕೆ ಲೆಕ್ಕವೇ ಇಡೋದಿಲ್ಲ. ದಿನದಲ್ಲಿ ಮೂರು ಹೊತ್ತು ಆಹಾರ ಸೇವನೆ ಮಾಡುವ ನಾವು, ಟೊಮೇಟೊ, ಬೇಳೆಕಾಳು, ಹಿಟ್ಟು, ಅಕ್ಕಿ ಬೆಲೆ ಏರಿಕೆಯಾಗಿದೆ ಎಂದು ನೆನಪಿಡುವುದಿಲ್ಲ. ಬರೀ ತರಕಾರಿ, ಬೇಳೆ ಕಾಳುಗಳು ಮಾತ್ರವಲ್ಲ ಎಲ್ಲವೂ ಬೆಲೆ ಗಗನಕ್ಕೆರಿದೆ. ಇನ್ನೂ ನೀವು ಹೋಟೆಲ್ ಗೆ ಹೋದರೆ ಒಂದು ಭೋಜನದ ಥಾಲಿಗೆ ತಗಲ್ತಿದ್ದ ವೆಚ್ಚವೂ ಕೂಡ ಹೆಚ್ಚಾಗಿದೆ. ಹಣದುಬ್ಬರದ ಪ್ರಭಾವದಿಂದ ಈಗ ಜನಸಾಮಾನ್ಯರ ಥಾಲಿ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದೆ.
ಸಾಂಬಾರು ಪದಾರ್ಥ ಸೇರಿದಂತೆ ಆಹಾರ ಪದಾರ್ಥಗಳು ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರ ತಟ್ಟೆ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಎರಡು ತಿಂಗಳಲ್ಲಿ ಒಂದು ಪ್ಲೇಟ್ ಆಹಾರ ಪದಾರ್ಥಗಳ ಬೆಲೆ ತೀವ್ರವಾಗಿ ಏರಿದೆ.
ಎಷ್ಟು ಬೆಲೆ ಏರಿಕೆಯಾಗಿದೆ?
ವರದಿಯ ಪ್ರಕಾರ, 2023 ರ ಏಪ್ರಿಲ್ನಲ್ಲಿ ಸಸ್ಯಾಹಾರಿ ಥಾಲಿಯ ಸರಾಸರಿ ಬೆಲೆ ಪ್ರತಿ ಪ್ಲೇಟ್ಗೆ 25.1 ರೂಪಾಯಿ ಹೆಚ್ಚಾಗಿದೆ. ಜೂನ್ನಲ್ಲಿ ಅದು 26.3 ರೂಪಾಯಿಗೆ ಏರಿದೆ. ಏಪ್ರಿಲ್ನಲ್ಲಿ ಮಾಂಸಾಹಾರಿ ಥಾಲಿಯ ಬೆಲೆ 58.3 ರೂಪಾಯಿ ಹೆಚ್ಚಾಗಿತ್ತು. ಜೂನ್ನಲ್ಲಿ ಅದ್ರ ಬೆಲೆ 60 ರೂಪಾಯಿ ಗೆ ಏರಿದೆ. ಟೊಮೆಟೊ, ಬೇಳೆಕಾಳುಗಳು, ಮಸಾಲೆಗಳು ಮತ್ತು ಸಿರಿಧಾನ್ಯಗಳ ಬೆಲೆ ಏರಿಕೆಯಿಂದಾಗಿ, ಆಹಾರದ ಪ್ಲೇಟ್ ಕೂಡ ದುಬಾರಿಯಾಗಿ ಬಿಟ್ಟಿದೆ.
150 ರೂಪಾಯಿ ದಾಟಿದೆ ಟೊಮೆಟೊ ಬೆಲೆ:
ಟೊಮೆಟೊ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಜೂನ್ನಿಂದ ಇಲ್ಲಿಯವರೆಗೆ ಟೊಮೆಟೊ ಬೆಲೆ ಕೆಜಿಗೆ 60 ರಿಂದ 100 ರೂಪಾಯಿಗೆ ಏರಿಕೆಯಾಗಿದೆ. ದೆಹಲಿಯಲ್ಲಿ ಜೂನ್ನಲ್ಲಿ ಪ್ರತಿ ಕೆಜಿಗೆ 20 ರೂಪಾಯಿ ಇದ್ದ ಟೊಮೆಟೊ ಚಿಲ್ಲರೆ ದರ ಇದೀಗ ಕೆಜಿಗೆ 110 ರೂಪಾಯಿ ತಲುಪಿದೆ. ಮಳೆಯಿಂದಾಗಿ ಮಾರುಕಟ್ಟೆಗೆ ಬರುತ್ತಿರುವ ಟೊಮೆಟೊ ಕಡಿಮೆಯಾದ ಕಾರಣ ಕೆಲ ರಾಜ್ಯಗಳಲ್ಲಿ ಟೊಮೆಟೊ ದರ ಕೆಜಿಗೆ 250 ರೂಪಾಯಿಯಾಗಿದೆ.
ಧಾನ್ಯಗಳ ಬೆಲೆಯಲ್ಲಿ ಹೆಚ್ಚಳ:
ಜೂನ್ ತಿಂಗಳಿನಲ್ಲಿ ಧಾನ್ಯಗಳ ಬೆಲೆಯಲ್ಲೂ ಏರಿಕೆ ಆಗುತ್ತಿರುವುದು ಕಂಡು ಬಂದಿದೆ. ತೊಗರಿ ಬೇಳೆ ಹಾಗೂ ಕಡಲೆ ಬೆಳೆ ಬೆಳೆಯಲ್ಲೂ ಹೆಚ್ಚಳವಾಗಿದೆ. ಈ ಎರಡರ ಬೆಲೆಗಳು ಶೇಕಡಾ 3ರಷ್ಟು ಏರಿಕೆಯಾಗಿದೆ. ಇದರಿಂದ ಹೋಟೆಲ್ ನ ಆಹಾರ ಪದಾರ್ಥಗಳು ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದೆ.
ಪ್ರತಿಯೊಂದು ಆಹಾರ ಪದಾರ್ಥಗಳ ಬೆಲೆ ಹೆಚ್ಚಾದ ಹಾಗೆ ನಮಗೆ ಮನೆಯಲ್ಲಿ ತಯಾರಿಸುವ ಆಹಾರವಾಗಲಿ ಹೋಟೆಲ್ ನಲ್ಲಿ ತಿನ್ನುವ ಆಹಾರದ ಬೆಲೆಯಾಗಲಿ ಹೆಚ್ಚಾಗಲೇಬೇಕು ಅಲ್ಲವೇ? ಅದಕ್ಕಾಗಿ ನಾವು ಮಿತವಾಗಿ ಆಹಾರದ ಸೇವನೆ ಮಾಡಬೇಕು ಎಷ್ಟು ಬೇಕೋ ಅಷ್ಟೇ ಬಡಿಸಿಕೊಂಡು ಊಟವನ್ನು ತಿನ್ನಬೇಕು ಯಾವುದೇ ಆಹಾರ ಪದಾರ್ಥಗಳನ್ನು ವ್ಯರ್ಥ ಮಾಡದ ಹಾಗೆ ನೋಡಿಕೊಳ್ಳಬೇಕು.